ಕಪಿಲ್ ಕಾಮಿಡಿ ಶೋನಲ್ಲಿ ಕ್ರಿಸ್ ಗೇಲ್ ಡ್ಯಾನ್ಸ್

Posted By:
Subscribe to Oneindia Kannada

ಮುಂಬೈ, ಮೇ 24: ಕೆರಿಬಿಯನ್ ಆಟಗಾರರಿಗೆ ಕುಣಿಯುವುದನ್ನು ಹೇಳಿಕೊಡಬೇಕಾಗಿಲ್ಲ, ಅದರಲ್ಲೂ ಕ್ರಿಸ್ ಗೇಲ್, ಬ್ರಾವೋ ಇಬ್ಬರು ಎಲ್ಲಿದ್ದರೂ ಡ್ಯಾನ್ಸ್ ಸ್ಟೆಪ್ ಹಾಕಿ ಎಲ್ಲರನ್ನು ರಂಜಿಸುತ್ತಾರೆ. ಆದರಂತೆ, ಗೇಲ್ ಅವರು ನಂ.1 ಕಾಮಿಡಿ ಶೋನಲ್ಲಿ ಸಕತ್ ಸ್ಟೆಪ್ ಹಾಕಿದ್ದಾರೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಕಪಿಲ್ ಶರ್ಮ ಅವರ ಹೊಸ ಕಾಮಿಡಿ ಶೋನಲ್ಲಿ ಕ್ರಿಸ್ ಗೇಲ್ ಅವರು ಅತಿಥಿಯಾಗಿ ಬಂದು ರಂಜಿಸಿದ್ದಾರೆ. ಮಿಕಾ ಸಿಂಗ್ ಹಾಗೂ ಕನ್ನಿಕಾ ಕಪೂರ್ ಕೂಡಾ ಈ ಶೋನಲ್ಲಿ ಪಾಲ್ಗೊಂಡಿದ್ದರು. [ಆರೋಹಿ ಗೂಗ್ಲಿಗೆ ಕ್ರಿಸ್ ಗೇಲ್ ಬೋಲ್ಡ್]

ಹಿಂದಿ ಹಾಡುಗಳಿಗೆ ಗೇಲ್ ಹೆಜ್ಜೆ ಹಾಕಿದ್ದು, ವಿಶೇಷವಾಗಿ ಭಾಂಗ್ರ ನೃತ್ಯ ಮಾಡಿದ್ದಾರೆ. ಹಾಡು ಹಾಡಿ, ಕ್ರಿಕೆಟ್ ಆಡಿ ಎಂಜಾಯ್ ಮಾಡಿದ್ದಾರೆ.

Chris Gayle shakes a leg on The Kapil Sharma Show

ಗೇಲ್ ಜತೆ ಕಳೆದ ಕ್ಷಣಗಳು ಶೀಘ್ರದಲ್ಲೇ ನಿಮ್ಮ ಮುಂದೆ ಬರಲಿದೆ. ನನ್ನ ಹುಚ್ಚು ಗೆಳೆಯ 'ಸಿಕ್ಸ್ ಮಷಿನ್' ನೋಡಿ ಎಂದು ಕಪಿಲ್ ಶರ್ಮ ಟ್ವೀಟ್ ಮಾಡಿದ್ದಾರೆ. ಈ ಮುಂಚೆ ಡ್ವಾಯ್ನೆ ಬ್ರಾವೋ, ವಾಸೀಂ ಅಕ್ರಂ ಕೂಡಾ ಕಪಿಲ್ ಶರ್ಮ ಶೋನಲ್ಲಿ ಪಾಲ್ಗೊಂಡಿದ್ದರು. [ಕುಣಿಯುತ್ತಾ ಬಂದ ಗೇಲ್, ನಲಿದಾಡಿದ ಕೊಹ್ಲಿ]

ಆದರೆ, ಬಾಲಿವುಡ್ ಸಂಗೀತಕ್ಕೆ ಅದರಲ್ಲೂ ಬಾಂಗ್ರಾ ನೃತ್ಯ ಮಾಡುವುದು ಹೇಗೆ ಎಂಬುದನ್ನು ಗೇಲ್ ಗೆ ಕಲಿಸಿಕೊಟ್ಟಿದ್ದು ಮನ್ದೀಪ್ ಸಿಂಗ್ ಹಾಗೂ ವಿರಾಟ್ ಕೊಹ್ಲಿಯಂತೆ. ಇತ್ತೀಚೆಗೆ ಈ ಮೂವರು ಕುಣಿಯುವ ವಿಡಿಯೋ ತುಣುಕು ಎಲ್ಲೆಡೆ ಹರಿದಾಡಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In the next episode of The Kapil Sharma show, none other than Chris Gayle will be seen singing as well as dancing with comedian Kapil Sharma.
Please Wait while comments are loading...