ಪುತ್ರಿ ಗ್ರೇಸಿಯಾಗೆ ಅಪ್ಪ ಸುರೇಶ್ ರೈನಾರಿಂದ ವಿಶಿಷ್ಟ ಗಿಫ್ಟ್

Posted By:
Subscribe to Oneindia Kannada

ಅಹಮದಾಬಾದ್, ಮೇ 16 : ಪುತ್ರಿ ಗ್ರೇಸಿಯಾಳ ಮೊದಲ ಹುಟ್ಟುಹಬ್ಬದಕ್ಕೆ ಗುಜರಾತ್ ಲಯನ್ಸ್ ನಾಯಕ ಸುರೇಶ್ ರೈನಾ ಮತ್ತು ಅವರ ಪತ್ನಿ ಪ್ರಿಯಾಂಕಾ ಅವರು ವಿಶಿಷ್ಟ ಕೊಡುಗೆ ನೀಡಿದ್ದಾರೆ.

ಸಂಕಷ್ಟಕ್ಕೆ ಒಳಗಾದ ತಾಯಂದಿರಿಗೆ ನೆರವು ನೀಡುವುದಕ್ಕಾಗಿ ಮಗಳ ಹೆಸರಿನಲ್ಲಿ ಪ್ರತಿಷ್ಠಾನವನ್ನು ರೈನಾ ಆರಂಭಿಸಿದ್ದಾರೆ. ಗ್ರೇಸಿಯಾ ರೈನಾ ಫೌಂಡೇಶನ್ ಮೂಲಕ ಅನಾಥ, ನಿರ್ಗತಿಕ ತಾಯಿ ಹಾಗೂ ಮಕ್ಕಳ ಪಾಲನೆ, ಪೋಷಣೆ ಹಾಗೂ ಜಾಗೃತಿ ಮೂಡಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯದ ಸ್ಥಿತಿಗತಿ ಅವಲೋಕನ ಹಾಗೂ ರಕ್ಷಣೆ ಫೌಂಡೇಶನ್ ನ ಜವಾಬ್ದಾರಿಯಾಗಿರುತ್ತದೆ.

IPL 2017 : Suresh Raina launches Gracia Raina Foundation on daughter's 1st birthday

ನನಗೆ ಹಾಗೂ ನನ್ನ ಪತ್ನಿ ಪ್ರಿಯಾಂಕಾಗೆ ನಮ್ಮ ಪುತ್ರಿ ಗ್ರೇಸಿಯಾಳ ಮೊದಲ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಬೇಕು. ಆಕೆಗೆ ವಿಶಿಷ್ಟ ಉಡುಗೊರೆ ನೀಡುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಲಾಗಿದೆ ಎಂದು ರೈನಾ ಹೇಳಿದ್ದಾರೆ.

223 ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನಾಡಿರುವ ರೈನಾ ಅವರು ಕ್ರಿಕೆಟ್ ಬಿಟ್ಟರೆ ಫೌಂಡೇಶನ್ ಕೆಲಸದಲ್ಲಿ ಹೆಚ್ಚು ಕಾಲ ಕಳೆಯುವುದಾಗಿ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Cricketer Suresh Raina and his wife Priyanka Chaudhary Raina on Monday (May 15) announced the launch of their foundation dedicated to the aid of underprivileged mothers across the country.
Please Wait while comments are loading...