ಟಿ20 ವಿಶ್ವ ದಾಖಲೆ ಹಿಂದೆ ಬಿದ್ದ ಕ್ರಿಸ್ ಗೇಲ್

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 16: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರ, ವೆಸ್ಟ್ ಇಂಡೀಸ್ ನ ದೈತ್ಯ ಕ್ರಿಸ್ ಗೇಲ್ ಅವರು ಏಪ್ರಿಲ್ 16ರಂದು ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧದ ಪಂದ್ಯದಲ್ಲಿ ವಿಶ್ವದಾಖಲೆ ನಿರ್ಮಿಸುವ ಸಾಧ್ಯತೆಯಿದೆ. ಗೇಲ್ ಅವರು ನಿರ್ಮಿಸಲಿರುವ ಹೊಸ ಟಿ20 ವಿಶ್ವದಾಖಲೆ ಬಗ್ಗೆ ಇನ್ನಷ್ಟು ವಿವರ ಮುಂದೆ ಓದಿ..

ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ

ಆರ್ ಸಿಬಿಯಲ್ಲಿ ಕ್ರಿಸ್ ಗೇಲ್ ಆಡುತ್ತಾರೋ ಇಲ್ಲವೋ ಎಂಬ ಕುತೂಹಲವಿದೆ. ಒಂದು ವೇಳೆ ಆಡಿದರೆ ವಿಶ್ವದಾಖಲೆ ನಿರ್ಮಿಸಲು ಕೇವಲ 3ರನ್ ಮಾತ್ರ ಬೇಕಿದೆ. [ಐಪಿಎಲ್ 2017: ಅಂಕಪಟ್ಟಿ]

37ವರ್ಷ ವಯಸ್ಸಿನ ಗೇಲ್ ಅವರು ಈ ಬಾರಿಯ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ತೋರಿಲ್ಲ. ಆದರೆ, ಇನ್ನು 3 ರನ್ ಗಳಿಸಿದರೆ ಟಿ20 ಇತಿಹಾಸದಲ್ಲಿ 10,000 ರನ್ ಪೂರೈಸಲಿದ್ದಾರೆ.[ಧೂಳಿಪಟವಾಗುತ್ತವಾ ಆ ಹತ್ತು ದಾಖಲೆಗಳು?]

IPL 2017: T20 world record beckons RCB's Chris Gayle

ಪ್ರಥಮ ದರ್ಜೆ ಹಾಗೂ ಲಿಸ್ಟ್ ಎ (50 ಓವರ್ ಗಳ ಪಂದ್ಯ) ಪಂದ್ಯಗಳಲ್ಲಿ ಗೇಲ್ ಸೇರಿದಂತೆ ಅನೇಕ ಆಟಗಾರರು 10 ಸಾವಿರ ರನ್ ಗಳಿಸಿದ್ದಾರೆ. ಆದರೆ, ಈ ಚುಟುಕು ಮಾದರಿ ಕ್ರಿಕೆಟ್ ನಲ್ಲಿ 10 ಸಾವಿರ ರನ್ ಯಾರೂ ಗಳಿಸಿಲ್ಲ.

ಗೇಲ್ ಅವರು 289 ಟಿ20 ಪಂದ್ಯಗಳಿಂದ 9,997ರನ್ ಗಳಿಸಿದ್ದು, 40ಕ್ಕಿಂತ ಅಧಿಕ ರನ್ ಸರಾಸರಿ ಹೊಂದಿದ್ದಾರೆ. 18 ಶತಕಗಳನ್ನು ಬಾರಿಸಿದ್ದು, 175 ವೈಯಕ್ತಿಕ ಗರಿಷ್ಠ ಮೊತ್ತ(ಐಪಿಎಲ್ ದಾಖಲೆ) ವಾಗಿದೆ.[ಗೇಲ್ ತ್ವರಿತಗತಿ ಟಿ20 ಶತಕ!]

ಸೆಪ್ಟೆಂಬರ್ 2005ರಲ್ಲಿ ಟಿ20 ಮಾದರಿಗೆ ಎಂಟ್ರಿ ಕೊಟ್ಟ ಗೇಲ್ ಅವರು ಈ ಬಾರಿ ಐಪಿಎಲ್ ನಲ್ಲಿ 6 ಹಾಗೂ 22ರನ್ ಮಾತ್ರ ಗಳಿಸಿದ್ದಾರೆ.(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Royal Challengers Bangalore's (RCB) explosive opener Chris Gayle is set to create Twenty20 history tonight (April 16) at M Chinnaswamy Stadium.
Please Wait while comments are loading...