ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿ ರನೌಟ್ ಮಾಡಿ ಮೆರೆದಾಡಿದ ಯುವರಾಜ್ ಸಿಂಗ್

ವಿಶಾಖಪಟ್ಟಣ, ಮೇ, 11: ಪುಣೆಗೆ ಬಿಡದ ಸಾಡೆಸಾತಿ ಕಾಟ, ಹೈದರಾಬಾದ್ ಅದ್ಭುತ ಬೌಲಿಂಗ್, ಕೀಪಿಂಗ್ ನಿಂದ ಲಯತಪ್ಪಿದ ಪುಣೆ ಐಪಿಎಲ್ ಟೂರ್ನಿಯಿಂದ ಹೊರಕ್ಕೆ ಬಿದ್ದಿದೆ.

ಎಂಎಸ್ ಧೋನಿ ನಾಯಕತ್ವದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ಐಪಿಎಲ್ ಫ್ಲೇ ಆಫ್ ಕನಸು ನುಚ್ಚುನೂರಾಗಿದೆ. ಸನ್ ರೈಸರ್ಸ್ ನ ಯುವರಾಜ್ ಸಿಂಗ್ ಕೊನೆ ಈವರ್ ನಲ್ಲಿ ಎಂಎಸ್ ಧೋನಿಯವರನ್ನು ರನೌಟ್ ಮಾಡಿದ ಮರುಕ್ಷಣವೇ ಪುಣೆ ಸಹ ಟೂರ್ನಿಯಿಂದ ಔಟ್ ಆಗಿದೆ.[ಬೆಂಗಳೂರು -ಮುಂಬೈ: ಸಂಚಾರ ನಿಯಮ ನೋಡಿಕೊಳ್ಳಿ]

pune


ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಡಾ.ವೈ.ಎಸ್ ರಾಜಶೇಖರ ರೆಡ್ಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಪುಣೆ 4 ರನ್ ಗಳ ಸೋಲು ಕಂಡಿದೆ.

ಪುಣೆ ತಂಡದ ಪರ ಭರ್ಜರಿ ಬೌಲಿಂಗ್ ದಾಳಿ ಸಂಘಟಿಸಿದ ಆಡಂ ಜಂಪಾ ತಮ್ಮ ನಾಲ್ಕು ಓವರ್ ನಲ್ಲಿ 19 ರನ್ ನೀಡಿ 6 ವಿಕೆಟ್ ಕಬಳಿಸಿದರು. ಇದರೊಂದಿಗೆ ಹೈದರಾಬಾದ್ ತಂಡವನ್ನು 137 ರನ್ ಗೆ ನಿಯಂತ್ರಿಸಿದರು. ಆದರೆ ಹೈದರಾಬಾದ್ ತಂಡ ಅಷ್ಟೇ ಉತ್ತಮವಾದ ಬೌಲಿಂಗ್ ಮಾಡಿ ಕಡಿಮೆ ಮೊತ್ತವನ್ನು ಸಂರಕ್ಷಣೆ ಮಾಡಿಕೊಂಡಿತು.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡ ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತು. ಸಾಧಾರಣ ಮೊತ್ತ ಬೆನ್ನಟ್ಟಿದ ಪುಣೆಯ ಪ್ರಮುಖ ಮೂರು ವಿಕೆಟ್ ಪಡೆದ ಆಶಿಶ್ ನೆಹ್ರಾ ಶಾಕ್ ನೀಡಿದರು. ನಿಗದಿತ ಓವರ್ ನಲ್ಲಿ 8 ವಿಕೆಟ್ ಕಳೆದ ಪುಣೆ ತಂಡ 133 ರನ್ ಗಳಿಸಷ್ಟೇ ಶಕ್ಯವಾಯಿತು.[ಕ್ರಿಕೆಟ್ ದೇವರ ಕಾಲಿಗೆ ಬಿದ್ದರೆ ತಪ್ಪೇನು ಇಲ್ಲ]


ಜೈ ಹೋ ನೆಹ್ರಾ

ಹೈದರಾಬಾದ್ ಪರ ಕೊನ್ ಓವರ್ ಎಸೆಯಲು ನೆಹ್ರಾ ಸಿದ್ಧರಾಗಿದ್ದರು. ಪುಣೆ ತಂಡಕ್ಕೆ ಗೆಲ್ಲಲು ಬೇಕಾಗಿದ್ದದ್ದು 14 ರನ್, ಬೆಸ್ಟ್ ಫಿನಿಶರ್ ಖ್ಯಾತಿಯ ಎಂಎಸ್ ಧೋನಿ, ಸ್ಫೋಟಕ ಆಟಕ್ಕೆ ಹೆಸರಾದ ಪರೇರಾ ಕ್ರೀಸ್ ನಲ್ಲಿ ಇದ್ದರು. ಮೊದಲ ಎಸೆತದಲ್ಲಿ ಪರೇರಾ ಒಂಟಿ ರನ್ ಕದ್ದರು, ನಂತರದ ಎಸೆತದಲ್ಲಿ ಧೋನಿ ಒಂದು ರನ್ ತೆಗೆದುಕೊಂಡರು. ಮೂರನೇ ಎಸೆತದಲ್ಲಿ ಪರೇರಾ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿದರು. ನಾಲ್ಕನೇ ಎಸೆತವನ್ನು ಧೋನಿ ಸಿಕ್ಸರ್ ಗೆ ಅಟ್ಟಿದಾಗ ಗೆಲುವು ಪುಣೆ ಕಡೆ ವಾಲಿತ್ತು.[ಅಬ್ಬಾ ಆರ್ ಸಿಬಿಗೆ ಅಂತೂ ಜಯ ಸಿಕ್ತು]

ಗ್ರೇಟ್ ರನೌಟ್
ಎರಡು ಎಸೆತಗಳಲ್ಲಿ ಆರು ರನ್ ಬೇಕಿತ್ತು. ಆದರೆ 5 ನೇ ಎಸೆತದಲ್ಲಿ ಎರಡು ರನ್ ಕದಿಯಲು ಹೋದ ಎಂಎಸ್ ಧೋನಿ ಯುವರಾಜ್ ಸಿಂಗ್ ಅವರ ಚಾಕಚಕ್ಯತೆಯ ರನೌಟ್ ಗೆ ಬಲಿಯಾದರು. ಇದರೊಂದಿಗೆ ಪುಣೆ ತಂಡ ಟೂರ್ನಿಯಿಂದ ಹೊರಬಿದ್ದಿತು, ಆರನೇ ಎಸೆತದಲ್ಲಿ ನಾಲ್ಕು ರನ್ ಬೇಕಿದ್ದಾಗ ನೆಹ್ರಾ ಎಸೆತ ಆಫ್ ಸ್ಟಂಪ್ ನಿಂದ ಹೊರಕ್ಕೆ ಹೋಗುತ್ತಿತ್ತು. ಮೊದಲ ಚೆಂಡು ಎದುರಿಸುತ್ತಿದ್ದ ಜಂಪಾ ಅಪರ ಬ್ಯಾಟ್ ನ ಹೊರಭಾಗಕ್ಕೆ ತಾಗಿದ ಚೆಂಡನ್ನು ಕೀಪರ್ ಓಜಾ ಅದ್ಭುತವಾಗಿ ಹಿಡಿದರು.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X