ಡೆಲ್ಲಿ ವಿರುದ್ಧ ಕೆಕೆಆರ್ ನ್ನು ಗೆಲ್ಲಿಸಿದ ಕರ್ನಾಟಕದ ಮನೀಷ್ ಪಾಂಡೆ!

Posted By:
Subscribe to Oneindia Kannada

ನವದೆಹಲಿ ಏಪ್ರಿಲ್ 17 : ಐಪಿಎಲ್ 10ನೇ ಆವೃತ್ತಿಯಲ್ಲಿ ಅಮೋಘ ಫಾರ್ಮ್ ನಲ್ಲಿರುವ ಕನ್ನಡಿಗ ಮನೀಶ್ ಪಾಂಡೆ ಕೋಲ್ಕತಾ ನೈಟ್'ರೈಡರ್ಸ ಗೆ ಮತ್ತೊಂದು ಜಯ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಇಲ್ಲಿನ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಡೆಲ್ಲಿ ಡೇರ್'ಡೆವಿಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಗೌತಮ್ ಗಂಭೀರ್ ನೇತೃತ್ವದ ಕೋಲ್ಕತಾ ನೈಟ್'ರೈಡರ್ಸ್ ಪಡೆ ನಾಲ್ಕು ವಿಕೆಟ್ ಗಳ ಜಯ ದಾಖಲಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟಿದೆ.

IPL 2017: Pathan, Pandey shine as Kolkata beat Delhi by 4 wickets

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ ಡೇರ್'ಡೆವಿಲ್ಸ್ ತಂಡ ನಿಗದಿತ 20 ಓವರ್'ಗಳಲ್ಲಿ 7 ವಿಕೆಟ್ ಕಳೆದುಕೊಂಡು 168ರನ್ ಗಳ ಸವಾಲಿನ ಮೊತ್ತ ಪೇರಿಸಿತು.

169 ರನ್ ಗಳ ಸವಾಲಿನ ಗುರಿ ಬೆನ್ನಟ್ಟಿದ ಕೋಲ್ಕತಾ ನೈಟ್ ರೈಡರ್ಸ್ ಆರಂಭಿಕ ಆಘಾತ ಅನುಭವಿಸಿದರೂ ಮನೀಶ್ ಪಾಂಡೆ (ಅಜೇಯ 69) ಹಾಗೂ ಯೂಸೂಪ್ ಪಠಾಣ್(59) ಬಾರಿಸಿದ ಸಮಯೋಚಿತ ಶತಕದ ಜತೆಯಾಟದ ನೆರವಿನಿಂದ ರೋಚಕವಾಗಿ ನಾಲ್ಕು ವಿಕೆಟ್ ಗಳ ಜಯ ಸಾಧಿಸಿತು.

ಗೌತಮ್ ಗಂಭೀರ್ 14, ಕಾಲಿನ್ ಡಿ ಗ್ರಾಂಡ್‌ಹೊಮ್ಮೆ 01, ರಾಬಿನ್‌ ಉತ್ತಪ್ಪ 04 ಔಟ್‌ ಆಗುವ ಮೂಲಕ ಆರಂಭಿಕ ಆಘಾತ ಎದುರಿಸಿತ್ತು.

ನಂತರ ಬ್ಯಾಟ್ ಮಾಡಿದ ಯೂಸುಫ್ ಪಠಾಣ್ (59), ಮನೀಷ್ ಪಾಂಡೆ(69*) ಉತ್ತಮ ಜತೆಯಾಟ ತಂಡದ ಗೆಲುವಿಗೆ ಕಾರಣವಾಯಿತು.

ಡೆಲ್ಲಿ ಡೇರ್ ಡೆವಿಲ್ಸ್‌ ಪರ ಜಹೀರ್ ಖಾನ್‌ 2, ಪ್ಯಾಟ್ ಕಮಿನ್ಸ್ 2, ಕ್ರಿಸ್ ಮೋರಿಸ್‌ 1, ಅಮಿತ್‌ ಮಿಶ್ರಾ 1 ವಿಕೆಟ್‌ ಪಡೆದರು.

ಡೆಲ್ಲಿ ಪರ ಸಂಜು ಸ್ಯಾಮ್ಸನ್ 39, ಸ್ಯಾಮ್ ಬಿಲ್ಲಿಂಗ್ಸ್ 21, ಕರುಣ್ ನಾಯರ್‌ 21, ಶ್ರೇಯಸ್ ಐಯರ್ 26, ರಿಷಭ್ ಪಂತ್‌ 38, ಏಂಜೆಲೊ ಮ್ಯಾಥ್ಯೂಸ್ 01, ಕ್ರಿಸ್ ಮೋರಿಸ್‌ 16 , ಕಮ್ಮಿನ್ಸ್ ಬ್ಯಾಟಿಂಗ್‌ 03 ರನ್‌ ಗಳಿಸಿದ್ದಾರೆ.

ಕೆಕೆಆರ್ ಪರ ನಾಥನ್ ಕೌಲ್ಟರ್ ನೈಲ್ 3, ಕ್ರಿಸ್ ವೋಕ್ಸ್ 1, ಉಮೇಶ್‌ ಯಾದವ್‌ 1, ಸುನೀಲ್‌ ನರೇನ್ 1 ವಿಕೆಟ್‌ ಪಡೆದಿದ್ದಾರೆ.

ಸಂಕ್ಷಿಪ್ತ ಸ್ಕೋರ್:
ಡೆಲ್ಲಿ ಡೇರ್'ಡೆವಿಲ್ಸ್: 168/7, ಸಂಜು ಸ್ಯಾಮ್ಸನ್, 39, ರಿಷಭ್ ಪಂತ್ 38, ನಾಥನ್ ಕೌಲ್ಟರ್ ನೈಲ್, 22ಕ್ಕೆ3
ಕೋಲ್ಕತಾ ನೈಟ್'ರೈಡರ್ಸ್: 169/6, ಮನೀಶ್ ಪಾಂಡೆ ಅಜೇಯ 69, ಯೂಸೂಪ್ ಪಠಾಣ್ 59, ಜಹೀರ್ ಖಾನ್ 28ಕ್ಕೆ2.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Yusuf Pathan and Manish Pandey's 131 runs partnership guide Kolkata Knight Riders (KKR) to a 4-wicket win over Delhi Daredevils.
Please Wait while comments are loading...