ಪ್ಲೇ ಆಫ್ ವೇಳಾಪಟ್ಟಿ , ಮುಂಬೈ ವಿರುದ್ಧ ಪುಣೆ ಕದನ

Posted By:
Subscribe to Oneindia Kannada

ಮುಂಬೈ, ಮೇ 14 : ಕೆಕೆಆರ್ ತಂಡವನ್ನು ಮಣಿಸಿ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಮುಂಬೈ ಇಂಡಿಯನ್ಸ್ ತಂಡ ಈಗ ಪ್ಲೇ ಆಫ್ ನಲ್ಲಿ ತವರು ನೆಲದಲ್ಲಿ ಆಡುವ ಸದವಕಾಶ ಪಡೆದುಕೊಂಡಿದೆ. ಕೋಲ್ಕತ್ತಾ ಮೇಲಿನ ಜಯದಿಂದ ಮುಂಬೈ ತಂಡಕ್ಕೆ ಸುಲಭವಾಗಿ ಫೈನಲ್ ಗೆ ತಲುಪುವ ಅವಕಾಶ ಸಿಕ್ಕಿದೆ.

ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ, ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಕೋಲ್ಕತಾ, 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 164 ರನ್ ಮಾತ್ರ ಗಳಿಸಿತು.

ಐಪಿಎಲ್ ನಲ್ಲಿ ಈವರೆಗೆ ತಾನು ಆಡಿದ 14 ಪಂದ್ಯಗಳಿಂದ ಒಟ್ಟು 20 ಅಂಕಗಳ ಪಡೆಯುವ ಮೂಲಕ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು.

ಕೊನೆ ಲೀಗ್ ಪಂದ್ಯಕ್ಕೂ ಮುನ್ನ ಪುಣೆ ಹಾಗೂ ಪಂಜಾಬ್ ತಂಡಗಳು ತಲಾ 16 ಅಂಕಗಳನ್ನು ಹೊಂದಿತ್ತು, ಅಂಕಪಟ್ಟಿಯಲ್ಲಿ ಕ್ರಮವಾಗಿ 4ನೇ ಹಾಗೂ 5ನೇ ಸ್ಥಾನಗಳಲ್ಲಿದ್ದವು. ಈ ಪಂದ್ಯದಲ್ಲಿ ಗೆದ್ದ ಪುಣೆ ತಂಡವು ಅಂಕಪಟ್ಟಿಯ 2ನೇ ಸ್ಥಾನಗಳಲ್ಲಿರುವ ತಂಡಗಳಿಗೆ ಸಡ್ಡು ಹೊಡೆದು ಪ್ಲೇ ಆಫ್ ಗೆ ಅರ್ಹತೆ ಪಡೆದಿದೆ.

IPL 2017: Teams for play-offs, venues and schedule (May 16 to 19)

ಲೀಗ್ ಹಂತದ ನಂತರ ಅಂಕಪಟ್ಟಿ
1. ಮುಂಬೈ - 20 ಅಂಕಗಳು.
2. ಪುಣೆ - 18 ಅಂಕಗಳು
3. ಹೈದ್ರಾಬಾದ್ - 17 ಅಂಕಗಳು
4. ಕೋಲ್ಕತಾ- 16 ಅಂಕಗಳು

ಪ್ಲೇ ಆಫ್ ವೇಳಾಪಟ್ಟಿ:
* ಮೇ 16 (ಮಂಗಳವಾರ)- ಕ್ವಾಲಿಫೈಯರ್ 1 (8 PM IST)
ಮುಂಬೈ ಇಂಡಿಯನ್ಸ್ vs ರೈಸಿಂಗ್ ಪುಣೆ ಸೂಪರ್ ಜೈಂಟ್, ವಾಂಖೆಡೆ ಸ್ಟೇಡಿಯಂ, ಮುಂಬೈ.

* ಮೇ 17 (ಬುಧವಾರ)- ಎಲಿಮಿನೇಟರ್ (8 PM IST) -
ಸನ್ ರೈಸರ್ಸ್ ಹೈದರಾಬಾದ್ vs ಕೋಲ್ಕತ್ತಾ ನೈಟ್ ರೈಡರ್ಸ್, ಎಂ ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು.

* ಮೇ 19 ( ಶುಕ್ರವಾರ) - ಕ್ವಾಲಿಫೈಯರ್ 2 (8 PM IST) -
ಕ್ವಾಲಿಫೈಯರ್ 1 ಸೋತ ತಂಡ Vs ಎಲಿಮಿನೇಟರ್ ವಿಜೇತ ತಂಡ, ಎಂ ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು.

ಮೇ 20- ವಿಶ್ರಾಂತ ದಿನ

* ಮೇ 21 (ಭಾನುವಾರ) - ಫೈನಲ್ (8 PM IST) -
ಕ್ವಾಲಿಫೈಯರ್ 1 ವಿಜೇತ ತಂಡ Vs ಕ್ವಾಲಿಫೈಯರ್ 2 ತಂಡ, ರಾಜೀವ್ ಗಾಂಧಿ ಸ್ಟೇಡಿಯಂ, ಹೈದರಾಬಾದ್

* ಮೇ 22 (ಸೋಮವಾರ) -
ರಿಸರ್ವ್ ಡೇ: ಕ್ವಾಲಿಫೈಯರ್ ಹಾಗೂ ಎಲಿಮಿನೇಟರ್ ಗೆ ರಿಸರ್ವ್ ಡೇ ಇಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mumbai Indians (MI) will have home advantage in the Indian Premier League (IPL) 2017 play-offs after emerging as number one in the 8-team standings.
Please Wait while comments are loading...