ಕ್ರಿಕೆಟ್‌ಗಿಂತ ಜನರೇ ಮುಖ್ಯ ಎಂದ ಮುಂಬೈ ಹೈ ಕೋರ್ಟ್

Subscribe to Oneindia Kannada

ಮುಂಬೈ, ಏಪ್ರಿಲ್. 06: 'ಒಂದೆಡೆ ಬರ ತಾಂಡವವಾಡುತ್ತಿದೆ. ಇಂಥ ಸಂದರ್ಭದಲ್ಲಿ ನೀವು ಕ್ರೀಡಾಂಗಣ ದುರಸ್ತಿ ಮಾಡಲು, ಸ್ವಚ್ಛ ಮಾಡಲು ಮನಸೋ ಇಚ್ಛೆ ನೀರು ಬಳಕೆ ಮಾಡುತ್ತಿದ್ದೀರಾ.. ಬೇಕಾದರೆ ಪಂದ್ಯಗಳನ್ನು ಬೇರೆ ರಾಜ್ಯಗಳಿಗೆ ಶಿಫ್ಟ್ ಮಾಡಿ' ಹೀಗೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಹಾಗೂ ಮಹಾರಾಷ್ಟ್ರದ ಕ್ರಿಕೆಟ್ ಸಂಸ್ಥೆಗಳನ್ನು ಬಾಂಬೆ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ನ 9 ನೇ ಆವೃತ್ತಿ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಮೂರು ಕ್ರಿಕೆಟ್ ಮೈದಾನಗಳ ನಿರ್ವಹಣೆಗೆ ಸುಮಾರು 60 ಲಕ್ಷ ಲೀಟರ್ ನೀರು ವ್ಯಯಿಸುತ್ತಿರುವುದನ್ನು ಪ್ರಶ್ನಿಸಿ ‘ಲೋಕಸತ್ತಾ' ಎಂಬ ಎನ್ ಜಿಒ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್‌) ಅರ್ಜಿ ವಿಚಾರಣೆಗೆ ವೇಳೆ ನ್ಯಾಯಾಲಯ ಬುಧವಾರ ಈ ಮಾತು ಹೇಳಿದೆ. [ರಾಜ್ಯದಲ್ಲಿ ಬರ, ಐಪಿಎಲ್ ಪಂದ್ಯಗಳನ್ನು ಶಿಫ್ಟ್ ಮಾಡಿ: ಬಿಜೆಪಿ]

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ipl

ಈ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ವಿ.ಎಂ.ಕಾನಡೆ ಹಾಗೂ ಎಂ.ಎಸ್‌.ಕಾರ್ಣಿಕ್ ಅವರಿದ್ದ ವಿಭಾಗೀಯ ಪೀಠ ನಡೆಸಿತು. ‘ಇಷ್ಟೊಂದು ನೀರನ್ನು ನೀವು(ಬಿಸಿಸಿಐ ಹಾಗೂ ಕ್ರಿಕೆಟ್ ಸಂಸ್ಥೆಗಳು) ಹೇಗೆ ವ್ಯಯಿಸುತ್ತೀರಿ. ಜನರು ಮುಖ್ಯವೋ ಇಲ್ಲವೇ ಐಪಿಎಲ್ ಪಂದ್ಯಗಳೋ? ಜನರ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ ಎಂದು ಕಟುವಾಗಿ ಹೇಳಿದೆ.[ಜಾರಿಗೊಳ್ಳದ ಲೋಧಾ ವರದಿ, ಬಿಸಿಸಿಐಗೆ ಸುಪ್ರೀಂನಿಂದ ತಪರಾಕಿ!]

ವಾಂಖೆಡೆ ಕ್ರೀಡಾಂಗಣಕ್ಕೆ ನೀವು ಎಷ್ಟು ನೀರು ಉಪಯೋಗಿಸುತ್ತೀರಿ ಎಂದು ಮುಂಬೈ ಕ್ರಿಕೆಟ್ ಸಂಸ್ಥೆಯನ್ನು(ಎಂಸಿಎ) ನ್ಯಾಯಾಲಯ ಪ್ರಶ್ನಿಸಿತು. ಇದಕ್ಕೆ ಎಂಸಿಎ ಪರ ವಕೀಲರು, ಆಯೋಜನೆಯಾಗಿರುವ ಏಳು ಐಪಿಎಲ್‌ ಪಂದ್ಯಗಳಿಗೆ 40 ಲಕ್ಷಕ್ಕೂ ಅಧಿಕ ಲೀಟರ್ ನೀರು ಉಪಯೋಗಿಸುವುದಾಗಿ ಉತ್ತರಿಸಿದರು.

ಇದು ಬೃಹತ್ ಪ್ರಮಾಣದ ನೀರು, ಇಂಥ ಅಪವ್ಯಯ ಮಾಡಿ ರೈತರಿಗೆ, ಜನರಿಗೆ ಅನ್ಯಾಯ ಮಾಡಬೇಡಿ ಎಂದು ನ್ಯಾಯಾಲಯ ಕಟುವಾಗಿ ಹೇಳಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rapping the BCCI and cricket associations in Maharashtra and Mumbai over water wastage when the state is reeling under severe drought, the Bombay High Court today said ideally Indian Premier League(IPL) matches should be shifted elsewhere, where there is no water crisis.
Please Wait while comments are loading...