ಐಪಿಎಲ್ : ಪರ್ಪಲ್ ಕ್ಯಾಪ್ ರೇಸಿನಲ್ಲಿ ಭುವಿ ಮುಂದೆ!

Posted By:
Subscribe to Oneindia Kannada

ಬೆಂಗಳೂರು, ಮೇ 12: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ20 ಕದನದಲ್ಲಿ ಬೌಲರ್ ಗಳಿಗಿಂತ ಬ್ಯಾಟ್ಸ್ ಮನ್ ಗಳೇ ಹೆಚ್ಚು ವಿಜೃಂಭಿಸುವುದು ಸಾಮಾನ್ಯ ಸಂಗತಿ.

ಆದರೆ, ಐಪಿಎಲ್ 10ರಲ್ಲಿ ಸ್ಪಿನ್ನರ್ ಗಳಲ್ಲದೆ ವೇಗಿಗಳು ಗಮನ ಸೆಳೆದಿದ್ದಾರೆ. ಪರ್ಪಲ್ ಕ್ಯಾಪ್ ರೇಸಿನಲ್ಲಿ ಭಾರತದ ವೇಗಿ ಭುವನೇಶ್ವರ್ ಕುಮಾರ್ ಎಲ್ಲರಿಗಿಂತ ಮುಂದಿದ್ದಾರೆ.

ಭುವನೇಶ್ವರ್ ಕುಮಾರ್ ಅವರು 12 ಪಂದ್ಯಗಳಿಂದ 23 ವಿಕೆಟ್ ಗಳನ್ನು ಗಳಿಸಿ ಅಗ್ರಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾದ ಲೆಗ್ ಸ್ಪಿನ್ನರ್ ಇಮ್ರಾನ್ ತಾಹೀರ್ ಅವರು 10 ಪಂದ್ಯಗಳಿಂದ 18 ವಿಕೆಟ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಮೇ 11ರ ತನಕದ ಆಟಗಾರರ ಸಾಧನೆಯ ಎಣಿಕೆಯಂತೆ ಟಾಪ್ 10 ಪಟ್ಟಿಯಲ್ಲಿ 6 ಮಂದಿ ಭಾರತದ ಬೌಲರ್ ಗಳಿದ್ದಾರೆ. ಟಾಪ್ 10 ಪಟ್ಟಿ ಮುಂದೆ ಓದಿ...

#1 ಭುವನೇಶ್ವರ್ ಕುಮಾರ್

#1 ಭುವನೇಶ್ವರ್ ಕುಮಾರ್

ಸನ್ ರೈಸರ್ಸ್ ಹೈದರಾಬಾದ್ ಪರ ಆಡುವ ಭುವನೇಶ್ವರ್ ಕುಮಾರ್ ಅವರು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಭುವನೇಶ್ವರ್ ಕುಮಾರ್ ಅವರು 6.93 ಎಕಾನಮಿಯಂತೆ 11 ಪಂದ್ಯಗಳಿಂದ 23 ವಿಕೆಟ್ ಗಳಿಸಿದ್ದಾರೆ.

#2 ಇಮ್ರಾನ್ ತಾಹೀರ್

#2 ಇಮ್ರಾನ್ ತಾಹೀರ್

ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡದ ಲೆಗ್ ಸ್ಪಿನ್ನರ್ ಇಮ್ರಾನ್ ತಾಹೀರ್ ಅವರು 12 ಪಂದ್ಯಗಳಿಂದ 18 ವಿಕೆಟ್ ಗಳಿಸಿದ್ದಾರೆ. 7.85ರ ರನ್ ಸರಾಸರಿಯ ಹೊಂದಿದ್ದು, ಎರಡನೇ ಸ್ಥಾನದಲ್ಲಿದ್ದಾರೆ.

#3 ಮಿಚೆಲ್ ಮೆಕ್ಲೆನಗನ್

#3 ಮಿಚೆಲ್ ಮೆಕ್ಲೆನಗನ್

ಮುಂಬೈ ಇಂಡಿಯನ್ಸ್ ನ ಪ್ರಮುಖ ವೇಗಿಯಾಗಿರುವ ಮಿಚೆಲ್ ಮೆಕ್ಲೆನಗನ್ ಅವರು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್ ನ ವೇಗಿ 12 ಪಂದ್ಯಗಳಿಂದ 17 ವಿಕೆಟ್ ಗಳಿಸಿದ್ದಾರೆ.

#4 ಜಯದೇವ್ ಉನದ್ಕತ್

#4 ಜಯದೇವ್ ಉನದ್ಕತ್

ರೈಸಿಂಗ್ ಪುಣೆ ಸೂಪರ್ ಜೈಂಟ್ ವೇಗಿ ಜಯದೇವ್ ಉನದ್ಕತ್ 8 ಪಂದ್ಯಗಳಿಂದ 17 ವಿಕೆಟ್ ಗಳಿಸಿದ್ದಾರೆ. ಎಡಗೈ ವೇಗಿ ಈಗ ನಾಲ್ಕನೇ ಸ್ಥಾನದಲ್ಲಿದ್ದಾರೆ.

#5 ಸಂದೀಪ್ ಶರ್ಮ

#5 ಸಂದೀಪ್ ಶರ್ಮ

ಈ ಪಟ್ಟಿಯಲ್ಲಿರುವ ಮೂರನೇ ವೇಗಿಯಾಗಿದ್ದು, ಕಿಂಗ್ಸ್ ಎಲೆವನ್ ಪಂಜಾಬ್ ನ ಪ್ರಮುಖ ಬೌಲರ್ ಆಗಿದ್ದು, 11 ಪಂದ್ಯಗಳಿಂದ 16 ವಿಕೆಟ್ ಗಳನ್ನು ಗಳಿಸಿದ್ದಾರೆ. ಡೆಲ್ಲಿ ವಿರುದ್ಧ 4/20 ಇವರ ಶ್ರೇಷ್ಠ ಬೌಲಿಂಗ್ ಆಗಿದೆ.

#6 ಕ್ರಿಸ್ ವೋಕ್ಸ್

#6 ಕ್ರಿಸ್ ವೋಕ್ಸ್

ಕೋಲ್ಕತಾ ನೈಟ್ ರೈಡರ್ಸ್ ಪರ ವೇಗಿ ಕ್ರಿಸ್ ವೋಕ್ಸ್ ಅವರು 13 ಪಂದ್ಯಗಳಲ್ಲಿ 17 ವಿಕೆಟ್ ಪಡೆದು ಆರನೇ ಸ್ಥಾನದಲ್ಲಿದ್ದಾರೆ.

#7 ಸಿದ್ಧಾರ್ಥ್ ಕೌಲ್

#7 ಸಿದ್ಧಾರ್ಥ್ ಕೌಲ್

ಸನ್ ರೈಸರ್ಸ್ ಹೈದರಾಬಾದ್ ವೇಗಿ ಸಿದ್ದಾರ್ಥ್ ಕೌಲ್ ಅವರು ಪಟ್ಟಿಯಲ್ಲಿರುವ ಐದನೇ ಬೌಲರ್ ಆಗಿದ್ದಾರೆ. 8 ಪಂದ್ಯಗಳಿಂದ 15 ವಿಕೆಟ್ ಗಳನ್ನು ಗಳಿಸಿದ್ದಾರೆ.

#8 ಜಸ್ ಪ್ರೀತ್ ಬೂಮ್ರಾ

#8 ಜಸ್ ಪ್ರೀತ್ ಬೂಮ್ರಾ

ಮುಂಬೈ ಇಂಡಿಯನ್ಸ್ ಬೌಲರ್ ಜಸ್ ಪ್ರೀತ್ ಬೂಮ್ರಾ ಅವರು 12 ಪಂದ್ಯಗಳಲ್ಲಿ 14 ವಿಕೆಟ್ ಗಳಿಸಿದ್ದಾರೆ. ಗುಜರಾತ್ ಲಯನ್ಸ್ ವಿರುದ್ಧ ಸೂಪರ್ ಓವರ್ ಮಾಡಿ 4 ರನ್ ಮಾತ್ರ ನೀಡಿ ಎಲ್ಲರ ಗಮನ ಸೆಳೆದರು.

#9 ರಶೀದ್ ಖಾನ್

#9 ರಶೀದ್ ಖಾನ್

18 ವರ್ಷ ವಯಸ್ಸಿನ ಅಫ್ಘಾನಿಸ್ತಾನದ ಬೌಲರ್ ರಶೀದ್ ಖಾನ್ ಅವರು ಐಪಿಎಲ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಸನ್ ರೈಸರ್ಸ್ ಹೈದರಬಾದ್ ಪರ ಆಡುವ ರಶೀದ್ 12 ಪಂದ್ಯಗಳಲ್ಲಿ 14 ವಿಕೆಟ್ ಗಳನ್ನು ಗಳಿಸಿದ್ದಾರೆ.

#10 ಯಜುವೇಂದ್ರ ಚಾಹಲ್

#10 ಯಜುವೇಂದ್ರ ಚಾಹಲ್

ಯಜುವೇಂದ್ರ ಚಾಹಲ್ ಅವರು ಟಾಪ್ 10ನಲ್ಲಿರುವ ಆರನೇ ಬೌಲರ್ ಆಗಿದ್ದು, 12 ಪಂದ್ಯಗಳಲ್ಲಿ 14 ವಿಕೆಟ್ ಗಳನ್ನು ಗಳಿಸಿ ಟಾಪ್ 10 ಪಟ್ಟಿಯಲ್ಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
As the ongoing Indian Premier League (IPL) 2017 has entered the final leg of its journey, IPL 10 has witnessed some very exciting bowling performances from both the overseas players and the Indians.After 50 matches, here are the top 10 bowlers (in terms of wickets) - as on May 11, 2017.
Please Wait while comments are loading...