ಕೆಕೆಆರ್ ಮಣಿಸಿ, ನಾಲ್ಕನೇ ಬಾರಿಗೆ ಐಪಿಎಲ್ ಫೈನಲಿಗೆ ಮುಂಬೈ

Posted By:
Subscribe to Oneindia Kannada

ಬೆಂಗಳೂರು, ಮೇ 19: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) 10ರ ಕ್ವಾಲಿಫೈಯರ್ 2 ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 6 ವಿಕೆಟ್ ಗಳ ಸುಲಭ ಜಯ ದಾಖಲಿಸಿದ ಮುಂಬೈ ಇಂಡಿಯನ್ಸ್ ತಂಡ, ಫೈನಲ್ ತಲುಪಿದೆ. 107ರನ್ ಚೇಸ್ ಮಾಡಿದ ಮುಂಬೈ 14.3 ಓವರ್ ಗಳಲ್ಲಿ 111/4 ಸ್ಕೋರ್ ಮಾಡಿ ಗೆಲುವು ದಾಖಲಿಸಿತು.

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ (ಮೇ 19) ದ ಈ ಪಂದ್ಯವನ್ನು ಗೆದ್ದ ಮುಂಬೈ ಇಂಡಿಯನ್ಸ್ ತಂಡವು ಮತ್ತೊಮ್ಮೆ ರೈಸಿಂಗ್ ಪುಣೆ ಸೂಪರ್ ಜೈಂಟ್ ವಿರುದ್ಧ ಸೆಣೆಸಲಿದೆ. ಕ್ವಾಲಿಫೈಯರ್ 1ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧವೇ ಜಯ ದಾಖಲಿಸಿದ್ದ ಪುಣೆ ತಂಡ ಫೈನಲ್ ತಲುಪಿತ್ತು. ಮೇ21ರ ಭಾನುವಾರದಂದು ಹೈದರಾಬಾರಿನಲ್ಲಿ ಫೈನಲ್ ಪಂದ್ಯ ನಿಗದಿಯಾಗಿದೆ.

IPL 2017: Qualifier 2: Mumbai Indians invite Kolkata Knight Riders to bat

ಮುಂಬೈ ಪರ ಕೃನಾಲ್ ಪಾಂಡ್ಯ ಅಜೇಯ 45ರನ್ ಗಳಿಸಿ ರನ್ ಚೇಸ್ ನಲ್ಲಿ ನೆರವಾದರು. ಇದಕ್ಕೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಉತ್ತಮ ಪ್ರದರ್ಶನ ನೀಡಿದೆ. ಕೆಕೆಆರ್ ತಂಡ 107ಸ್ಕೋರಿಗೆ ನಿಯಂತ್ರಿಸಿತು.

ಕೆಕೆಆರ್ ಪರ ಸೂರ್ಯಕುಮಾರ್ ಯಾದವ್ 31ರನ್, ಇಶಾಂಕ್ ಜಗ್ಗಿ 28ರನ್ ಗಳಿಸಿದರು. ಮುಂಬೈ ಪರ ಸ್ಪಿನ್ನರ್ ಕರಣ್ ಶರ್ಮ 4/16 ಗಳಿಸಿ ಉತ್ತಮ ಪ್ರದರ್ಶನ ನೀಡಿದರು. ಜಸ್ಪ್ರೀತ್ ಬೂಮ್ರಾ 3, ಮಿಚೆಲ್ ಜಾನ್ಸನ್ 2 ವಿಕೆಟ್ ಹಾಗೂ ಲಸಿತ್ ಮಾಲಿಂಗ 1 ವಿಕೆಟ್ ಪಡೆದರು.

ಮುಂಬೈ ತಂಡದಲ್ಲಿ ಮಿಚೆಲ್ ಮೆಕ್ಲೆನಗನ್ ಬದಲಿಗೆ ಮಿಚೆಲ್ ಜಾನ್ಸನ್ ಆಡುತ್ತಿದ್ದಾರೆ. ಕೆಕೆಆರ್ ತಂಡದಲ್ಲಿ ಯೂಸುಫ್ ಪಠಾಣ್ ಬದಲಿಗೆ ಅಂಕಿತ್ ರಜಪೂತ್ ಹಾಗು ಟ್ರೆಂಟ್ ಬೌಲ್ಟ್ ಬದಲಿಗೆ ಕಾಲಿನ್ ಡಿ ಗ್ರಾಂಡ್ ಹೊಮ್ ಅವರನ್ನು ಕರೆ ತರಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mumbai Indians beat Kolkata Knight Riders by 6wickets in the second Qualifier match of the Indian Premier League (IPL) 2017 here on Friday (May 19) and set final clash against Rising Pune Supergaint in Hyderabad on May 21
Please Wait while comments are loading...