ಶಾನ್ ಮಾರ್ಷ್, ಪಂಜಾಬ್ ತಂಡ ತೊರೆದ ಕಾರಣ ಬಹಿರಂಗ!

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಮೊಹಲಿ, ಮೇ 13 : ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಸ್ಟ್ರೇಲಿಯಾದ ಶಾನ್ ಮಾರ್ಷ್ ಗಾಯದಿಂದ ಐಪಿಲ್ ಟೂರ್ನಿಯಿಂದ ಹೊರ ಹೋಗಿದ್ದಾರೆ ಎನ್ನುವುದು ಹಳೆಯ ಸುದ್ದಿಯಾಗಿದೆ. ಈಗ ಹೊಸ ವಿಷ್ಯಾ ಏನಂದ್ರೆ ಶಾನ್ ಮಾರ್ಷ್ ಗೆ ಏನು ಗಾಯವಾಗಿಲ್ಲ ಆದರೂ ತಂಡದಿಂದ ಹೊರ ಹೋಗಿದ್ದಾರೆ ಏಕೆ? ಎಂಬುವುದನ್ನು ತಿಳಿಯಲು ಮುಂದೆ ಓದಿ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಮೂಲಗಳ ಪ್ರಕಾರ ಶಾನ್ ಮಾರ್ಷ್ ಡ್ರೇಸಿಂಗ್ ರೂಮ್ ನಲ್ಲಿ ಸಹ ಆಟಗಾರರೊಬ್ಬರ ಜೊತೆ ಡಿಶುಂ ಡಿಶುಂ ಆಡಿ ತಂಡದಿಂದ ಹೊರ ಹೋಗಿದ್ದಾರಂತೆ. [ಪ್ರೀತಿ ಜಿಂಟಾ 'ಎಫ್' ಪದ ಬಳಸಿಲ್ಲ, ಅವಾಜ್ ಹಾಕಿಲ್ಲ]

IPL 9: KXIP sent Shaun Marsh back home after dressing room brawl?

ಹೌದು ಕಿಂಗ್ಸ್ XI ತಂಡದ ಮೂಲಗಳು ಹೇಳುವಂತೆ ಮಾರ್ಷ್ ತಮ್ಮ ತಂಡದ ಆಟಗಾರರೊಬ್ಬರ ಜೊತೆ ಡ್ರೆಸಿಂಗ್ ರೂಮಿನಲ್ಲಿ ಜಗಳ ಮಾಡುತ್ತ ಪಂಚ್ ಕೊಟ್ಟಿದ್ದಾರಂತೆ. ಇದರಿಂದ ಗಾಯದ ನೆಪ ಹೇಳಿಕೊಂಡು ತಂಡದಿಂದ ದೂರವಾಗಿದ್ದಾರೆ. ಆದ್ದರಿಂದ ಮಾರ್ಷ್ ಬದಲಿಗೆ ದಕ್ಷಿಣ ಆಫ್ರಿಕಾದ ಹಶೀಂ ಆಮ್ಲಾ ತಂಡಕ್ಕೆ ಸೇರಿಕೊಂಡಿದ್ದಾರೆ.[ಆರ್ ಸಿಬಿ ಸೋಲಿಗೆ ಬೌಲಿಂಗ್ ಕಾರಣವಲ್ಲ: ಕೆಎಲ್ ರಾಹುಲ್]

ಈ ಘಟನೆ ನಡೆದಿದ್ದರಿಂದ ಬೇಸತ್ತ ಕಿಂಗ್ಸ್ ಇಲೆವೆನ್ ತಂಡದ ನಾಯಕರಾಗಿದ್ದ ದಕ್ಷಿಣ ಆಫ್ರಿಕದ ಡೇವಿಡ್ ಮಿಲ್ಲರ್ ತಮ್ಮ ಕ್ಯಾಪ್ಟನ್ ಸ್ಥಾನದಿಂದ ಕೆಳಗಿಳಿದು ಮುರುಳಿ ವಿಜಯ್ ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ವಹಿಸಿದ್ದಾರೆ ಎನ್ನಲಾಗಿದೆ.

ಅತ್ತ ತಂಡದಲ್ಲಿ ಕಿತ್ತಾಟಗಳು ನಡೆದರೆ ಇತ್ತ ಕಿಂಗ್ಸ್ ತಂಡ ಸತತ ಸೋಲುತ್ತಿರುವುದರಿಂದ ಒಡತಿ ಪ್ರೀತಿ ಝಿಂಟಾ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಪಂಜಾಬ್ ಆಡಿರುವ 10 ಪಂದ್ಯಗಳಲ್ಲಿ ಕೇವಲ 3 ರಲ್ಲಿ ಗೆದ್ದು ಅಂಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದ್ದು ಪಂಜಾಬ್ ಗೆ ಪ್ಲೇ ಆಫ್ ಬಾಗಿಲು ಮುಚ್ಚಿದಂತಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
It seems all things are not going well for the Kings XI Punjab on-field as well as of the field. Reports say that a brawl inside the dressing room was the reason why Australian cricketer Shaun Marsh was sent back.
Please Wait while comments are loading...