ಚಿನ್ನಸ್ವಾಮಿ ಅಂಗಳದಲ್ಲಿ ಸೆಲ್ಫಿ ಸ್ಟಾರ್ ಗಳಾದ ಮುಂಬೈ ವೀರರು!

Posted By:
Subscribe to Oneindia Kannada

ಬೆಂಗಳೂರು, ಮೇ 19: ಐಪಿಎಲ್ ನ ಪ್ಲೇ ಆಫ್ ಹಂತದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 10 ರನ್ ಗಳ ಅಂತರ ಜಯ ದಾಖಲಿಸಿದ ಪುಣೆ ತಂಡ ಐಪಿಎಲ್ 10ರ ಫೈನಲ್ ಪ್ರವೇಶಿಸಿದ್ದು ತಿಳಿದಿರಬಹುದು.

ಈಗ ಮತ್ತೊಂದು ಅವಕಾಶ ಪಡೆದ ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಈಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ವಾಲಿಫೈಯರ್ 2 ಪಂದ್ಯಕ್ಕೆ ಸಜ್ಜಾಗುತ್ತಿದೆ.

ಬೆಂಗಳೂರಿನಲ್ಲಿ ಎಡಬಿಡದೆ ಸಂಜೆ ವೇಳೆ ಮಳೆ ಸುರಿಯುತ್ತಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಶುಕ್ರವಾರವೂ ಮಳೆ ತನ್ನ ಆರ್ಭಟ ಮುಂದುವರೆಸಲಿದೆ.[ಶುಕ್ರವಾರವೂ ದಕ್ಷಿಣ ಕರ್ನಾಟಕದಲ್ಲಿ ಮಳೆಯ ಅಭಿಯಾನ]

ಆದರೆ, ಚಿನ್ನಸ್ವಾಮಿ ಅಂಗಳದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆಟಗಾರರು ಮಳೆ ನಡುವೆ ಕೋಲ್ಕತತ ನೈಟ್ ರೈಡರ್ಸ್ ವಿರುದ್ಧದ ಕ್ವಾಲಿಫೈಯರ್ 2 ಪಂದ್ಯಕ್ಕಾಗಿ ತೀವ್ರ ಕಸರತ್ತು ನಡೆಸಿದರು. ಮಳೆ ಜೋರಾಗುತ್ತಿದ್ದಂತೆ, ಪ್ರೇಕ್ಷಕರ ಗ್ಯಾಲರಿಯತ್ತ ತೆರಳಿ ಅಭಿಮಾನಿಗಳ ಜತೆ ಸೆಲ್ಫಿ ಫೋಟೊಗೆ ಪೋಸ್ ನೀಡಿದರು. ಮುಂಬೈ ನಾಯಕ ರೋಹಿತ್ ಅವರಿಗೆ ಸಕತ್ ಡಿಮ್ಯಾಂಡ್ ಕಂಡು ಬಂದಿತು

ರೋಹಿತ್ ಶರ್ಮಾ ಸೆಲ್ಫಿ

ರೋಹಿತ್ ಶರ್ಮಾ ಸೆಲ್ಫಿ

ಟೀಂ ಇಂಡಿಯಾದ ಆರಂಭಿಕ ಆಟಗಾರ, ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮ ಅವರ ಜತೆ ಸೆಲ್ಫಿ ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿ ಬಿದ್ದರು.

ಪಾಂಡ್ಯ ಬ್ರದರ್ಸ್

ಪಾಂಡ್ಯ ಬ್ರದರ್ಸ್

ಟ್ವಿಟ್ಟರ್ ನಲ್ಲಿ ಮಾತಿನ ಚಕಮಕಿ ಮಾಡಿಕೊಂಡು, ಸೆಹ್ವಾಗ್ ರಿಂದ ಬುದ್ಧಿವಾದ ಹೇಳಿಸಿಕೊಂಡಿದ್ದ ಪಾಂಡ್ಯ ಬ್ರದರ್ಸ್ ಹಾರ್ದಿಕ್ ಹಾಗೂ ಕೃನಾಲ್ ಅವರು ಒಟ್ಟಿಗೆ ಕಸರತ್ತು ನಡೆಸುತ್ತಿದ್ದದ್ದು ಕಂಡು ಬಂದಿತು. ಮುಂಬೈ ತಂಡ ಪ್ರಮುಖ ಆಲ್ ರೌಂಡರ್ ಗಳಾಗಿರುವ ಇವರಿಬ್ಬರು ಮಹತ್ವದ ಪಾತ್ರ ನಿರ್ವಹಿಸಬೇಕಾಗಿದೆ.

ಬೆಂಗಳೂರಿನ ಹವಾಮಾನ

ಬೆಂಗಳೂರಿನ ಹವಾಮಾನ

ಬೆಂಗಳೂರಿನ ಹವಾಮಾನವನ್ನು ಮೆಚ್ಚುವ ಮುಂಬೈ ಇಂಡಿಯನ್ಸ್ ಆಟಗಾರರಿಗೆ ಚಿನ್ನಸ್ವಾಮಿ ಕ್ರೀಡಾಂಗಣ ಅಚ್ಚುಮೆಚ್ಚಿನ ಮೈದಾನವಾಗಿದೆ.

ಜಸ್ ಪ್ರೀತ್ ಬೂಮ್ರಾ

ಜಸ್ ಪ್ರೀತ್ ಬೂಮ್ರಾ

ನಾನು ಕೂಡಾ ಬ್ಯಾಟಿಂಗ್ ಮಾಡಬಲ್ಲೆ ಎಂದು ಪೋಸ್ ನೀಡಿದ ವೇಗಿ ಜಸ್ ಪ್ರೀತ್ ಬೂಮ್ರಾ.

ನಿತೀಶ್ ರಾಣಾ

ನಿತೀಶ್ ರಾಣಾ

ಮುಂಬೈನ ಪರ ಆಡುವ ಯುವ ಪ್ರತಿಭೆ ನಿತೀಶ್ ರಾಣಾ ಅವರ ಜತೆ ಅಭಿಮಾನಿಗಳು ಸೆಲ್ಪಿ ತೆಗೆಸಿಕೊಳ್ಳುತ್ತಿರುವುದು.

ಆರಂಭಿಕ ಸ್ಟಾರ್ ಆಟಗಾರ

ಆರಂಭಿಕ ಸ್ಟಾರ್ ಆಟಗಾರ

ಮುಂಬೈನ ಆರಂಭಿಕ ಆಟಗಾರನಾಗಿ ತಂಡಕ್ಕೆ ಅನೇಕ ಬಾರಿ ಉತ್ತಮ ಆರಂಭ ಒದಗಿಸಿರುವ ಪಾರ್ಥೀವ್ ಪಟೇಲ್ ಅವರು ಪೋಸ್ ಕೊಟ್ಟಿದ್ದು ಹೀಗೆ...

ರೋಹಿತ್ ಬ್ಯಾಟಿಂಗ್ ಬಲ

ರೋಹಿತ್ ಬ್ಯಾಟಿಂಗ್ ಬಲ

ಮುಂಬೈ ತಂಡದ ಬ್ಯಾಟಿಂಗ್ ಬಲ ಎನಿಸಿಕೊಂಡಿರುವ ನಾಯಕ ರೋಹಿತ್ ಶರ್ಮ ಅವರು ತರಬೇತಿ ವೇಳೆ ಪುಟಿದೇಳುವ ಚೆಂಡುಗಳನ್ನು ಎದುರಿಸುವ ಬಗೆಯನ್ನು ಅಭ್ಯಾಸ ಮಾಡಿದರು.

ಬೌಲಿಂಗ್ ತರಬೇತಿ

ಬೌಲಿಂಗ್ ತರಬೇತಿ

ಹಾರ್ದಿಕ್ ಪಾಂಡ್ಯ ಅವರು ಹೆಚ್ಚಾಗಿ ತಮ್ಮ ಬೌಲಿಂಗ್ ನತ್ತ ಗಮನ ಹರಿಸಿದರು.

ಫುಟ್ಬಾಲ್ ಕ್ರೇಜ್

ಫುಟ್ಬಾಲ್ ಕ್ರೇಜ್

ಕ್ರಿಕೆಟ್ ಆಟಗಾರರ ತರಬೇತಿ ಶಿಬಿರದ ಭಾಗವಾಗಿರುವ ಫುಟ್ಬಾಲ್ ಆಟದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆಟಗಾರರು ಹೆಚ್ಚು ರಿಲ್ಯಾಕ್ಸ್ ಆಗಿದ್ದು ಕಂಡು ಬಂದಿತು.

ಬೌಲಿಂಗ್ ಮೇಲೆ ಹೆಚ್ಚು ಗಮನ

ಬೌಲಿಂಗ್ ಮೇಲೆ ಹೆಚ್ಚು ಗಮನ

ಮುಂಬೈ ಇಂಡಿಯನ್ಸ್ ಕ್ವಾಲಿಫೈಯರ್ 2 ಪಂದ್ಯಕ್ಕಾಗಿ ಬೌಲಿಂಗ್ ಮೇಲೆ ಹೆಚ್ಚಿನ ಗಮನ ಹರಿಸಿದ್ದು ಕಂಡು ಬಂದಿತು. ಕೆಕೆಆರ್ ತಂಡದ ಬ್ಯಾಟಿಂಗ್ ಬಲವನ್ನು ನಿಯಂತ್ರಿಸಲು ಯಾವ ರೀತಿ ಬೌಲಿಂಗ್ ಪ್ರಯೋಗಿಸಬೇಕು ಎಂಬುದು ಮುಂಬೈ ತಂಡದಲ್ಲಿ ಹೆಚ್ಚು ಚರ್ಚಿತ ವಿಷಯವಾಗಿತ್ತು. ಚಿತ್ರಗಳು: ಮುಂಬೈ ಇಂಡಿಯನ್ಸ್ ವೆಬ್ ಸೈಟ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mumbai Indians (MI) take on Kolkata Knight Riders (KKR) in a crucial IPL 2017 Qualifier 2 encounter today (May 19) at the Chinnaswamy Stadium, Bengaluru.
Please Wait while comments are loading...