ಐಪಿಎಲ್ 2017: ಸನ್ ರೈಸರ್ಸ್ ಗೆ ಶರಣಾದ ಡೆಲ್ಲಿ ಡೇರ್ ಡೆವಿಲ್ಸ್

Posted By:
Subscribe to Oneindia Kannada

ಹೈದರಾಬಾದ್, ಏಪ್ರಿಲ್ 19: ಸನ್ ರೈಸರ್ಸ್ ತಂಡವು ಪೇರಿಸಿದ ಸವಾಲಿನ ಮೊತ್ತವನ್ನು ಹಿಂದಿಕ್ಕುವಲ್ಲಿ ವಿಫಲವಾದ ಡೆಲ್ಲಿ ಡೇರ್ ಡೆವಿಲ್ಸ್ ತಂಡ, ಬುಧವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ 15 ರನ್ ಗಳ ಅಂತರದಲ್ಲಿ ಸೋಲೊಪ್ಪಿಕೊಂಡಿತು .

ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತ್ತು. ಈ ಮೊತ್ತ ಬೆನ್ನಟ್ಟಿದ ಡೆಲ್ಲಿ ತಂಡ, 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 156 ರನ್ ಮಾತ್ರ ಗಳಿಸಲು ಶಕ್ತವಾಯಿತು.

IPL 2017: Sunrisers vs Delhi Daredevils match result

ಸನ್ ರೈಸರ್ಸ್ ಸವಾಲು ಬೆನ್ನಟ್ಟಿದ ಡೆಲ್ಲಿ ತಂಡ ಆರಂಭಿಕ ಬಿಲ್ಲಿಂಗ್ಸ್ ಅವರನ್ನು ಬೇಗನೇ ಕಳೆದುಕೊಂಡರೂ, ಮತ್ತೊಬ್ಬ ಆರಂಭಿಕ ಸಂಜು ಸ್ಯಾಮ್ಸನ್ (42 ರನ್, 33 ಎಸೆತ, 3 ಬೌಂಡರಿ, 2 ಸಿಕ್ಸರ್) ಅವರಿಂದ ಕೊಂಚ ಚೇತರಿಕೆ ಕಂಡಿತು. ಅವರಿಗೆ, ಮೂರನೇ ಕ್ರಮಾಂಕದ ಬ್ಯಾಟ್ಸ್ ಮನ್ ಕರುಣ್ ನಾಯರ್ (33 ರನ್, 23 ಎಸೆತ, 5 ಬೌಂಡರಿ, 1 ಸಿಕ್ಸರ್) ಅವರಿಂದ ಉತ್ತಮ ಬೆಂಬಲ ಸಿಕ್ಕಿತಾದರೂ ಈ ಜೋಡಿ ಹೆಚ್ಚು ಹೊತ್ತು ನಿಲ್ಲಲಿಲ್ಲ.

10ನೇ ಓವರ್ ನಲ್ಲಿ ಕರುಣ್, 14ನೇ ಓವರ್ ನಲ್ಲಿ ಸ್ಯಾಮ್ಸ್ ನ್ ಇಬ್ಬರೂ ಔಟಾಗಿದ್ದು ತಂಡದ ರನ್ ಗತಿ ಮೇಲೆ ಪರಿಣಾಮ ಬೀರಿತು. ಆದರೂ, ಮಧ್ಯಮ ಕ್ರಮಾಂಕದಲ್ಲಿ ಮಿಂಚಿದ ಶ್ರೇಯಸ್ ಅಯ್ಯರ್ (ಅಜೇಯ 50 ರನ್, 31 ಎಸೆತ, 5 ಬೌಂಡರಿ, 2 ಸಿಕ್ಸರ್), ಏಂಜೆಲೊ ಮ್ಯಾಥ್ಯೂಸ್ (31 ರನ್, 23 ಎಸೆತ, 2 ಬೌಂಡರಿ, 1 ಸಿಕ್ಸರ್) ತಂಡಕ್ಕೆ ಗೆಲುವು ತಂದುಕೊಡಲು ಪ್ರಯತ್ನಿಸಿದರಾದರೂ ಅದು ಸಾಧ್ಯವಾಗಲಿಲ್ಲ.

ಶಿಖರ್- ಕೇನ್ ದಾಖಲೆಯ ಜತೆಯಾಟ: ಇದಕ್ಕೂ ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ ಹೈದರಾಬಾದ್ ಪರವಾಗಿ, ದ್ವಿತೀಯ ವಿಕೆಟ್ ಗೆ ದಾಖಲೆಯ 136 ರನ್ ಜತೆಯಾಟ ನೀಡಿದ ಶಿಖರ್ ಧವನ್ ಹಾಗೂ ಕೇನ್ ವಿಲಿಯಮ್ಸನ್ ಜೋಡಿ, ಬುಧವಾರ ಇಲ್ಲಿ ನಡೆಯುತ್ತಿರುವ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಎದುರಾಳಿಗಳಿಗೆ ಪಂದ್ಯ ಗೆಲ್ಲಲು 192 ರನ್ ಗಳ ಸವಾಲು ನೀಡಿತು.

ಆರಂಭಿಕ ಹಾಗೂ ನಾಯಕ ವಾರ್ನರ್ ಅವರನ್ನು ಬೇಗನೇ ಕಳೆದುಕೊಂಡಿತು. ಆಗ, ತಂಡದ ಮೊತ್ತ ಕೇವಲ 12 ರನ್.

ಆ ಸಂದರ್ಭದಲ್ಲಿ, ಮತ್ತೊಬ್ಬ ಆರಂಭಿಕ ಶಿಖರ್ ಧವನ್ (55 ರನ್, 42 ಎಸೆತ, 6 ಬೌಂಡರಿ) ಹಾಗೂ ಮೂರನೇ ಕ್ರಮಾಂಕದ ಕೇನ್ ವಿಲಿಯಮ್ಸನ್ (89 ರನ್, 51 ಎಸೆತ, 6 ಬೌಂಡರಿ, 5 ಸಿಕ್ಸರ್) ಜೋಡಿ ನಡೆಸಿದ ಉತ್ತಮ ಬ್ಯಾಟಿಂಗ್ ತಂಡವನ್ನು ಆ ಆರಂಭಿಕ ಆಘಾತದಿಂದ ಪಾರು ಮಾಡಿತು.

ಅಂದಹಾಗೆ, ಈ ಪಂದ್ಯ ಹೈದರಾಬಾದ್ ತಂಡ ಮಧ್ಯಮ ಕ್ರಮಾಂಕದ ಆಟಗಾರ ಯುವರಾಜ್ ಸಿಂಗ್ ಅವರಿಗೆ 200ನೇ ಟಿ20 ಪಂದ್ಯವೂ ಹೌದು. ಆದರೆ, ಈ ಪಂದ್ಯದಲ್ಲಿ ಯುವಿ 4 ಎಸೆತ ಎದುರಿಸಿ ಕೇವಲ 3 ರನ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್:
ಸನ್ ರೈಸರ್ಸ್ ಹೈದರಾಬಾದ್ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 191 ರನ್ (ಶಿಖರ್ ಧವನ್ 70, ಕೇನ್ ವಿಲಿಯಮ್ಸನ್ 89; ಕ್ರಿಸ್ ಮೋರಿಸ್ 26ಕ್ಕೆ 4, ಜಹೀರ್ ಖಾನ್ 37ಕ್ಕೆ 0).
ಡೆಲ್ಲಿ ಡೇರ್ ಡೆವಿಲ್ಸ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 176 (ಶ್ರೇಯಸ್ ಅಯ್ಯರ್ 50, ಸಂಜು ಸ್ಯಾಮ್ಸನ್ 42; ಮೊಹಮ್ಮದ್ ಸಿರಾಜ್ 39ಕ್ಕೆ 2, ಯುವರಾಜ್ ಸಿಂಗ್ 6ಕ್ಕೆ 1). ಪಂದ್ಯ ಶ್ರೇಷ್ಠ: ಕೇನ್ ವಿಲಿಯಮ್ಸನ್ (ಸನ್ ರೈಸರ್ಸ್ ಹೈದರಾಬಾದ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Record 2nd wicket partnership by opener Shikhar Dhawan and Kane Williamson (136 runs) lead Sunrisers Hyderabad to score 191 runs in 20 overs in an IPL match against Delhi Daredevils on April 19, 2017 at Hyderabad.
Please Wait while comments are loading...