ಧೋನಿ ಹೊಡೆದ ಸಿಕ್ಸ್ ಮುರಿಯಿತು ಹರ್ಷ್ ಗೋಯೆಂಕಾ ಸ್ಪೆಕ್ಸ್!

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 17: ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಮತ್ತೆ ಲಯಕ್ಕೆ ಮರಳಿದ್ದಾರೆ. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಧೋನಿ ಎಂದಿನಂತೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ

ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡದಲ್ಲಿ ಸಾಮಾನ್ಯ ಆಟಗಾರನಾಗಿ ಆಡುತ್ತಿರುವ ಮಾಜಿ ನಾಯಕ ಎಂಎಸ್ ಧೋನಿ ಅವರು ಮತ್ತೆ ಸಿಕ್ಸ್ ,ಫೋರ್ ಬಾರಿಸುತ್ತಿದ್ದಾರೆ.[ಮುಖ್ಯಾಂಶಗಳು : ಪುಣೆ ವಿರುದ್ಧ ಚೇಸಿಂಗ್ ಮರೆತ ಆರ್ ಸಿಬಿ]

ಚಿನ್ನಸ್ವಾಮಿ ಕ್ರೀಡಾಂಗಣ ಬಾರಿಸಿದ ಸಿಕ್ಸರ್ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಸಕತ್ ಚರ್ಚೆಯ ವಿಷಯವಾಗಿದೆ. ಸಿಕ್ಸ್ ಬಾರಿಸಿದ ಮೇಲೆ ಚೆಂಡು ಎಲ್ಲೆಲ್ಲಿ ಹೋಯ್ತು? ಏನೆಲ್ಲ ಆಯ್ತು ಮುಂದೆ ಓದಿ..[ಪುಣೆ ತಂಡಕ್ಕೆ 27ರನ್ ಗಳ ಅಂತರದ ಜಯ]

ಧೋನಿ 28 ಮಾತ್ರ ಗಳಿಸಿದರೂ ನಾಯಕ ಸ್ಟೀವ್ ಸ್ಮಿತ್ 47 ಎಸೆತಗಳಲ್ಲಿ 54ರನ್ ಜೊತೆಯಾಟ ಪ್ರದರ್ಶಿಸಿದರು.[ಐಪಿಎಲ್ 2017: ಅಂಕಪಟ್ಟಿ]

ಪಂದ್ಯದ 14ನೇ ಓವರ್ ನಲ್ಲಿ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಎಸೆತವನ್ನು ಮುನ್ನುಗ್ಗಿ ಬಂದು ಲಾಗ್ ಆನ್ ನಲ್ಲಿ ಸಿಕ್ಸ್ ಬಾರಿಸಿದ ಧೋನಿ, ತಮ್ಮ ಟೀಕಿಸಿದವರಿಗೆ ಬ್ಯಾಟ್ ಮೂಲಕವೇ ಉತ್ತರಿಸಿದ್ದಾರೆ. ಧೋನಿ ಸಿಕ್ಸ್ ಬಗ್ಗೆ ಬಂದಿರುವ ಹಾಸ್ಯಮಯ ಪ್ರತಿಕ್ರಿಯೆಗಳು ಇಲ್ಲಿವೆ...

ಲಯಕ್ಕೆ ಮರಳಿದ ಧೋನಿ

ಲಯಕ್ಕೆ ಮರಳಿದ ಧೋನಿ

25 ಎಸೆತಗಳಲ್ಲಿ 28ರನ್ (3 ಬೌಂಡರಿ, 1ಸಿಕ್ಸರ್) ಬಾರಿಸಿದ ಧೋನಿ ಇನ್ನಷ್ಟು ಹೊಡೆತಗಳನ್ನು ಬಾರಿಸುವ ಕುರುಹು ತೋರಿದ್ದರು. ಆದರೆ, 16ನೇ ಓವರ್ ನಲ್ಲಿ ಶೇನ್ ವಾಟ್ಸನ್ ಅವರ ಎಸೆತಕ್ಕೆ ಬೋಲ್ಡ್ ಆಗಿ ಔಟಾದರು.

ಗೋಯೆಂಕಾ ಕನ್ನಡಕ ಛಿದ್ರ

ಧೋನಿ ಅವರು ಚಾಹಲ್ ಎಸೆತವನ್ನು ಲಾಗ್ ಆನ್ ಮೇಲೆ ಬಾರಿಸಿದ ಸಿಕ್ಸರ್ ಚೆಂಡು ತಂಡದ ಮಾಲೀಕ ಹರ್ಷ್ ಗೋಯೆಂಕಾ ಕನ್ನಡಕವನ್ನು ಪೀಸ್ ಪೀಸ್ ಮಾಡಿತಂತೆ. ವಿವಿಎಸ್ ಲಕ್ಷ್ಮಣ್ ಅವರ ಲ್ಯಾಪ್ ಟಾಪ್ ಛಿದ್ರಗೊಂಡ ಕಥೆ ನಂತರ ಹೀಗೊಂದು ಫನ್ನಿ ಟ್ವೀಟ್.

ಗೊಯೆಂಕಾ ಮನೆ ಅಂಗಳಕ್ಕೆ ಚೆಂಡು

ರೈಸಿಂಘ್ ಪುಣೆ ಸೂಪರ್ ಜೈಂಟ್ ತಂಡದ ನಾಯಕತ್ವದ ವಿಷಯದಲ್ಲಿ ಎಂಎಸ್ ಧೋನಿಯನ್ನು ಕಡೆಗಣಿಸಿ ಸ್ಟೀವ್ ಸ್ಮಿತ್ ರನ್ನು ಕೂರಿಸಿದ್ದಲ್ಲದೆ, ಸಮರ್ಥಿಸಿಕೊಂಡ ತಂಡದ ಮಾಲೀಕ ಹರ್ಷ್ ಗೊಯೆಂಕಾ ಅವರಿಗೆ ಧೋನಿ ತಕ್ಕ ಉತ್ತರ ನೀಡಿದ್ದಾರೆ ಎಂದು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಇದಕ್ಕಿಂತ ದೊಡ್ಡ ಸಿಕ್ಸರ್ ಇದ್ಯಾ

ಧೋನಿ ಬಾರಿಸಿದ ಸಿಕ್ಸರ್ ಗೂ ದೊಡ್ಡ ಸಿಕ್ಸರ್ ಯಾರಾದರೂ ಬಾರಿಸಿದ್ದಾರಾ? ಎಂದು ಪತ್ರಕರ್ತ ಅಯಾಜ್ ಕೇಳಿದ ಪ್ರಶ್ನೆಗೆ ಕರ್ನಾಟಕದ ಸದಾನಂದ ವಿಶ್ವನಾಥ್ ಬಾರಿಸಿದ್ದಾರೆ ಎಂಬ ಉತ್ತರ ಬಂದಿದೆ.

ಚೆಂಡು ಹೋದ ದೂರ ಅಳೆಯುವುದು ಹೇಗೆ

ಧೋನಿ ಹೊಡೆದ ಸಿಕ್ಸ್ ಎಷ್ಟು ದೂರ ಹೋಗಿದೆ ಎಂಬುದನ್ನು ಅಳಯಲು ಹೆಲಿಕಾಪ್ಟರ್ ಬರಬೇಕು.

ಬಾಲ್ ಬಾಯ್ ಗಳ ಕಥೆ ಏನು?

ಧೋನಿ ಈ ರೀತಿ ಸಿಕ್ಸರ್ ಬಾರಿಸಿದರೆ ಬಾಲ್ ಬಾಯ್ ಗಳ ಕಥೆ ಏನು?

ಬ್ಯಾಟ್ ಮೂಲಕ ಉತ್ತರ

ಟೀಕಾಕಾರರಿಗೆ ಬ್ಯಾಟ್ ಮೂಲಕವೇ ಉತ್ತರಿಸಿದ ಧೋನಿ

ಹೆಲಿಕಾಪ್ಟರ್ ಸಿಕ್ಸ್

ಹೆಲಿಕಾಪ್ಟರ್ ಸಿಕ್ಸ್ ಆಯ್ತು ಈಗ ರೂಪ್ ಟಾಫ್ ಸಿಕ್ಸ್ ಟ್ರೆಂಡ್ ಶುರುವಾಯಿತು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Indian captain Mahendra Singh Dhoni came back to some run-scoring form in the 16th match of IPL 10. the 14th over as MSD came dancing down the track to deposit Yuzvendra Chahal over the long on for a huge six. Here are the reactions.
Please Wait while comments are loading...