ಐಪಿಎಲ್: ಗಂಭೀರ್ ಹಿಂದಿಕ್ಕಿ ದಾಖಲೆ ಬರೆದ ವಾರ್ನರ್

Posted By:
Subscribe to Oneindia Kannada

ಹೈದರಾಬಾದ್, ಏಪ್ರಿಲ್ 18: ಕಿಂಗ್ಸ್ XI ಪಂಜಾಬ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡ ಸೋಮವಾರ ರಾತ್ರಿ 5 ವಿಕೆಟ್ ಗಳ ರೋಚಕ ಜಯ ದಾಖಲಿಸಿದೆ. ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ ಅವರು ಈ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದು ಈಗ ಐಪಿಎಲ್ ದಾಖಲೆಯಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಅತಿ ಹೆಚ್ಚು ಅರ್ಧಶತಕ ಬಾರಿಸಿದ ದಾಖಲೆ ಹೊಂದಿದ್ದ ಗೌತಮ್ ಗಂಭೀರ್ ರನ್ನು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಹಿಂದಿಕ್ಕಿದ್ದಾರೆ.

SRH captain David Warner hits record 34th fifty

ಪಂಜಾಬ್ ವಿರುದ್ಧ ಅಜೇಯ 70ರನ್ ದಾಖಲಿಸಿದ ವಾರ್ನರ್ ಅವರು ಐಪಿಎಲ್ ನಲ್ಲಿ 34ನೇ ಅರ್ಧಶತಕ ಬಾರಿಸಿದರು. ಈ ಮೂಲಕ 33 ಅರ್ಧಶತಕ ಗಳಿಸಿರುವ ಗೌತಮ್ ಗಂಭೀರ್ ರನ್ನು ಹಿಂದಕ್ಕೆ ಹಾಕಿದ್ದಾರೆ.

ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಆಟ ಪ್ರದರ್ಶಿಸಲು ವಿಫಲರಾಗಿದ್ದ ವಾರ್ನರ್ ಅವರು ಈಗ ಲಯ ಕಂಡುಕೊಂಡಿದ್ದು, ಹೈದರಾಬಾದ್ ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ.

ಕಳೆದ ಐಪಿಎಲ್ ನಲ್ಲಿ 800 ಪ್ಲಸ್ ರನ್ ಗಳಿಸಿ ಎರಡನೇ ಅತಿ ಹೆಚ್ಚು ರನ್ ಗಳಿಕೆ ಆಟಗಾರ ಎನಿಸಿಕೊಂಡಿದ್ದರು. ಅತಿ ಹೆಚ್ಚು ಅರ್ಧಶತಕ ಗಳಿಸಿದವರ ಪಟ್ಟಿಯಲ್ಲಿ ವಾರ್ನರ್ ಹಾಗೂ ಗಂಭೀರ್ ನಂತರದ ಸ್ಥಾನದಲ್ಲಿ ರೋಹಿತ್ ಶರ್ಮ, ಸುರೇಶ್ ರೈನಾ(ತಲಾ 29), ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ (27) ಇದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sunrisers Hyderabad skipper David Warner on Monday became the player with most number of half-centuries (34) in the Indian Premier League after he scored an unbeaten 70 in their five-run win against Kings XI Punjab in Hyderabad
Please Wait while comments are loading...