ಐಪಿಎಲ್ ಕಹಿ ನೆನಪು ಮರೆಯಲು ರೇಸ್ ಟ್ರ್ಯಾಕಿಗಿಳಿದ ಕೊಹ್ಲಿ

Posted By:
Subscribe to Oneindia Kannada

ನವದೆಹಲಿ, ಮೇ 19: ಐಪಿಎಲ್ 10ರ ಕಹಿ ನೆನಪುಗಳನ್ನು ಮರೆಯಲು ಕಾರ್ ರೇಸ್ ನಡೆಸಿದ ವಿರಾಟ್ ಕೊಹ್ಲಿ ಅವರು ಗುರುವಾರದಂದು ತಮ್ಮ ಆಡಿ ಕಾರನ್ನು ಗಂಟೆಗೆ 280 ಕಿಲೋಮೀಟರ್ ವೇಗದಲ್ಲಿ ಚಲಿಸಿ, ಎಲ್ಲರ ಹುಬ್ಬೇರಿಸಿದ್ದಾರೆ.

ಆದರೆ, ಈ ರೀತಿ ಸಾಹಸವನ್ನು ರೇಸ್ ಟ್ರ್ಯಾಕಿನಲ್ಲಿ ಮಾತ್ರ ಮಾಡಿ, ರಸ್ತೆಯಲ್ಲಿ ವೇಗವಾಗಿ ಕಾರುಗಳನ್ನು ಓಡಿಸುವ ಸಾಹಸ ಮಾಡಬೇಡಿ,. ಮದ್ಯಪಾನ ಮಾಡಿ ವಾಹನ ಚಲಿಸುವ, ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವ ಕೆಲಸ ಮಾಡಬೇಡಿ ಎಂದು ಕಿವಿಮಾತು ಹೇಳಿದ್ದಾರೆ. [ದೆಹಲಿ ರೋಡಿನಲ್ಲಿ ವಿರಾಟ್ ಕೊಹ್ಲಿ ಜಾಲಿ ರೈಡ್]

IPL 2017 : RCB captain Virat Kohli 'scores' 280kmph on test track

2016ರಲ್ಲಿ ಕರ್ನಾಟಕ ಹಾಗೂ ತಮಿಳುನಾಡು ಗಡಿಭಾಗದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಹೊಸ ಸ್ಪೋರ್ಟ್ಸ್ ಕಾರು ಆರ್8 ವಿ10 ಪ್ಲಸ್ ಲೋಕಾರ್ಪಣೆ ಮಾಡಿ, ಟೆಸ್ಟ್ ಡ್ರೈವ್ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

3.2 ಸೆಕೆಂಡ್​ಗಳಲ್ಲಿ 100 ಕಿಲೋ ಮೀಟರ್ ವೇಗ ಪಡೆಯುವ ಸಾಮರ್ಥ್ಯ ಹೊಂದಿರುವ ಆಡಿ ಕಾರು, ಗಂಟೆಗೆ 330 ಕಿ.ಮೀ. ವೇಗದಲ್ಲಿ ಓಡುವ ಸಾಮರ್ಥ್ಯ ಈ ಕಾರಿನಲ್ಲಿದೆ. [ಚಿತ್ರಗಳಲ್ಲಿ: ಕ್ರೇಜಿ ಬಾಯ್ ಕೊಹ್ಲಿ ಆಡಿ ಕಾರಿನ ಸವಾರಿ]

ಕರ್ನಾಟಕದ ಶೋರೂಂಗಳಲ್ಲೂ ಲಭ್ಯವಿರುವ ಈ ಕಾರಿನ ಬೆಲೆ 2.60 ಕೋಟಿ ರು. ಐಪಿಎಲ್ 2015ರಲ್ಲಿ ಲ್ಯಾಂಬ್ರೋಗಿನಿ ಗಲಾಟ್ ಏರಿದ್ದ ಕೊಹ್ಲಿ ಅವರು ದೆಹಲಿ ರಸ್ತೆಯಲ್ಲಿ ಸುತ್ತಾಡಿ ಸುದ್ದಿ ಮಾಡಿದ್ದರು.

ಆಡಿ ಆರ್8 ಸ್ಪೋರ್ಟ್ಸ್ ಕಾರ್​ಅನ್ನು ಬುದ್ಧ ಅಂತಾರಾಷ್ಟ್ರೀಯ ಸರ್ಕ್ಯೂಟ್​ನಲ್ಲಿ ಶರವೇಗದಲ್ಲಿ ಚಲಿಸಿದರು. ಆದರೆ, ಈ ಬಗ್ಗೆ ಮಾತನಾಡಿದ ಕೊಹ್ಲಿ, ಇದಕ್ಕೂ ಮುನ್ನ ಗಂಟೆಗೆ 290 ಕಿಲೋ ಮೀಟರ್ ವೇಗದಲ್ಲಿ ಕಾರ್ ಓಡಿಸಿದ್ದೆ. ವೃತ್ತಿಪರ ಚಾಲಕರಂತೆ ಹಿಂದಿನ ದಾಖಲೆಯನ್ನು ಮುರಿಯಲು ಈ ಬಾರಿ ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
IPL 2017 : RCB captain Virat Kohli 'scores' 280kmph on test track. Virat Kohli hit the racing track at the Buddh International Circuit - hitting a speed of 280 kms per hour.
Please Wait while comments are loading...