ಸನ್ ರೈಸರ್ಸ್ ಶಿಸ್ತುಬದ್ಧ ಆಟಕ್ಕೆ ಶರಣಾದ ಲಯನ್ಸ್

Posted By:
Subscribe to Oneindia Kannada

ಕಾನ್ಪುರ, ಮೇ 13: ಕೇವಲ 43 ರನ್ ಗಳ ಅಂತರದಲ್ಲಿ ತನ್ನ 10 ವಿಕೆಟ್ ಗಳನ್ನು ಕಳೆದುಕೊಳ್ಳುವ ಮೂಲಕ ಸೋಲಿನಲ್ಲೂ ದಾಖಲೆ ಬರೆದ ಗುಜರಾತ್ ಲಯನ್ಸ್, ಶನಿವಾರ ಮಧ್ಯಾಹ್ನ ನಡೆದ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 8 ವಿಕೆಟ್ ಗಳ ಸೋಲು ಕಂಡಿತು.

ಇಲ್ಲಿನ ಕ್ರೀಡಾಂಗಣದಲ್ಲಿ ಶನಿವಾರ ಮಧ್ಯಾಹ್ನ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡ, 19.2 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 154 ರನ್ ಗಳಿಸಿತ್ತು. ಈ ಮೊತ್ತ ಬೆನ್ನಟ್ಟಿದ ಸನ್ ರೈಸರ್ಸ್ 18.1 ಓವರ್ ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.[ಸ್ಕೋರ್ ಬೋರ್ಡ್]

IPL 2017: Sunrsers edged past Gujarat Lions

ಗುಜರಾತ್ ಪರ, ಆರಂಭಿಕರಾದ ಡ್ವೈನ್ ಸ್ಮಿತ್ ಹಾಗೂ ಇಶಾನ್ ಕಿಶನ್ ಭರ್ಜರಿಯಾಗಿಯೇ ಇನಿಂಗ್ಸ್ ಆರಂಭಿಸಿದ್ದರು. 10.5 ಓವರ್ ಗಳಲ್ಲಿ ಈ ಜೋಡಿ 111 ರನ್ ಕಲೆಹಾಕಿತ್ತು. ಆದರೆ, ಆನಂತರ, ಎದುರಾಳಿ ತಂಡದ ಬೌಲಿಂಗ್ ದಾಳಿಗೆ ಕುಸಿದು, ಕೇವಲ 43 ರನ್ ಅಂತರದಲ್ಲಿ ಎಲ್ಲಾ ಹತ್ತೂ ವಿಕೆಟ್ ಗಳು ಪತನಗೊಂಡವು.

ಆಫ್ಘಾನಿಸ್ತಾನ ಮೂಲದ ಸ್ಪಿನ್ನರ್ ರಶೀದ್ ಖಾನ್ 11ನೇ ಓವರ್ ನ ಕೊನೆಯ ಎಸೆತದಲ್ಲಿ ಸ್ಮಿತ್ (54) ಅವರನ್ನು ಎಲ್ ಬಿ ಡಬ್ಲ್ಯೂ ಬಲೆಗೆ ಕೆಡವಿದರೆ, 14ನೇ ಓವರ್ ನಲ್ಲಿ ಹೈದರಾಬಾದ್ ವೇಗಿ ಮೊಹಮ್ಮದ್ ಶಿರಾಜ್ (61) ಅವರು ಮತ್ತೊಬ್ಬ ಮತ್ತೊಬ್ಬ ಆರಂಭಿಕ ಇಶಾನ್ ಕಿಶನ್ ಅವರನ್ನು ಪೆವಿಲಿಯನ್ ಗೆ ಅಟ್ಟಿದರು.

ಆರಂಭಿಕರು ಬಿಟ್ಟರೆ ಮಿಕ್ಕವರಾರೂ ಉತ್ತಮವಾಗಿ ಆಡಲಿಲ್ಲ. ಅದರಲ್ಲೂ ಮಧ್ಯಮ ಕ್ರಮಾಂಕ ಚಿಗುರದಂತೆ ನೋಡಿಕೊಂಡಿದ್ದು ಸನ್ ರೈಸರ್ಸ್ ಬೌಲರ್ ಗಳ ಹೆಗ್ಗಳಿಕೆ. ಹಾಗಾಗಿ, ಪಂದ್ಯದಲ್ಲಿ ಆ ತಂಡ ಗೆಲುವು ಸಾಧಿಸಲು ಸಾಧ್ಯವಾಯಿತು.

ವಾರ್ನರ್, ವಿಜಯ್ ದಾಖಲೆ ಜತೆಯಾಟ: ಆರಂಭಿಕ ಡೇವಿಡ್ ವಾರ್ನರ್ ಹಾಗೂ ಮಧ್ಯಮ ಕ್ರಮಾಂಕದ ವಿಜಯ್ ಶಂಕರ್ ಜೋಡಿ, 3ನೇ ವಿಕೆಟ್ ಗೆ ನೀಡಿದ ಜಂಟಿ ದಾಖಲೆಯ 133 ರನ್ ಗಳ ಜತೆಯಾಟದ ಸಹಾಯದಿಂದಾಗಿ ಸನ್ ರೈಸರ್ಸ್ ಹೈದರಾಬಾದ್ ತಂಡ, ಶನಿವಾರ ಮಧ್ಯಾಹ್ನ ನಡೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಲಯನ್ಸ್ ವಿರುದ್ಧ 8 ವಿಕೆಟ್ ಗಳ ಜಯ ಸಾಧಿಸಿತು.

ಅದರಲ್ಲೂ ಕೇವಲ 43 ರನ್ ಗಳ ಅಂತರದಲ್ಲಿ ಗುಜರಾತ್ ತಂಡ 10 ವಿಕೆಟ್ ಗಳನ್ನೂ ಕಳೆದುಕೊಂಡಿದ್ದು ಐಪಿಎಲ್ ನಲ್ಲಿ ತಂಡವೊಂದರಿಂದ ಮೂಡಿಬಂದ ಅತಿ ಕಳಪೆ ಪ್ರದರ್ಶನವಾಗಿದೆ.

3ನೇ ವಿಕೆಟ್ ಗೆ ವಾರ್ನರ್-ವಿಜಯ್ ಪೇರಿಸಿದ 133 ರನ್ ಜತೆಯಾಟ, ಇದೇ ಲೀಗ್ ನ ಮತ್ತೊಂದು ಪಂದ್ಯದಲ್ಲಿ ಗುಜರಾತ್ ತಂಡದ ಸುರೇಶ್ ರೈನಾ ಹಾಗೂ ದಿನೇಶ್ ಕಾರ್ತಿಕ್ ಜೋಡಿ 3ನೇ ವಿಕೆಟ್ ಗೆ ಪೇರಿಸಿದ್ದ 133 ರನ್ ಮೊತ್ತಕ್ಕೆ ಸರಿಯಾಟಿಯಾಯಿತು. ಆದರೆ, ವಾರ್ನರ್- ವಿಜಯ್ ಜೋಡಿ ಅಜೇಯ ಜತೆಯಾಟವಾಗಿದ್ದರೆ, ರೈನಾ-ಕಾರ್ತಿಕ್ ಜತೆಯಾಟ 133ಕ್ಕೆ ಕೊನೆಗೊಂಡಿದೆಯಷ್ಟೆ.

(ಚಿತ್ರ ಕೃಪೆ: www.iplt20.com)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After loosing 10 wickets within 43 runs range, Gujarat Lions surrendered to Sun Risers Hyderabad by 8 wickets in an IPL match on May 13, 2017.
Please Wait while comments are loading...