ಉಳಿದ ಐಪಿಎಲ್ ಪಂದ್ಯಗಳಿಂದ ವೇಗಿ ಆಶಿಶ್ ನೆಹ್ರಾ ಔಟ್!

Posted By:
Subscribe to Oneindia Kannada

ಬೆಂಗಳೂರು, ಮೇ 17 : ಸನ್ ರೈಸರ್ಸ್ ಹೈದರಾಬಾದ್ ತಂಡದ ಹಿರಿಯ ಅನುಭವಿ ವೇಗಿ ಆಶಿಶ್ ನೆಹ್ರಾ ಹತ್ತನೇ ಆವೃತ್ತಿಯ ಉಳಿದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಿಂದ ಹೊರ ಬಿದ್ದಿದ್ದಾರೆ.

'ಗಾಯಗೊಂಡಿರುವ ಆಶಿಶ್ ನೆಹ್ರಾ ಅವರು ಐಪಿಎಲ್ ಟೂರ್ನಿಯ ಉಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ' ಎಂದು ಸನ್‌ ರೈಸರ್ಸ್ ಹೈದರಾಬಾದ್‌ ತಂಡದ ಮುಖ್ಯ ಕೋಚ್ ಟಾಮ್ ಮೂಡಿ ತಿಳಿಸಿದ್ದಾರೆ.

IPL 2017: SRH paceman Ashish Nehra ruled out of play-offs

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 'ಮೇ 6ರಂದು ರೈಸಿಂಗ್ ಪುಣೆ ಸೂಪರ್‌ಜೈಂಟ್‌ ವಿರುದ್ಧ ನಡೆದಿದ್ದ ಪಂದ್ಯದ ವೇಳೆ ನೆಹ್ರಾ ಅವರ ಮಂಡಿಗೆ ಗಾಯವಾಗಿತ್ತು. ಇದರಿಂದ ಅವರು ಚೇತರಿಸಿಕೊಂಡಿಲ್ಲ' ಎಂದರು.

ಇಂದು (ಮೇ 17) ಪ್ಲೇ ಆಫ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ಮತ್ತು ಕೋಲ್ಕತ್ತ ನೈಟ್‌ರೈಡರ್ಸ್ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ಹೈದರಾಬಾದ್ ತಂಡಕ್ಕೆ ಒಬ್ಬ ಅನುಭವಿ ಬೌಲರ್ ಕೊರತೆ ಕಾಡಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sunrisers Hyderabad (SRH) will be without their Indian paceman Ashish Nehra in the play-offs of Indian Premier League (IPL) 2017, it was confirmed today (May 16) by coach Tom Moody.
Please Wait while comments are loading...