ಐಪಿಎಲ್ 2017 ಟೂರ್ನಿ ಭಾರತದಿಂದ ಹೊರಕ್ಕೆ!

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ನವದೆಹಲಿ, ಏಪ್ರಿಲ್ 21 : ಮುಂದಿನ ವರ್ಷ 2017 ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 10 ಟೂರ್ನಿಯನ್ನು ಹೊರ ದೇಶದಲ್ಲಿ ನಡೆಸುವ ಚಿಂತನೆಯನ್ನು ಬಿಸಿಸಿಐ ನಡೆಸಿದೆ. ಇತ್ತೀಚೆಗೆ ಕಿಂಗ್ಸ್ XI ಪಂಜಾಬ್ ಸಹ ಒಡತಿ ಪ್ರೀತಿ ಜಿಂಟಾ ಕೂಡಾ ಐಪಿಎಲ್ ಆಯೋಜನೆ ಬಗ್ಗೆ ತಗಾದೆ ತೆಗೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ಹೌದು, 2016ನೇ ಐಪಿಎಲ್ ಗೆ ಹಲವು ವಿಘ್ನಗಳು ಎದುರಾಗಿರುವ ಕಾರಣ ಮುಂದಿನ ಐಪಿಎಲ್ ನ್ನು ಬೇರೆ ರಾಷ್ಟ್ರದಲ್ಲಿ ಆಯೋಜಿಸುವ ಬಗ್ಗೆ ಚಿಂತನೆಗಳನ್ನು ನಡೆಸಲಾಗುತ್ತಿದೆ ಎಂದು ಭಾರತೀಯ ಕ್ರಿಕೆಟ್ ಬೋರ್ಡ್ (ಬಿಸಿಸಿಐ) ಕಾರ್ಯದರ್ಶಿ ಅನುರಾಗ್ ಠಾಕೂರ್ ಏ.21 ಗುರುವಾರ ತಿಳಿಸಿದ್ದಾರೆ.

2009 ರಲ್ಲಿ ಭಾರತದಲ್ಲಿ ಅಸೆಂಬ್ಲಿ ಚುನಾವಣೆಗಳು ಎದುರಾಗಿದ್ದ ಹಿನ್ನಲೆಯಲ್ಲಿ 2009 ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯಗಳನ್ನು ದಕ್ಷಿಣ ಆಫ್ರಿಕದಲ್ಲಿ ನಡೆಸಲಾಗಿತ್ತು ಹಾಗೂ 2014 ರ ಐಪಿಎಲ್ ನ ಮೊದಲ 15 ದಿನಗಳ ಪಂದ್ಯಗಳನ್ನು ಸಹ ಯುನೈಟೆಡ್ ಅರಬ್ ಎಮಿರೇಟ್ಸ್ ರಾಷ್ಟ್ರದಲ್ಲಿ ಆಯೋಜಿಸಲಾಗಿತ್ತು.

IPL 2017 to be played outside India?

ಬೇರೆ ರಾಷ್ಟ್ರಗಳಲ್ಲಿ ನಡೆಸಲಾಗುವ ಐಪಿಎಲ್ ಟೂರ್ನಿಗೆ ತಗಲುವ ಖರ್ಚು ವೆಚ್ಚಗಳನ್ನು ಆಯಾ ತಂಡಗಳ ಫ್ರಾಂಚೈಸಿಗಳು ಹಾಗೂ ಬಿಸಿಸಿಐ ಶೇರ್ ಮಾಡಿಕೊಳ್ಳಲಿದೆ.

ಇತ್ತೀಚೆಗಷ್ಟೇ ಬಿಸಿಸಿಐನ ಖಜಾಂಚಿ ಅನಿರುದ್ಧ್ ಚೌಧರಿ ಅವರು ಐಪಿಎಲ್ ನ್ನು ಹೊರ ರಾಷ್ಟ್ರಗಳಲ್ಲಿ ಆಯೋಜಿಸಲಾಗುವುದು ಎಂದು ಟ್ವೀಟ್ ಮಾಡಿದ್ದರು. ಐಪಿಎಲ್ 2016 ಗೆ ಯಾರು ಆಸಕ್ತಿಯನ್ನು ತೋರಿಸುತ್ತಿಲ್ಲ. ಕೆಲವರು ಟೂರ್ನಿಯ ವಿರುದ್ಧ ಆಕ್ಷೇಪಣೆಗಳನ್ನು ಸಲ್ಲಿಸಿರುವುದಕ್ಕೆ ಮುಂದಿನ ಐಪಿಎಲ್ ನ್ನು ಹೊರ ದೇಶಗಳಲ್ಲಿ ನಡೆಸುವ ಚಿಂತನೆಗಳು ನಡೆದಿವೆ ಎನ್ನಲಾಗುತ್ತಿದೆ.

ಮಹಾರಾಷ್ಟ್ರ ರಾಜ್ಯದಲ್ಲಿ ಬರಗಾಲದಿಂದ ಪಂದ್ಯಗಳಿಗೆ ನೀರನ್ನು ಕೊಡಲಾಗುವುದಿಲ್ಲ ಕ್ರಿಕೆಟ್ ಗಿಂತ ಜನರೇ ಮುಖ್ಯ ಹಾಗಾಗಿ 12 ಪಂದ್ಯಗಳನ್ನು ಬೇರೆಡೆಗೆ ಆಯೋಜಿಸಿ ಎಂದು ಬಾಂಬೆ ಹೈಕೋರ್ಟ್ ಬಿಸಿಸಿಐ ತಿಳಿಸಿತ್ತು. ಇದರಿಂದ ಒತ್ತಡಕ್ಕೆ ಸಿಲುಕಿದ ಬಿಸಿಸಿಐ ತಕ್ಷಣವೇ ಸ್ಥಳಾಂತರಿಸಿವುದು ಕಷ್ಟವಾಗುತ್ತದೆ ಎಂದು ಹೇಳಿತ್ತಾದರೂ ಕೋರ್ಟ್ ಅದ್ಯಾವುದಕ್ಕೆ ತಲೆ ಕೆಡಸಿಕೊಳ್ಳಲಿಲ್ಲ. ವಿಧಿ ಇಲ್ಲದೇ ಪಂದ್ಯಗಳನ್ನು ಬೇರೆ ರಾಜ್ಯಗಳಿಗೆ ಸ್ಥಳಾಂತರ ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The members of the Indian Premier League's (IPL) governing council are likely to deliberate on whether the 2017 edition of the cash-rich tourney can be held abroad, BCCI secretary Anurag Thakur revealed today (April 21)
Please Wait while comments are loading...