ಅಸಭ್ಯ ವರ್ತನೆ ತೋರಿದ ಗುಜರಾತಿನ ಬ್ರಾವೋಗೆ ದಂಡ

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ನವದೆಹಲಿ, ಮೇ 23 : ಮೈದಾನದಲ್ಲಿ ಅಸಭ್ಯ ವರ್ತನೆ ತೋರಿದ್ದಕ್ಕಾಗಿ ಗುಜರಾತ್ ಲಯನ್ಸ್ ತಂಡದ ಡ್ವಾಯ್ನೆ ಬ್ರಾವೋ ಅವರಿಗೆ ದಂಡ ವಿಧಿಸಲಾಗಿದೆ. ವಿಂಡೀಸ್ ಆಟಗಾರರು ಮೈದಾನದಲ್ಲಿ ಚೇಷ್ಟೆ ಮಾಡುವುದರಲ್ಲಿ ಎತ್ತಿದ ಕೈ ಎಂಬುವುದನ್ನು ಬ್ರಾವೊ ತೋರಿಸಿಕೊಟ್ಟಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಮೇ 21 ರಂದು ನಡೆದ ಗುಜರಾತ್ ಲಯನ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ನಡುವಿನ ಪಂದ್ಯದ ಸಂದರ್ಭದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಕಿರಾನ್ ಪೋಲಾರ್ಡ್ ಅವರಿಗೆ ಬ್ರಾವೋ ಗುದ್ದಿ ಕಾಲು ಕೆದರಿಕೊಂಡು ಜಗಳ ಮಾಡಲು ಮುಂದಾಗಿದ್ದರು.

ಹೌದು, ಡ್ವಾಯ್ನೆ ಬ್ರಾವೋ ಎಸೆದ 14 ನೇ ಓವರ್ ನ ಕೊನೆ ಬಾಲ್ ನ್ನು ಪೋಲಾರ್ಡ್ ರಕ್ಷಣಾತ್ಮಕವಾಗಿ ಡಿಫೆನ್ಸ್ ಮಾಡಿದರು. ನಂತರ ಬೌಲ್ ಹಿಡಿಯಲು ಪೋಲಾರ್ಡ್ ಹತ್ತಿರಕ್ಕೆ ಬಂದು ಬ್ರಾವೋ ಗುದ್ದಿದ್ದಾರೆ.

IPL 9: Gujarat Lions' Dwayne Bravo fined 50 percent match fee

ಇದರಿಂದ ಐಪಿಎಲ್ Level 2 offence (Article 2.2.7) ಉಲ್ಲಂಘಿಸಿದ್ದರಿಂದ ಪಂದ್ಯದ ಶೇ. 50 ರಷ್ಟು ದಂಡ ವಿಧಿಸಿದ್ದಾರೆ. ಮಾಡಿದ್ದುಣ್ಣೋ ಮಾರಾಯ ಎನ್ನುವಂತೆ ಬ್ರಾವೋ ಮಾಡಿದ ತಪ್ಪಿಗೆ ದಂಡ ತೆರಬೇಕಾಗಿದೆ.

ಆಟದ ವೇಳೆ ಮೈದಾನದಲ್ಲಿ ಎದುರಾಳಿ ಆಟಗಾರರನ್ನು ಕಿಚಾಯಿಸುವುದು, ಅವಾಚ್ಯ ಶಬ್ದಗಳಿಂದ ನಿಂಧಿಸುವುದು ದಂಡಾರ್ಹ ಅಪರಾಧವಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Gujarat Lions' Dwayne Bravo was on Sunday fined 50 percent of his match fee for breaching the Indian Premier League's (IPL) code of conduct during his team's match against Mumbai Indians at Green Park Stadium in Kanpur on the previous day.
Please Wait while comments are loading...