ಟಿ20ಯಲ್ಲಿ ಹೊಸ ವಿಶ್ವದಾಖಲೆ ಬರೆದ ಕ್ರಿಸ್ ಗೇಲ್

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 18:ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರ, ವೆಸ್ಟ್ ಇಂಡೀಸ್ ನ ದೈತ್ಯ ಕ್ರಿಸ್ ಗೇಲ್ ಅವರು ಏಪ್ರಿಲ್ 18ರಂದು ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ

ಆರ್ ಸಿಬಿಯಲ್ಲಿ ಕ್ರಿಸ್ ಗೇಲ್ ಆಡುತ್ತಾರೋ ಇಲ್ಲವೋ ಎಂಬ ಕುತೂಹಲವಿತ್ತು. ಕಳೆದ ಪಂದ್ಯದಲ್ಲೂ ಗೇಲ್ ಆಡಿರಲಿಲ್ಲ. ಆದರೆ, ಈ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದು ಉತ್ತಮ ಪ್ರದರ್ಶನ ನೀಡಿದ್ದಾರೆ. ಗುಜರಾತ್ ವೇಗಿ ಬಸಿಲ್ ತಾಂಪಿ ಅವರ ಎಸೆತದಲ್ಲಿ ರನ್ ಗಳಿಸಿ ದಾಖಲೆ ಬರೆದರು. [ಧೂಳಿಪಟವಾಗುತ್ತವಾ ಆ ಹತ್ತು ದಾಖಲೆಗಳು?]

Gayle

37ವರ್ಷ ವಯಸ್ಸಿನ ಗೇಲ್ ಅವರು ಈ ಬಾರಿಯ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ತೋರಿಲ್ಲ. ಆದರೆ, ಈ ಪಂದ್ಯದಲ್ಲಿ 3 ರನ್ ಗಳಿಸಿದಾಗ ಟಿ20 ಇತಿಹಾಸದಲ್ಲಿ 10,000 ರನ್ ಪೂರೈಸಿದರು.

ಪ್ರಥಮ ದರ್ಜೆ ಹಾಗೂ ಲಿಸ್ಟ್ ಎ (50 ಓವರ್ ಗಳ ಪಂದ್ಯ) ಪಂದ್ಯಗಳಲ್ಲಿ ಗೇಲ್ ಸೇರಿದಂತೆ ಅನೇಕ ಆಟಗಾರರು 10 ಸಾವಿರ ರನ್ ಗಳಿಸಿದ್ದಾರೆ. ಆದರೆ, ಈ ಚುಟುಕು ಮಾದರಿ ಕ್ರಿಕೆಟ್ ನಲ್ಲಿ 10 ಸಾವಿರ ರನ್ ಯಾರೂ ಗಳಿಸಿಲ್ಲ.
ಗೇಲ್ ಅವರು 289 ಟಿ20 ಪಂದ್ಯಗಳಿಂದ 9,997ರನ್ ಗಳಿಸಿದ್ದು, 40ಕ್ಕಿಂತ ಅಧಿಕ ರನ್ ಸರಾಸರಿ ಹೊಂದಿದ್ದಾರೆ. 18 ಶತಕಗಳನ್ನು ಬಾರಿಸಿದ್ದು, 175 ವೈಯಕ್ತಿಕ ಗರಿಷ್ಠ ಮೊತ್ತ(ಐಪಿಎಲ್ ದಾಖಲೆ) ವಾಗಿದೆ

ಸೆಪ್ಟೆಂಬರ್ 2005ರಲ್ಲಿ ಟಿ20 ಮಾದರಿಗೆ ಎಂಟ್ರಿ ಕೊಟ್ಟ ಗೇಲ್ ಅವರು ಈ ಬಾರಿ ಐಪಿಎಲ್ ನಲ್ಲಿ 6 ಹಾಗೂ 22ರನ್ ಮಾತ್ರ ಗಳಿಸಿದ್ದರು.(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Royal Challengers Bangalore's (RCB) explosive opener Chris Gayle created history as he became the first player in the history to score 10,000 runs in T20.
Please Wait while comments are loading...