10 ವರ್ಷ ಪೂರೈಸಿದ ಸಿಎಸ್ಕೆಗೆ ಅಭಿಮಾನದ ಮಹಾಪೂರ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 20 : ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ 5 ಐಪಿಎಲ್ ಫೈನಲ್ ಪಂದ್ಯಗಳನ್ನಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ನಾನಾ ಕಾರಣಗಳಿಂದಾಗಿ ತೆರೆಯ ಮರೆಗೆ ಸರಿದಿದ್ದರೂ, ಕ್ರಿಕೆಟ್ ಪ್ರೇಮಿಗಳು ಅದನ್ನು ಮರೆತಿಲ್ಲ.

ಹಳದಿ ದಿರಿಸಿನಲ್ಲಿ ಆಟವಾಡುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಮೊದಲ ಪಂದ್ಯವನ್ನಾಗಿ ಸರಿಯಾಗಿ 10 ವರ್ಷಗಳು ಸಂದಿವೆ. ಚೆನ್ನೈ ಸೂಪರ್ ಕಿಂಗ್ಸ್ ತನ್ನ ಐಪಿಎಲ್ ಅಭಿಯಾನವನ್ನು ಆರಂಭಿಸಿದ್ದು 2008ರಲ್ಲಿ ಕಿಂಗ್ಸ್ ಎಲೆವನ್ ಪಂಜಾಬ್ ವಿರುದ್ಧ.

ಈ ಸಂದರ್ಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಅಭಿಮಾನದ ಅಭಿನಂದನೆಯ ಹೊಳೆ ಹರಿಸಿದ್ದಾರೆ. ಹಲವಾರು ಸೆಲೆಬ್ರಿಟಿಗಳು, ಕ್ರಿಕೆಟ್ ಆಟಗಾರರು, ಅಭಿಮಾನಿಗಳು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಅಭಿನಂದಿಸಿದ್ದು, 8 ವರ್ಷಗಳ ಆಟವನ್ನು ಮೆಲುಕು ಹಾಕಿದ್ದಾರೆ.

ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ವಿರುದ್ಧ 240 ಬೃಹತ್ ರನ್ ಕೂಡಿಹಾಕಿತ್ತು. ಮೈಕಲ್ ಹಸ್ಸಿ ಅವರು 56 ಚೆಂಡುಗಳಲ್ಲಿ 116 ರನ್ ಗಳಿಸಿ ಮಿಂಚಿದ್ದರು. ಇದಕ್ಕೆ ಪ್ರತಿಯಾಗಿ ಪಂಜಾಪ್ ಭರ್ಜರಿಯಾಗಿ ಆಟವಾಡಿ 207 ರನ್ ಗಳಿಸಿ, 33 ರನ್ ಗಳಿಂದ ಸೋಲೊಪ್ಪಿಕೊಂಡಿತು.

ಧೋನಿಗೆ ಸಿಎಸ್ಕೆ ಅಭಿಮಾನಿಯ ಮೆಚ್ಚುಗೆ

8 ವರ್ಷಗಳ ಕಾಲ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನೇತೃತ್ವ ವಹಿಸಿದ್ದ ಮಹೇಂದ್ರ ಸಿಂಗ್ ಧೋನಿ ಅವರಿಗೆ ಅಭಿಮಾನಿಯೊಬ್ಬ ಶುಭಾಶಯ ಸಂದೇಶ ಕಳಿಸಿದ್ದಾನೆ. ಧೋನಿ ಅವರು ಈಗ ಪುಣೆ ಸೂಪರ್ ಜೈಂಟ್ಸ್ ತಂಡದಲ್ಲಿ ಆಟವಾಡುತ್ತಿದ್ದಾರೆ.

ಮಿಸ್ ಮಾಡಿಕೊಳ್ಳುತ್ತಿರುವ ಅಭಿಮಾನಿಗಳು

ನೆನಪಿನಂಗಳಕ್ಕೆ ಇಳಿದಿರುವ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ತಾವು ಆರಾಧಿಸುತ್ತಿದ್ದ ಕ್ರಿಕೆಟ್ ಆಟಗಾರರ ಚಿತ್ರ ಪ್ರಕಟಿಸಿ ಅಭಿಮಾನ ಮೆರೆದಿದ್ದಾರೆ.

ಸ್ಥಳೀಯ ಲುಂಗಿಯಲ್ಲಿ ಚೆನ್ನೈ ಆಟಗಾರರು

ನೆನಪುಗಳೇ ಎಷ್ಟು ಸುಮಧುರ ಅಲ್ಲವಾ? ತಂಡದಲ್ಲಿ ದೇಶವಿದೇಶದ ಆಟಗಾರರು ತುಂಬಿಕೊಂಡಿದ್ದರೂ ಅಲ್ಲಿ ಪ್ರಾದೇಶಿಕತೆಯಿತ್ತು. ಸ್ಥಳೀಯ ದಿರಿಸಾದ ಲುಂಗಿಯಲ್ಲಿ ಆಟಗಾರರು ಫೋಟೋ ತೆಗೆಸಿಕೊಂಡಿದನ್ನು ಫ್ಯಾನೊಬ್ಬ ಟ್ವಿಟ್ಟರಲ್ಲಿ ಹಂಚಿಕೊಂಡಿದ್ದಾನೆ. ಲುಂಗಿ ಹಾಕ್ಕೊಂಡು ಲುಂಗಿ ಡ್ಯಾನ್ಸ್ ಆಡದೆ ಇರ್ತಾರಾ?

ಹೇಮಾಂಗ್ ಬದಾನಿ ನುಡಿಗಳು

ಒಂದಾನೊಂದು ಕಾಲದಲ್ಲಿ ಭಾರತವನ್ನೂ ಪ್ರತಿನಿಧಿಸಿದ್ದ ಹೇಮಾಂಗ್ ಬದಾನಿ ಅವರು ಆರಂಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಟವಾಡಿದ್ದರು. ಅಂದಿನ ದಿನಗಳು ಎಂದೆಂದಿಗೂ ನೆನಪಿನಲ್ಲುಳಿಯುವಂಥದ್ದವು ಎಂದು ಅವರು ಹಳೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಎರಡು ವರ್ಷ ಇಪ್ಪತ್ತು ವರ್ಷದಂತಾಗಿದೆ

#10SupreYearsOfCSK ಹ್ಯಾಶ್ ಟ್ಯಾಗ್ ಇರುವ ಟ್ವಿಟ್ಟರ್ ಗಳನ್ನು ನೋಡಿ ಚೆನ್ನೈ ಸೂಪರ್ ಕಿಂಗ್ಸ್ ಇಲ್ಲದ ಎರಡು ವರ್ಷಗಳು ಇಪ್ಪತ್ತು ವರ್ಷಗಳ ಅಂತರವಿದ್ದಂತೆ ಆಗುತ್ತಿದೆ. ಏನೇ ಆಗಲಿ ಚೆನ್ನೈ ಸೂಪರ್ ಕಿಂಗ್ಸ್ ಮೇಲಿನ ಪ್ರೀತಿ, ಅಭಿಮಾನ ಎಂದಿಗೂ ಹೀಗೇ ಇರುತ್ತದೆ ಎಂದಿದ್ದಾರೆ ಅಭಿಮಾನಿಯೊಬ್ಬರು.

ಸಿಎಸ್ಕೆ ಹುಟ್ಟುಹಬ್ಬದ ಶುಭಾಶಯಗಳು

ಚಾಂಪಿಯನ್ನರನ್ನು ಹುಟ್ಟಿಸಲು ಸಾಧ್ಯವಿಲ್ಲ, ಅವರು ತಾವಾಗಿಯೇ ಹುಟ್ಟಿಕೊಳ್ಳುತ್ತಾರೆ ಎಂದು ಮತ್ತೊಬ್ಬ ಕುಮಾರ್ ಗುರು ಎಂಬ ಸಿಎಸ್ಕೆ ಅಭಿಮಾನಿಯೊಬ್ಬರು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಶ್ಲಾಘಿಸಿದ್ದು, ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಹಚ್ಚು ಅಭಿಮಾನಿಗಳ ಅಭಿಮಾನದ ಹೊಳೆ

ಅಭಿಮಾನಿಗಳ ಹುಚ್ಚಿಗೆ ಎಣೆಯೇ ಇರುವುದಿಲ್ಲ. ಇಲ್ಲಿ ಮತ್ತೊಬ್ಬ ಅಭಿಮಾನಿ ಚೆನ್ನೈ ಸೂಪರ್ ಕಿಂಗ್ಸ್ ಮೇಲಿನ ತಮ್ಮ ಪ್ರೀತಿಯನ್ನು, ಅದಕ್ಕೆ ಅವರ ಸಹೋದರ ಪ್ರತಿಕ್ರಿಯಿಸಿದ್ದನ್ನು ಟ್ವಿಟ್ಟರಲ್ಲಿ ಹರಿಯಬಿಟ್ಟಿದ್ದಾರೆ.

ಕೋಚ್ ಆಗಿದ್ದ ಸ್ಟೀಫನ್ ಫ್ಲೆಮಿಂಗ್

ಚೆನ್ನೈ ಸೂಪರ್ ಕಿಂಗ್ಸ್ ಯಶಸ್ಸಿನಲ್ಲಿ ಅದರ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರ ಯೋಗದಾನ ಅಪಾರ. ಬರೀ ಆಟಗಾರರನ್ನು ಹೊಗಳಿ ಅಟ್ಟಕ್ಕೇರಿಸದೆ ಇಲ್ಲೊಬ್ಬ ಅಭಿಮಾನಿಯೊಬ್ಬರು ಕೋಚ್ ಫ್ಲೆಮಿಂಗ್ ಅವರನ್ನು ಆ ಯಶಸ್ಸಿಗಾಗಿ ಅಭಿನಂದಿಸಿದ್ದಾರೆ.

ಮತ್ತೆ ಮಹಿ ವಾಪಸ್ ಬಂದರೆ...

ಒಂದು ವೇಳೆ ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮರಳಿ ನಾಯಕರಾಗಿ ಬಂದರೆ, ಐಪಿಎಲ್ ಇತಿಹಾಸದಲ್ಲಿ ಅದಕ್ಕಿಂತ ಅತ್ಯದ್ಭುತ ಸಂಗತಿ ಮತ್ತೊಂದಿಲ್ಲ ಎಂದು ವಿನಯ್ ಅರ್ಜುನ್ ಅವರು ಕನಸು ಕಂಡಿದ್ದಾರೆ. ನನಸಾಗುವುದೆ ಈ ಕನಸು?

2011ರಲ್ಲಿ ಟ್ರೋಫಿ ಎತ್ತಿಹಿಡಿದಾಗ

ನೆನಪುಗಳು ಯಾವತ್ತಿಗೂ ಸುಮಧುರ. ಅದರಲ್ಲೂ ಟ್ರೋಫಿ ಗೆದ್ದ ಕ್ಷಣವನ್ನು ಮರೆಯಲು ಸಾಧ್ಯವೆ? 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿದಾಗ ತೆಗೆದ ಚಿತ್ರವನ್ನು ಕೃಷ್ಣ ರಾಹುಲ್ ಎಂಬುವವರು ಹಂಚಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
As the Chennai-based franchise complete 10 years in IPL, fans flocked twitter to wish and celebrate the '10 super years of CSK'.
Please Wait while comments are loading...