ಮುಂಬೈ ಬಗ್ಗುಬಡಿದು ಐಪಿಎಲ್ 10 ರ ಫೈನಲ್ ತಲುಪಿದ ಪುಣೆ

Posted By:
Subscribe to Oneindia Kannada

ಮುಂಬೈ, ಮೇ 16: ಐಪಿಎಲ್ ನ ಪ್ಲೇ ಆಫ್ ಹಂತದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 10 ರನ್ ಗಳ ಅಂತರ ಜಯ ದಾಖಲಿಸಿದ ಪುಣೆ ತಂಡ ಐಪಿಎಲ್ 10ರ ಫೈನಲ್ ಪ್ರವೇಶಿಸಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 10ರ ಪ್ಲೇ ಆಫ್ ಹಂತದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪುಣೆ ಆರಂಭಿಕ ಆಘಾತ ಅನುಭವಿಸಿ ಕೂಡಾ 20 ಓವರ್ ಗಳಲ್ಲಿ 162/4 ಸ್ಕೋರ್ ಮಾಡಿತ್ತು. ಇದನ್ನು ಚೇಸ್ ಮಾಡಿದ ಮುಂಬೈ ತಂಡ 20 ಓವರ್ ಗಳಲ್ಲಿ 152ರನ್ ಮಾತ್ರ ಗಳಿಸಿ ಸೋಲೊಪ್ಪಿಕೊಂಡಿತು.

ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿ ಪ್ಲೇ ಆಫ್ ಗೆ ಅರ್ಹತೆ ಪಡೆದುಕೊಂಡ ಮುಂಬೈ ಇಂಡಿಯನ್ಸ್ ತಂಡ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಗೆದ್ದುಕೊಂಡಿತು.

IPL 2017: Qualifier 1: Rising Pune Supergiant (RSP) against Mumbai Indians (MI)

ಟಾಸ್ ಗೆದ್ದ ನಾಯಕ ರೋಹಿತ್ ಶರ್ಮ ಅವರು ಸ್ಟೀವ್ ಸ್ಮಿತ್ ಪಡೆಗೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mumbai Indians captain Rohit Sharma won the toss and invited Rising Pune Supergiant skipper Steven Smith to bat first in the first qualifier match of the Indian Premier League (IPL) 2017 here on Tuesday (May 16).
Please Wait while comments are loading...