ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಡಿಯೋ: ಅಭಿಮಾನಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಕೊಟ್ಟ ಕೊಹ್ಲಿ!

ಐಪಿಎಲ್ 10ರಲ್ಲಿ ವಿರಾಟ್ ಕೊಹ್ಲಿ ಅವರು ಬ್ಯಾಟಿಂಗ್ ಹಾಗೂ ಕ್ಯಾಪ್ಟನ್ಸಿಯಲ್ಲಿ ಸೋತಿರಬಹುದು. ಆದರೆ, ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ಕೊಹ್ಲಿ ಸೋತಿಲ್ಲ. ಕೊನೆ ಪಂದ್ಯದಲ್ಲಿ ಗೆದ್ದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಅಭಿಮಾನಿಗೆ ನೀಡಿದ್ದಾರೆ.

By Mahesh

ನವದೆಹಲಿ, ಮೇ 17: ಐಪಿಎಲ್ 10ರಲ್ಲಿ ವಿರಾಟ್ ಕೊಹ್ಲಿ ಅವರು ಬ್ಯಾಟಿಂಗ್ ಹಾಗೂ ಕ್ಯಾಪ್ಟನ್ಸಿಯಲ್ಲಿ ಸೋತಿರಬಹುದು. ಆದರೆ, ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ಕೊಹ್ಲಿ ಸೋತಿಲ್ಲ. ಕೊನೆ ಪಂದ್ಯದಲ್ಲಿ ಗೆದ್ದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಅಭಿಮಾನಿಗೆ ನೀಡಿದ್ದಾರೆ.

ಹಿಂದೊಮ್ಮೆ ಬೌಂಡರಿ ಗೆರೆ ಬಳಿ ಫೀಲ್ಡ್ ಮಾಡುತ್ತಾ ಕೊಹ್ಲಿ ಅವರನ್ನು ಹುರಿದುಂಬಿಸಲು ಪ್ರೇಕ್ಷಕರು 'ಕೊಹ್ಲಿ ಕೊಹ್ಲಿ' ಎಂದು ಉದ್ಗರಿಸುವನ್ನು ಕೇಳಿಸಿಕೊಂಡ ಕೊಹ್ಲಿ ಅವರು, ಕೊಹ್ಲಿ ಕೊಹ್ಲಿ ಎಂದು ಕರೆಯಬೇಡಿ, ಇಂಡಿಯಾ, ಇಂಡಿಯಾ ಎಂದು ಚಿಯರ್ ಮಾಡಿ ಎಂದಿದ್ದನ್ನು ಕ್ರಿಕೆಟ್ ಅಭಿಮಾನಿಗಳು ಮರೆತ್ತಿಲ್ಲ. ಈಗ ಅಭಿಮಾನಿಗಳ ಜತೆ ಕೊಹ್ಲಿ ನಡೆದುಕೊಳ್ಳುವ ರೀತಿಗೆ ಉದಾಹರಣೆಯಾಗಿ ಇಲ್ಲೊಂದು ಪ್ರಸಂಗವಿದೆ[ಐಪಿಎಲ್ 10 ಅಚ್ಚರಿಯ 'ಶಾಟ್' ಬಾರಿಸಿದ ಕೊಹ್ಲಿ!]

IPL 2017: Virat Kohli gives away man of the match award to fans at Feroz Shah Kotla

ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಲೀಗ್ ಹಂತದ ಕೊನೆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಭರ್ಜರಿ ಪ್ರದರ್ಶನ ನೀಡಿ 45 ಎಸೆತಗಳಲ್ಲಿ 58ರನ್ ಚೆಚ್ಚಿದರು. ಆರ್ ಸಿಬಿ 20 ಓವರ್ ಗಳಲ್ಲಿ 161/6 ಸ್ಕೋರ್ ಮಾಡಿದರೆ, ಡೆಲ್ಲಿ ತಂಡ 151ರನ್ನಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.

ಈ ಪಂದ್ಯದ ಶ್ರೇಷ್ಠ ಆಟಗಾರ ಪ್ರಶಸ್ತಿ ಗಳಿಸಿದ ವಿರಾಟ್ ಕೊಹ್ಲಿ, ಪಂದ್ಯ ಶ್ರೇಷ್ಠ ಪ್ರಶಸ್ತಿ ಟ್ರೋಫಿಯನ್ನು ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಫ್ಯಾನ್ ಒಬ್ಬರಿಗೆ ನೀಡಿದರು. ಬೌಂಡರಿ ಗೆರೆಯತ್ತ ಬಂದ ಕೊಹ್ಲಿ, ಪ್ರಶಸ್ತಿಯನ್ನು ಪ್ರೇಕ್ಷಕರತ್ತ ಎಸೆಯುವ ವಿಡಿಯೋ ರೆಕಾರ್ಡ್ ಮಾಡಿ, ಯೂಟ್ಯೂಬಿಗೆ ಹಾಕಲಾಗಿದೆ.[ವಿರಾಟ್ ಕೊಹ್ಲಿಗೆ ಅನುಕಂಪ ಏಕೆ? ಕಳಪೆ ಸಾಧನೆ ವಿರುದ್ಧ ಕಿಡಿ]

ಇದೇ ಪಂದ್ಯದಲ್ಲಿ ಸರಾಗವಾಗಿ ಡ್ರೈವ್ ಮಾಡಿ ಸಿಕ್ಸರ್ ಬಾರಿಸಿದ್ದ ಕೊಹ್ಲಿ ಅವರು ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಮತ್ತೆ ಲಯಕ್ಕೆ ಮರಳಿರುವ ಮುನ್ಸೂಚನೆಯನ್ನು ಎದುರಾಳಿಗಳಿಗೆ ನೀಡಿದ್ದಾರೆ.

Story first published: Wednesday, January 3, 2018, 10:04 [IST]
Other articles published on Jan 3, 2018
Read in English: English
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X