ಮುಂಬೈ ವಿರುದ್ಧ ಪಂದ್ಯಕ್ಕೆ ವಿರಾಟ್ ಕೊಹ್ಲಿ ಲಭ್ಯ: ಬಿಸಿಸಿಐ

Posted By:
Subscribe to Oneindia Kannada

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಅಭಿಮಾನಿಗಳ ಕಾಯುವಿಕೆ ಅಂತ್ಯವಾಗಿದೆ. ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಅವರು ಸಂಪೂರ್ಣವಾಗಿ ಫಿಟ್ ಆಗಿದ್ದಾರೆ. ಮುಂದಿನ ಪಂದ್ಯಕ್ಕೆ ಲಭ್ಯರಾಗಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಗುರುವಾರದಂದು ಪ್ರಕಟಿಸಿದೆ.

ಕ್ಲಿಕ್ ಮಾಡಿ: ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ

ಬೆಂಗಳೂರು ತಂಡ ತನ್ನ ತವರು ನೆಲದಲ್ಲಿ ಏಪ್ರಿಲ್ 14ರಂದು 4 ಗಂಟೆಗೆ ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. ಕೆಲ ದಿನಗಳಹಿಂದೆ ಮುಂದಿನ ಐಪಿಎಲ್ 2017 ಪಂದ್ಯಕ್ಕೆ ರೆಡಿ ಎಂದು ಕೊಹ್ಲಿ ಘೋಷಿಸಿದ್ದರು.

IPL 2017: Virat Kohli is fit and To Play For RCB against Mumbai Indians

ಜೂನ್ ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಮುಂದಿಟ್ಟುಕೊಂಡು ಆತುರವಾಗಿ ಮೈದಾನಕ್ಕೆ ಇಳಿಯುವುದು ಸಾಧ್ಯವಿಲ್ಲ. ನಾನು 120% ಫಿಟ್ ಎನಿಸಿದರೆ ಮಾತ್ರ ಕಣಕ್ಕಿಳಿಯುವೆ ಎಂದಿದ್ದರು. ಅದರಂತೆ, ಸಂಪೂರ್ಣವಾಗಿ ದೈಹಿಕ ಪರೀಕ್ಷೆ ನಡೆಸಿ ಫಿಟ್ ಎಂದು ಪ್ರಮಾಣ ಪತ್ರ ಬಂದ ನಂತರ ಬಿಸಿಸಿಐ ನಿರ್ಧಾರ ಪ್ರಕಟಿಸಿದೆ.

ಕೊಹ್ಲಿ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾದ ಆಲ್ ರೌಂಡರ್ ಶೇನ್ ವಾಟ್ಸನ್ ಅವರು ತಂಡವನ್ನು ಮುನ್ನಡೆಸಿದ್ದರು. ಮೂರು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯದಲ್ಲಿ ಜಯ ಗಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The wait is over for Royal Challengers Bangalore (RCB). Their captain Virat Kohli has been declared match fit and will lead the side tomorrow (April 14) in the Indian Premier League (IPL) 2017.
Please Wait while comments are loading...