ಪುಣೆ ಎದರು ಶತಕ ಸಿಡಿಸಿದ ದ್ರಾವಿಡ್ ಶಿಷ್ಯ ಸಂಜು ಸ್ಯಾಮ್ಸನ್ ಯಾರು?

Posted By:
Subscribe to Oneindia Kannada

ಮಂಗಳವಾರ ರಾತ್ರಿ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಮೈದಾನ ತುಂಬೆಲ್ಲ ಸಂಜು..ಸಂಜು.. ಸಂಜು ಬೇಬಿ ಎಂದು ಪ್ರತಿಧ್ವನಿಸಿತು. ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಂಜುದ್ದೇ ಹವಾ.

ಕ್ರಿಕೆಟ್ ದಿಗ್ಗಜರ ಬಾಯಲ್ಲಿ ಸಂಜು ಸ್ಯಾಮ್ಸನ್ ಅವರದ್ದೇ ಮಾತು.ಹಾಗಿದ್ದರೇ ಯಾರು ಈ ಸಂಜು ಸ್ಯಾಮ್ಸನ್? ಸಂಜು ಕ್ರಿಕೆಟ್ ಗೆ ಹೇಗೆ ಬಂದ? ಎಂಬುವುದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

22 ವಯಸ್ಸಿನ ಯುವ ಪ್ರತಿಭೆ ಸಂಜು ಸ್ಯಾಮ್ಸನ್ ಒಬ್ಬ ಪೊಲೀಸ್ ಕಾನ್ಸ್ ಟೇಬಲ್ ಮಗನಾಗಿ ನವೆಂಬರ್ 11, 1994ರಲ್ಲಿ ಕೇರಳದ ತಿರುವನಂತಪುರಂನಲ್ಲಿ ಜನಿಸಿ ತಮ್ಮ ವಿದ್ಯಾಭ್ಯಾಸವನ್ನು ತಿರುವನಂತಪುರಂನಲ್ಲಿ ಮುಗಿಸಿದ್ದಾರೆ.[ಹೈಲೇಟ್ಸ್ : ಪುಣೆ ಪಾಲಿಗೆ ನಂಜಾದ ಸಂಜು ಸೆಂಚುರಿ]

ಮೊದಲಿಗೆ ಕೇರಳದ 13 ವರ್ಷದೊಳಗಿನ ತಂಡಕ್ಕೆ ಆಯ್ಕೆಯಾಗಿ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. ಇದಾದ ಬಳಿಕ 13 ವರ್ಷದೊಳಗಿನ ದಕ್ಷಿಣ ವಲಯ ಟೂರ್ನಿಯಲ್ಲಿ ಆಡಿದ ಸಂಜು ಮೊದಲ ಪಂದ್ಯದಲ್ಲಿಯೇ ಶತಕ ಸಿಡಿಸಿ ಗಮನ ಸೆಳೆದರು.

ಈ ಟೂರ್ನಿಯಲ್ಲಿ ಆಡಿ 5 ಪಂದ್ಯಗಳಲ್ಲಿ ಬರೋಬ್ಬರಿ 4 ಶತಕಗಳನ್ನು ಬಾರಿಸಿ ಕ್ರಿಕೆಟ್ ತಾರೆಯರ ಕಣ್ಣು ಕುಕ್ಕಿದರು. ಸಂಜು ಸ್ಯಾಮ್ಸನ್ ಮುಂದಿನ ಕ್ರಿಕೆಟ್ ಪಯಣ ತಿಳಿಯಲು ಮುಂದೆ ಓದಿ.

ಸಂಜು ಸ್ಯಾಮ್ಸನ್ ಅವರ ಮೊದಲ ದ್ವಿಶತಕ

ಸಂಜು ಸ್ಯಾಮ್ಸನ್ ಅವರ ಮೊದಲ ದ್ವಿಶತಕ

ಅಂಡರ್ 16 ಮತ್ತು 19 ತಂಡವನ್ನು ಮುನ್ನಡೆಸುವ ಜವಬ್ದಾರಿಯನ್ನು ಸಂಜು ಅವರಿಗೆ ವಹಿಸಲಾಗಿತ್ತು. ಕೇರಳದ ಅಂಡರ್ 16 ತಂಡವನ್ನು ಮುನ್ನಡೆಸುತ್ತಿದ್ದ ಸಂಜು ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ಗೋವಾ ವಿರುದ್ಧ ಕೇವಲ 138 ಎಸೆತಗಳಲ್ಲಿ ದ್ವಿಶತಕ ಬಾರಿಸಿದರು.

2012ರ 19 ವರ್ಷದೊಳಗಿನ ಭಾರತ ತಂಡಕ್ಕೆ

2012ರ 19 ವರ್ಷದೊಳಗಿನ ಭಾರತ ತಂಡಕ್ಕೆ

ಆಗ ಇನ್ನು 15 ಹರೆಯದ ಸಂಜು ಸ್ಯಾಮ್ಸನ್ ಅವರ ಆಟದ ವೈಖರಿಯನ್ನು ಕಂಡು ಕೇರಳ ರಣಜಿ ತಂಡಕ್ಕೆ ಆಯ್ಕೆ ಮಾಡಲಾಯಿತು. ಬಳಿಕ 2012ರ ಏಷ್ಯಾ ಕಪ್ ಟೂರ್ನಿಗೆ 19 ವರ್ಷದೊಳಗಿನ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡರು.

ಭಾರತ ಕಿರಿಯರ ತಂಡ ಆಧಾರ ಸ್ಥಂಭ

ಭಾರತ ಕಿರಿಯರ ತಂಡ ಆಧಾರ ಸ್ಥಂಭ

ಸಂಜು ಸ್ಯಾಮ್ಸನ್ ಸಧ್ಯ ಕಿರಿಯರ ಭಾರತ ತಂಡದ ಅವಿಭಾಜ್ಯ ಅಂಗ. ಕೇರಳ ತಂಡದ ಆಧಾರ ಸ್ಥಂಭವಾಗಿದ್ದಾರೆ.

2012ರಲ್ಲಿ ಐಪಿಎಲ್ ಗೆ ಎಂಟ್ರಿ

2012ರಲ್ಲಿ ಐಪಿಎಲ್ ಗೆ ಎಂಟ್ರಿ

ರಣಜಿ, ಅಂಡರ್ 19ನಲ್ಲಿ ಬ್ಯಾಟಿಂಗ್ ನಲ್ಲಿ ಚಮತ್ಕಾರ ತೋರಿಸಿದ ಸಂಜು ಸ್ಯಾಮ್ಸನ್ ಅವರನ್ನು 2012ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಕೊಲ್ಕತ್ತಾ ನೈಟ್ ರೈಡರ್ರ್ಸ್ ಖರೀದಿಸಿತು. ಆದರೆ, ಸಂಜು ಬೆಳಕಿಗೆ ಬಂದಿದ್ದು ಮಾತ್ರ 2013ರಲ್ಲಿ.

ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಪಳಗಿದ ಸಂಜು

ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಪಳಗಿದ ಸಂಜು

2013ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಎಂಟ್ರಿ ಕೊಟ್ಟ ಸಂಜು, ರಾಹುಲ್ ದ್ರಾವಿಡ್, ಶೇನ್ ವಾರ್ನ್ ಅವರ ತರಬೇತಿಯಲ್ಲಿ ಪಳಗಿ ಬ್ಯಾಟ್ಸ್​ಮನ್, ವಿಕೆಟ್ ಕೀಪರ್ ಆಗಿ ಮಿಂಚಿ ಅದೇ ವರ್ಷದಲ್ಲಿಯೇ ಉದಯೋನ್ಮುಖ ಆಟಗಾರ ಎಂಬ ಪ್ರಶಸ್ತಿಗೆ ಭಾಜನರಾಗಿದ್ದರು.

2016ರ ಐಪಿಎಲ್​ನಲ್ಲಿ ಡೆಲ್ಲಿಗೆ ಬಿಕರಿ

2016ರ ಐಪಿಎಲ್​ನಲ್ಲಿ ಡೆಲ್ಲಿಗೆ ಬಿಕರಿ

ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಹಿರಿಯ ಆಟಗಾರರ ಮಾರ್ಗದರ್ಶನದಲ್ಲಿ ಪಳಗಿದ ಸಂಜು ಸ್ಯಾಮ್ಸನ್ ಅವರನ್ನು ಡೆಲ್ಲಿ ತಂಡದ ವೆಂಟರ್ ರಾಹುಲ್ ದ್ರಾವಿಡ್ ಸಲಹೆಯಂತೆ 2016ರ ಐಪಿಎಲ್​ನಲ್ಲಿ ಬರೋಬ್ಬರಿ 4.6 ಕೋಟಿಗೆ ಡೆಲ್ಲಿ ಡೇರ್ ಡೆವಿಲ್ಸ್ ತನ್ನ ಬುಟ್ಟಿಗೆ ಹಾಕಿಕೊಂಡಿತು.

ಐಪಿಎಲ್ ವೃತ್ತಿ ಜೀವನದಲ್ಲಿ ಮೊದಲ ಶತಕ

ಐಪಿಎಲ್ ವೃತ್ತಿ ಜೀವನದಲ್ಲಿ ಮೊದಲ ಶತಕ

ಕಳೆದ ಆವೃತ್ತಿಯಿಂದ ಡೆಲ್ಲಿ ಡೇರ್ ಡೆವಿಲ್ಸ್ ಭಾಗವಾಗಿರುವ ಸಂಜು ಸ್ಯಾಮ್ಸನ್, ಫ್ರಾಂಚೈಸಿ ಮಾಲೀಕರು ಇಟ್ಟ ನಂಬಿಕೆಯನ್ನು ಹುಸಿಗೊಳಿಸಲಿಲ್ಲ. ತಮ್ಮ ಐಪಿಎಲ್ ವೃತ್ತಿ ಜೀವನದಲ್ಲಿ ಐಪಿಎಲ್ 10ನೇ ಆವೃತ್ತಿಯಲ್ಲಿ ಪುಣೆ ಎದರು ಮೊದಲ ಶತಕ ಗಳಿಸಿ ಮಿಂಚಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Some interesting information regarding Kerala Cricketer Sanju Samsan who grabbed attention of viewer by hitting 102 runs for Delhi Daredevils against Pune Supergiants in IPL match on 11th April, 2017.
Please Wait while comments are loading...