ಕೊಹ್ಲಿ-ಗೇಲ್ ಆರ್ಭಟಕ್ಕೆ ಹೆದರಿ ದಿಕ್ಕಾಪಾಲಾದ ಮಳೆರಾಯ!

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಬೆಂಗಳೂರು, ಮೇ 19: ಒಂದು ಕಡೆ ಗುಡುಗು ಸಹಿತ ಭಾರೀ ಮಳೆಯಾಗುತ್ತಿದ್ದರೆ, ಇನ್ನೊಂದೆಡೆ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬೌಂಡರಿಗಳದ್ದೆ ಗುಡುಗು ಸಿಕ್ಸರ್ ಗಳದ್ದೆ ಸಿಡಿಲಿನಿಂದ ಭಾರೀ ರನ್ ಮಳೆಯೇ ಹರಿಯಿತು. ರನ್ ಮಿಷನ್ ವಿರಾಟ್ ಕೊಹ್ಲಿ ಹಾಗೂ ಕ್ರಿಸ್ ಗೇಲ್ ಸಿಡಿಲಬ್ಬರದ ಬ್ಯಾಟಿಂಗ್ ನಿಂದ ಸುರಿಯುತ್ತಿದ್ದ ಮಳೆ ಅಂಜಿ ದಿಕ್ಕಾಪಾಲಾಯಿತು.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಮೇ 18ರಂದು ಸಂಜೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ ಸಿಬಿ ಮತ್ತು ಕಿಂಗ್ಸ್ ಎಲೆವೆನ್ ಪಂಜಾಬ್ ನಡುವಿನ ಪಂದ್ಯದಲ್ಲಿ ಗುಡುಗು ಸಹಿತ ಭಾರೀ ರನ್ ಮಳೆಯೇ ಹರಿಯಿತು. [ಪಂದ್ಯದ ಸ್ಕೋರ್ ಕಾರ್ಡ್]

ವಿರಾಟ್-ಗೇಲ್ ವೀರಾವೇಷಕ್ಕೆ ಪಂಜಾಬ್ ಬೌಲರ್ ಗಳು ರನ್ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದರೆ, ಫೀಲ್ಡರ್ ಗಳು ತಮ್ಮ ಬೌಲರ್ ಗಳನ್ನು ರಕ್ಷಿಸಲು ಹರಸಾಹಸವೇ ಪಡಬೇಕಾಯಿತು. [ಅಂಕಪಟ್ಟಿ]

Virat Kohli's 113 powers RCB to 82-run win via D/L method over KXIP

ಸಂಜೆಯಿಂದ ಪ್ರಾರಂಭವಾದ ಮಳೆ ನಿಂತ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ- ಕ್ರಿಸ್ ಗೇಲ್ ರನ್ ಮಳೆ ಸುರಿದು, ಆರ್ ಸಿಬಿ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಗಳ ಆರ್ಭಟಕ್ಕೆ ಪಂಜಾಬ್ ತಂಡದ ಬೌಲರ್ ಗಳು ಅಕ್ಷರಶಃ ತತ್ತರಿಸಿದರು. [ಕೊಹ್ಲಿಯನ್ನು ಬೆಚ್ಚಿಬೀಳಿಸಬಲ್ಲ ಬೌಲರ್ ಯಾರು?]

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್‌ ಸಿಬಿ ಕ್ರಿಸ್ ಗೇಲ್ ಹಾಗೂ ವಿರಾಟ್ ಕೊಹ್ಲಿಯ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಆರ್ ಸಿಬಿ ತಂಡ ನಿಗದಿತ 15 ಓವರ್‌ ಗಳಿಗೆ 211 ರನ್‌ ಗಳ ಬೃಹತ್ ಮೊತ್ತ ಪೇರಿಸಿತು.

Chris Gayle

ಗೇಲ್ ಗುಡುಗು ಕೊಹ್ಲಿ ಸಿಡಿಲು : ಒಂದು ಕಡೆ ಗೇಲ್ ಗುಡುಗುತ್ತಿದ್ದರೆ ಮತ್ತೊಂದೆಡೆ ವಿರಾಟ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ ರನ್ ಸುರಿಮಳೆಗೈದರು.

ಕೇವಲ 66 ಎಸೆತಗಳಲ್ಲಿ ಈ ಜೋಡಿ ಬರೋಬ್ಬರಿ 147 ರನ್ ಗಳನ್ನು ಭಾರಿಸಿ ಭದ್ರಬುನಾದಿಯನ್ನು ಹಾಕಿಕೊಟ್ಟರು. 12 ಬೌಂಡರಿ 8 ಸಿಕ್ಸರ್ ನೆರವಿನಿಂದ ಕೊಹ್ಲಿ 113 (49) ರನ್ ಗಳಿಸಿ ಐಪಿಎಲ್ 2016 ನಲ್ಲಿ ತಮ್ಮ ನಾಲ್ಕನೇ ಶತಕ ಸಿಡಿಸಿ ಮಿಂಚಿದರು.

-
ಕೊಹ್ಲಿ-ಗೇಲ್ ಅರ್ಭಟಕ್ಕೆ ಹೆದರಿದ ಪಂಜಾಬ್ ಕಿಂಗ್ಸ್

ಕೊಹ್ಲಿ-ಗೇಲ್ ಅರ್ಭಟಕ್ಕೆ ಹೆದರಿದ ಪಂಜಾಬ್ ಕಿಂಗ್ಸ್

-
-
-
-
-
-
-

ಬೃಹತ್ ಮೊತ್ತವನ್ನು ಬೆನ್ನಟ್ಟಿದ ಕಿಂಗ್ಸ್ 14 ಓವರ್ ಗಳಲ್ಲಿ 120 ರನ್ ಗಳಿಸಲಷ್ಟೇ ಶಕ್ತವಾಯಿತು. ಕೇವಲ ಒಂದು ಓವರ್ ಬಾಕಿ ಇರುವಾಗಲೇ ಆಟಕ್ಕೆ ಮಳೆ ಅಡ್ಡಿಪಡಿಸಿತು. ಇದರಿಂದ ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ ಆರ್ ಸಿಬಿ 82 ರನ್ ಗಳ ಭರ್ಜರಿ ಜಯಗಳಿಸಿ ಪ್ಲೇ ಆಫ್ ಕನಸನ್ನು ಜೀವಂತವಾಗಿಸಿಕೊಂಡಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Skipper Virat Kohli scripted yet another magnificent century to power Royal Challengers Bangalore to a dominating 82-run win over bottom-placed Kings XI Punjab via Duckworth Lewis method in a rain-hit IPL clash and stay on course for a play-off berth, here tonight (May 18)
Please Wait while comments are loading...