ಐಪಿಎಲ್ 10 ಅಚ್ಚರಿಯ 'ಶಾಟ್' ಬಾರಿಸಿದ ಕೊಹ್ಲಿ!

Posted By:
Subscribe to Oneindia Kannada

ನವದೆಹಲಿ, ಮೇ 16: ಇಂಡಿಯನ್ ಪ್ರೀಮಿಯರ್ ಲೀಗ್ 10ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಗೂ ನಾಯಕ ವಿರಾಟ್ ಕೊಹ್ಲಿ ಇಬ್ಬರ ಸಾಧನೆ ತೀರಾ ಕಳಪೆ. ಆದರೆ, ಕೊನೆ ಪಂದ್ಯದಲ್ಲಿ ಕೊಹ್ಲಿ ಸಿಡಿಸಿದ ಸಿಕ್ಸರ್ 'ಶಾಟ್ ಆಫ್ ದಿ ಟೂರ್ನಮೆಂಟ್'ಎಂದೆನಿಸಿಕೊಳ್ಳುವ ಸಾಧ್ಯತೆಯಿದೆ.

ಫಿರೋಜಾ ಶಾ ಕೋಟ್ಲಾ ಮೈದಾನದಲ್ಲಿ ವಿರಾಟ್ ಕೊಹ್ಲಿ ಅವರು ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು 161ಕ್ಕೇರಿಸಿದ್ದರು. ಡೆಲ್ಲಿ ಡೇರ್ ಡೆವಿಲ್ಸ್ ತಂಡ 10 ರನ್ ಗಳಿಂದ ಪಂದ್ಯವನ್ನು ಕಳೆದುಕೊಂಡಿತು. ಕೊಹ್ಲಿ ಅವರು ತಮ್ಮ ಇನ್ನಿಂಗ್ಸ್ ನಲ್ಲಿ ಸರಾಗವಾಗಿ ಬಾರಿಸಿದ ಸಿಕ್ಸ್ ಈಗ ಚರ್ಚೆಗೆ ಕಾರಣವಾಗಿದೆ.

Best shot of IPL 2017? Watch RCB captain Virat Kohli's stunning six against DD

ಪಂದ್ಯದ ಮುಗಿದ ಮೇಲೆ ಈ ಬಗ್ಗೆ ಕಾಮೆಂಟೆಟರ್ ಸಂಜಯ್ ಮಂಜೇಕ್ರರ್ ಅವರು ಕೊಹ್ಲಿ ಅವರನ್ನು ಪ್ರಶ್ನಿಸಿದರು. ಇದಕ್ಕೂ ಮುನ್ನ ಕಾಮೆಂಟ್ರಿ ಮಾಡುವಾಗ,

'ಇದು ಸಿಕ್ಸ್ ಬಾರಿಸಿದ್ದಾ? ಅಥವಾ ಸುಮ್ಮನೆ ಚೆಂಡಿಗೆ ಮುತ್ತಿಟ್ಟಿದ್ದಾ?', ಇದು ಬಹುಶಃ ಈ ಸೀಸನ್ ನ ಬೆಸ್ಟ್ ಶಾಟ್ ಎಂದಿದ್ದರು. ನ್ಯೂಜಿಲೆಂಡಿನ ಸೈಮನ್ ಡೌಲ್ ಅವರು ಅಚ್ಚರಿ ವ್ಯಕ್ತಪಡಿಸಿ, ಡ್ರೈವ್ ಮಾಡಲು ಬ್ಯಾಟ್ ಮುಂದಿಟ್ಟರೆ ಸಿಕ್ಸ್ ಹೋಗುತ್ತದೆ ಎಂದರೆ ಇದು ಭರ್ಜರಿ ಆಟ ಎಂದು ಹೇಳಿದರು.

ಈ ಅದ್ಭುತ ಹೊಡೆತದ ಬಗ್ಗೆ ಪ್ರತಿಕ್ರಿಯಿಸಿದ ಕೊಹ್ಲಿ, ನಾನು ಇಬ್ಬರು ಫೀಲ್ಡರ್ ಗಳ ನಡುವೆ ಚೆಂಡನ್ನು ತಳ್ಳಿ ಎರಡು ರನ್ ಕದಿಯಲು ಯತ್ನಿಸಿದೆ. ಆದರೆ, ಚೆಂಡು ಸಿಕ್ಸ್ ಹೋಗಿದ್ದು ನೋಡಿ ಅಚ್ಚರಿಯಾಯಿತು ಎಂದರು.

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Royal Challengers Bangalore (RCB) captain Virat Kohli produced one of the best shots of the Indian Premier League (IPL) 2017 which left commentators and fans stunned.
Please Wait while comments are loading...