ಡೆಲ್ಲಿ ಪಂದ್ಯಕ್ಕೂ ಮುನ್ನ ಕಣ್ಣೀರಿಡುತ್ತಾ ಮನೆಗೆ ತೆರಳಿದ ತಿವಾರಿ!

Posted By:
Subscribe to Oneindia Kannada

ಪುಣೆ, ಏಪ್ರಿಲ್ 11: ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧದ ಪಂದ್ಯಕ್ಕೆ ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡದ ನಾಯಕ ಸ್ಟೀವ್ ಸ್ಮಿತ್ ಅಲ್ಲದೆ ಮತ್ತೊಬ್ಬ ಆಟಗಾರ ಕೂಡಾ ಪಂದ್ಯವಾಡಲಿಲ್ಲ.

ಮಂಗಳವಾರ ತಂದೆಯನ್ನು ಕಳೆದುಕೊಂಡ ಆಟಗಾರ ಕೋಲ್ಕತಾಗೆ ತೆರಳಬೇಕಾಯಿತು. ಪುಣೆ ತಂಡದ ಪ್ರಮುಖ ಆಟಗಾರ ಮನೋಜ್ ತಿವಾರಿ ಈಗ ತಮ್ಮ ತಂದೆಯನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ.[ ತಂದೆ ಸಾವಿನ ಸೂತಕದ ನಡುವೆ ತಂಡ ಸೇರಿದ ಪಂತ್]

ಬೆಂಗಾಲ ಮೂಲದ ಆಟಗಾರ ಮನೋಜ್ ತಿವಾರಿ ಅವರ ತಂದೆ ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ. ಬೆಳಗ್ಗೆ ನೆಟ್ ಪ್ರಾಕ್ಟೀಸ್ ನಲ್ಲಿದ್ದ ತಿವಾರಿಗೆ ವಿಷಯ ತಿಳಿಸಲಾಯಿತು. ತಕ್ಷಣವೇ ಅವರು ತಮ್ಮ ಊರಿಗೆ ತೆರಳಲು ವ್ಯವಸ್ಥೆ ಕಲ್ಪಿಸಲಾಯಿತು. ಹೀಗಾಗಿ ಅವರು ಇಂದಿನ ಪಂದ್ಯವಾಡಲು ಸಾಧ್ಯವಾಗಲಿಲ್ಲ ಎಂದು ಪುಣೆ ತಂಡ ಪ್ರಕಟಿಸಿದೆ. [ಸ್ಕೋರ್ ಕಾರ್ಡ್]

ಇತ್ತೀಚೆಗೆ ಯುವ ಆಟಗಾರ ರಿಷಬ್ ಪಂತ್ ಅವರು ತಮ್ಮ ತಂದೆಯನ್ನು ಕಳೆದುಕೊಂಡ ಕೆಲ ದಿನಗಳಲ್ಲೇ ಡೆಲ್ಲಿ ತಂಡವನ್ನು ಸೇರಿ, ಆಕರ್ಷಕ ಅರ್ಧಶತಕ ಸಿಡಿಸಿದ್ದರು. [ಹೈಲೇಟ್ಸ್ : ಪುಣೆ ಪಾಲಿಗೆ ನಂಜಾದ ಸಂಜು ಸೆಂಚುರಿ]

ಮನೋಜ್ ತಂದೆ ನಿಧನ

ಮನೋಜ್ ತಂದೆ ನಿಧನ

ಕಿಂಗ್ಸ್ ಎಲೆವನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ 23 ಎಸೆತಗಳಲ್ಲಿ ಅಜೇಯ 40 ರನ್ ಚೆಚ್ಚಿದ್ದ ಮನೋಜ್ ತಿವಾರಿ ಏಪ್ರಿಲ್ 11ರಂದು ಡೆಲ್ಲಿ ಪಂದ್ಯವನ್ನು ತೊರೆದು ತಮ್ಮ ತಂದೆಯ ಅಂತಿಮ ದರ್ಶನಕ್ಕೆ ತೆರಳಿದರು. ಮನೋಜ್ ಬದಲಿಗೆ ಸ್ಥಳೀಯ ಅಟಗಾರ ರಾಹುಲ್ ತ್ರಿಪಾಠಿ ಅವರು ತಂಡ ಸೇರಿಕೊಂಡರು. ನಾಯಕ ಸ್ಮಿತ್ ಕೂಡಾ ಹೊಟ್ಟೆ ನೋವಿನ ಕಾರಣ ಡೆಲ್ಲಿ ವಿರುದ್ಧ ಆಡಲಿಲ್ಲ.

ಕೈಫ್ ರಿಂದ ಸಂತಾಪ

ಮಾಜಿ ಆಟಗಾರ ಮೊಹಮ್ಮದ್ ಕೈಫ್ ಅವರು ಟ್ವೀಟ್ ಮಾಡಿ, ಮನೋಜ್ ತಿವಾರಿ ಅವರಿಗೆ ಸಾಂತ್ವನ ಹೇಳಿದ್ದಾರೆ.

ಪುಣೆ ಟೀಂ ನಿಂದ ಸಂದೇಶ

ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡ, ಮನೋಜ್ ತಿವಾರಿ ಅವರ ತಂದೆ ನಿಧನರಾದ ಸುದ್ದಿಯನ್ನು ಪ್ರಕಟಿಸಿ, ತನ್ನ ಸಂತಾಪವನ್ನು ಸೂಚಿಸಿತು.

ಮನೋಜ್ ಗೆ ಸಾಂತ್ವನ

ಪುಣೆ ತಂಡದ ಕ್ರಿಕೆಟರ್ ಮನೋಜ್ ತಿವಾರಿ ಅವರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಹಲವಾರು ಮಂದಿ ಸಂತಾಪ ಸೂಚಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rising Pune Supergiant's (RPS) middle order batsman Manoj Tiwary missed out on their third league game in the Indian Premier League (IPL) 2017 due to the sudden demise of his father.
Please Wait while comments are loading...