ಮುಂಬೈ ಮೂಲೆಗುಂಪು ಮಾಡಿದ ಪ್ರೀತಿ ಹುಡುಗರು

Written By:
Subscribe to Oneindia Kannada

ವಿಶಾಖಪಟ್ಟಣ, ಮೇ, 13: ರೋಹಿತ್ ಶರ್ಮಾ ಪಡೆ ಪಂಜಾಬ್ ವಿರುದ್ಧ ಸೋಲು ಕಂಡಿದ್ದು ಪ್ಲೇ-ಆಫ್ ಹಾದಿಯನ್ನು ದುರ್ಗಮ ಮಾಡಿಕೊಂಡಿದೆ. ಮುರುಳಿ ವಿಜಯ್ ನಾಯಕತ್ವ ವಹಿಸಿಕೊಂಡ ಮೇಲೆ ಪ್ರೀತಿ ಹುಡುಗರು ಅದ್ಭುತ ಆಟ ಪ್ರದರ್ಶನ ಮಾಡುತ್ತಿದ್ದು ಮುಂಬೈ ತಂಡಕ್ಕೆ ಸೋಲುಣಿಸಿದ್ದಾರೆ.

ಮುಂಬೈಗೆ ಇನ್ನು ಎರಡು ಪಂದ್ಯಗಳು ಬಾಕಿ ಉಳಿದಿದ್ದು ಅವುಗಳನ್ನು ಗೆದ್ದರೆ ಮಾತ್ರ ಅಗ್ರ ನಾಲ್ಕರೊಳಗೆ ಸ್ಥಾನ ಪಡೆಯಬಹುದು. ಡೆಲ್ಲಿ ಡೇರ್‌ಡೆವಿಲ್ಸ್ ಮತ್ತು ಗುಜರಾತ್ ಲಯನ್ಸ್ ತಂಡದ ವಿರುದ್ಧ ಮುಂಬೈ ಪಂದ್ಯಗಳನ್ನು ಆಡಬೇಕಿದೆ.[ಶಾನ್ ಮಾರ್ಷ್, ಪಂಜಾಬ್ ತಂಡ ತೊರೆದ ಕಾರಣ ಬಹಿರಂಗ!]

ipl 9

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಟೂರ್ನಿಯಿಂದ ಹೊರಬಿದ್ದರೂ ಪಂಜಾಬ್ ಮುಂಬೈಗೆ ಆಘಾತ ನೀಡಿ ಪುಣೆಯನ್ನು ಕೊನೆ ಸ್ಥಾನಕ್ಕೆ ತಳ್ಳಿದೆ. ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಮುಂಬೈಗೆ ಆಸ್ಟ್ರೇಲಿಯಾದ ಆಲ್ ರೌಂಡರ್ ಮಾರ್ಕಸ್ ಸ್ಟೋಯಿನಸ್ (15ಕ್ಕೆ 4) ಆಘಾತ ನೀಡಿದರು. ಬಿಗಿ ಬೌಲಿಂಗ್ ದಾಳಿಗೆ ತ್ತರಿಸಿದ ಮುಂಬೈ 124ರನ್ ಸೇರಿಸಲು ಸಾಧ್ಯವಾಯಿತು.[ಪ್ರೀತಿ ಜಿಂಟಾ 'ಎಫ್' ಪದ ಬಳಸಿಲ್ಲ, ಅವಾಜ್ ಹಾಕಿಲ್ಲ]

ಪಂಜಾಬ್ ಪರ ಬ್ಯಾಟ್ ಬೀಸಿದ ಮುರಳಿ ವಿಜಯ್ (54*ರನ್, 52ಎಸೆತ, 5ಬೌಂಡರಿ, 1ಸಿಕ್ಸರ್) ಮತ್ತು ವೃದ್ಧಿಮಾನ್ ಸಾಹ (56ರನ್, 40ಎಸೆತ, 6ಬೌಂಡರಿ, 1ಸಿಕ್ಸರ್) ಪ್ರೀತಿ ಜಿಂಟಾ ತಂಡಕ್ಕೆ ಗೆಲುವು ತಂದುಕೊಟ್ಟರು.

-
-
-
-

ಕೈರಾನ್ ಪೊಲ್ಲಾಡ್‍೯ ಆರ್ಭಟ: ಓವರ್ ಗೆ 17 ರನ್ ಕದಿಯುತ್ತ ಸಾಗಿದ ಕೈರಾನ್ ಪೊಲ್ಲಾಡ್‍೯ ಮತ್ತು ಕೃನಾಲ್ ಪಾಂಡ್ಯ ಮುಂಬೈ ಮೊತ್ತವನ್ನು ಹಿಗ್ಗಿಸುವತ್ತ ಗಮನ ನೀಡಿದರು, ಆದರೆ ಒಂದೇ ಓವರ್ ನಲ್ಲಿ ಇಬ್ಬರನ್ನು ಬಲಿ ಪಡೆದ ಮಾರ್ಕಸ್ ಸ್ಟೋಯಿನಸ್ ಪಂದ್ಯದ ದಿಕ್ಕನ್ನು ಪಂಜಾಬ್ ಕಡೆ ವಾಲಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Kings XI Punjab put the brakes on their summer of discontent as they notched up a convincing seven-wicket win over defending champions Mumbai Indians in the Indian Premier League (IPL). Medium pacer Marcus Stoinis led the way with four wickets as a disciplined Kings XI Punjab restricted Mumbai Indians to a modest 124 for nine in the stipulated 20 overs.
Please Wait while comments are loading...