ಆರ್ ಸಿಬಿಗೆ ಮಿಚಲ್ ಸ್ಟಾರ್ಕ್ ಬದಲಿಗೆ ಕ್ರಿಸ್ ಜೋರ್ಡನ್!

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಬೆಂಗಳೂರು, ಏಪ್ರಿಲ್ 26 : ಐಪಿಎಲ್ 2016 ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬೌಲಿಂಗ್ ವಿಭಾಗ ಸಕತ್ ಡಲ್ ಆಗಿರುವುದು ಗುಟ್ಟಾದ ವಿಷಯವೇನಲ್ಲ.ಗಾಯದ ಸಮಸ್ಯೆಯಿಂದಾಗಿ ಮಿಚೆಲ್ ಸ್ಟಾರ್ಕ್, ಸ್ಯಾಮುಯಲ್ ಬದ್ರಿ ತಂಡದಿಂದ ಹೊರಗುಳಿದಿದ್ದಾರೆ. ಹೀಗಾಗಿ ಆರ್ ಸಿಬಿ ಬದಲಿ ಆಟಗಾರರ ಹುಡುಕಾಟದಲ್ಲಿ ತೊಡಗಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಆರ್ ಸಿಬಿ ತಂಡದಲ್ಲಿ ಬೌಲರ್ ಗಳ ಸಮಸ್ಯೆ ಬಗೆಹರಿಯದೆ ಬದಲಾವಣೆಗಳ ಪರ್ವ ಮುಂದುವರೆದಿದೆ. ಇತ್ತೀಚೆಗಷ್ಟೇ ಬದ್ರಿ ಬದಲಿಗೆ ಶಮ್ಸಿ ಅವರನ್ನು ಕರೆತರಲಾಗಿತ್ತು. ಅದರ ಬೆನ್ನಲ್ಲೇ ಮತ್ತೊಂದು ಹೊಸ ಮುಖವನ್ನು ಆರ್ ಸಿಬಿ ಕಣಕ್ಕಿಳಸಲು ಮುಂದಾಗಿದೆ. [ಆರ್ ಸಿಬಿ ತಂಡದಲ್ಲಿ ಬದ್ರಿ ಔಟ್, ತಬ್ರೈಜ್ ಶಮ್ಸಿ ಇನ್]

RCB name Chris Jordan as replacement for injured Mitchell Starc for IPL 9

ಹೌದು, ಗಾಯದಿಂದ ಚೇತರಿಸಿಕೊಳ್ಳದ ವೇಗಿ ಮಿಚಲ್ ಸ್ಟಾರ್ಕ್ ಬದಲಿಗೆ ಇಂಗ್ಲೆಂಡ್ ನ ವೇಗದ ಬೌಲರ್ ಕ್ರಿಸ್ ಜೋರ್ಡನ್ ಅವರನ್ನು ಬುಲಾವ್ ಮಾಡಿಕೊಂಡಿದೆ. ಆದರೆ, ಕ್ರಿಸ್ ಮೇ.6 ರವರೆಗೆ ಮಾತ್ರ ಐಪಿಲ್ ಪಂದ್ಯಗಳನ್ನು ಆಡಲಿದ್ದಾರೆ.

ಇಂಗ್ಲೆಂಡ್ ಹಾಗೂ ಶ್ರೀಲಂಕಾ ನಡುವಿನ ಟೆಸ್ಟ್ ಸರಣಿ ಪ್ರಾರಂಭಗೊಳ್ಳಲಿದೆ. ಆದ್ದರಿಂದ ಕ್ರಿಸ್ ಇಂಗ್ಲೆಂಡ್ ಗೆ ಮರಳಲಿದ್ದಾರೆ. ಇದರಿಂದ ಆರ್ ಸಿಬಿಗೆ ಮತಷ್ಟು ತಲೆ ನೋವಾಗಿ ಪರಿಣಮಿಸಲಿದೆ.

ಬದ್ರಿ ಬದಲಿಗೆ ಸ್ಥಾನ ಗಿಟ್ಟಿಸಿಕೊಂಡ ದಕ್ಷಿಣ ಆಫ್ರಿಕದ ಶಮ್ಸಿ ಆಡಿದ 2 ಪಂದ್ಯಗಳಲ್ಲಿ 36ಕ್ಕೆ 1, 21ಕ್ಕೆ1 ಅಷ್ಟಕಷ್ಟೆ ಪ್ರದರ್ಶನ ನೀಡುತ್ತಿದ್ದಾರೆ. ಬ್ಯಾಟಿಂಗ್ ನಲ್ಲಿ ಬಲಿಷ್ಠವಾಗಿರುವ ಆರ್ ಸಿಬಿ ತಂಡ ಬೌಲಿಂಗ್ ವಿಭಾಗದಲ್ಲಿ ತಂಡವನ್ನು ನಿಭಾಹಿಸಲು ಸೂಕ್ತ ಬೌಲರ್ ಗಳ ಕೊರತೆ ಎದುರಿಸುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
England fast bowler Chris Jordan has been signed up by Royal Challengers Bangalore for the 2016 season, as replacement for Mitchell Starc, who has been ruled out for the whole of the tournament with a foot injury.
Please Wait while comments are loading...