ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 8: ಎಲೈಟ್ ಕ್ಲಬ್ ನಲ್ಲಿ ರೈನಾ ಟಾಪ್

By Mahesh

ಬೆಂಗಳೂರು, ಏ,8: ಇಂಡಿಯನ್ ಪ್ರಿಮಿಯರ್ ಲೀಗ್ 8ನೇ ಆವೃತ್ತಿ ಆರಂಭವಾಗಿದ್ದು, ಟ್ವೆಂಟಿ 20 ಕ್ರಿಕೆಟ್ ಹಬ್ಬದಲ್ಲಿ ಕ್ರಿಕೆಟ್ ಅಭಿಮಾನಿಗಳು ಮುಳುಗೇಳಲಿದ್ದಾರೆ. ಐಪಿಎಲ್ 8 ರ ಎಲೈಟ್ ಕ್ಲಬ್ಬಿನಲ್ಲಿ ಭಾರತದ 8 ಆಟಗಾರರರಿದ್ದು, ಸುರೇಶ್ ರೈನಾ ಅಗ್ರಸ್ಥಾನದಲ್ಲಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಸುರೇಶ್ ರೈನಾ ಅವರು ಐಪಿಎಲ್ ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿರುವ ಆಟಗಾರರ ಎನಿಸಿದ್ದಾರೆ. ರೈನಾ ಅವರು 117 ಪಂದ್ಯಗಳನ್ನಾಡಿದ್ದು, ಐಪಿಎಲ್ ನ ಅತ್ಯಂತ ಅನುಭವಿ ಆಟಗಾರರಾಗಿದ್ದಾರೆ. [ಐಪಿಎಲ್: ಅಭಿಮಾನಿಗಳಿಗೆ ಅಗತ್ಯವಾದ ಮಾರ್ಗದರ್ಶಿ]

IPL 8: 8 Indian cricketers in elite club

ರೈನಾ ಅವರಲ್ಲದೆ ಇನ್ನೂ 7 ಜನ ಆಟಗಾರರು ಈ 100 ಪ್ಲಸ್ ಪಂದ್ಯಗಳನ್ನಾಡಿದ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆ ನೋಡಿದರೆ 100 ಪ್ಲಸ್ ಪಂದ್ಯ ಆಡಿದ ಆಟಗಾರರ ಪಟ್ಟಿಯಲ್ಲಿ 8 ಆಟಗಾರರು ಮಾತ್ರ ಇದ್ದಾರೆ. [ಐಪಿಎಲ್ 8: 47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್]
ಗ್ಯಾಲರಿ: ಐಪಿಎಲ್ 8 ವರ್ಣ ರಂಜಿತ ಆರಂಭ

8 ಆಟಗಾರರ ಪೈಕಿ 4 ಜನ ನಾಯಕರು ಈ ಆವೃತ್ತಿಯಲ್ಲಿ ಆಡುತ್ತಿದ್ದಾರೆ. ಎಂಎಸ್ ಧೋನಿ, ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಅವರು ಕ್ರಮವಾಗಿ ಸಿಎಸ್ ಕೆ, ಮುಂಬೈ ಇಂಡಿಯನ್ಸ್, ಆರ್ ಸಿಬಿ ಹಾಗೂ ಕೆಕೆಆರ್ ನಾಯಕರಾಗಿದ್ದಾರೆ. [8 ತಂಡಗಳ ನೂರೆಂಟು ಆಟಗಾರರು]

ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಏ.8ರಂದು ಉದ್ಘಾಟನಾ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿವೆ. [ಆನ್ಲೈನ್ ಟಿಕೆಟ್ ಖರೀದಿ ಎಲ್ಲಿ? ಹೇಗೆ?]

ಇಂಡಿಯನ್ಸ್ ಪ್ರಿಮಿಯರ್ ಲೀಗ್ ನ ಅತ್ಯಂತ ಅನುಭವಿಗಳು: (100 ಪ್ಲಸ್ ಪಂದ್ಯ)
* 115-ಸುರೇಶ್ ರೈನಾ (ಚೆನ್ನೈ ಸೂಪರ್ ಕಿಂಗ್)
* 112-ಎಂಎಸ್ ಧೋನಿ (ಚೆನ್ನೈ ಸೂಪರ್ ಕಿಂಗ್)
* 112- ರೋಹಿತ್ ಶರ್ಮ (ಮುಂಬೈ ಇಂಡಿಯನ್ಸ್)
* 107- ವಿರಾಟ್ ಕೊಹ್ಲಿ - (ರಾಯಲ್ ಚಾಲೆಂಜರ್ಸ್ ಬೆಂಗಳೂರು)
* 107- ರಾಬಿನ್ ಉತ್ತಪ್ಪ -(ಕೋಲ್ಕತ್ತಾ ನೈಟ್ ರೈಡರ್ಸ್)
* 106- ದಿನೇಶ್ ಕಾರ್ತಿಕ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು)
* 106- ಯೂಸುಫ್ ಪಠಾಣ್ (ಕೋಲ್ಕತ್ತಾ ನೈಟ್ ರೈಡರ್ಸ್)
* 104- ಗೌತಮ್ ಗಂಭೀರ್ (ಕೋಲ್ಕತ್ತಾ ನೈಟ್ ರೈಡರ್ಸ್)

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X