ಕೆಕೆಆರ್ ವಿರುದ್ಧ ಗೆದ್ದು, ಹೊಸ ಇತಿಹಾಸ ಬರೆದ ಮುಂಬೈ

Posted By:
Subscribe to Oneindia Kannada

ಮುಂಬೈ, ಮೇ 14: ಐಪಿಎಲ್ 10ರ ಲೀಗ್ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಟಿ20ಯಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. 100 ಟ್ವೆಂಟಿ20 ಪಂದ್ಯಗಳನ್ನು ಗೆದ್ದುಕೊಂಡಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡ ಈ ಸಾಧನೆ ಮಾಡಿದ ಮೊದಲ ತಂಡ ಎನಿಸಿಕೊಂಡಿದೆ.

ಎರಡು ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಚಾಂಪಿಯನ್ ಎನಿಸಿಕೊಂಡಿರುವ ರೋಹಿತ್ ಶರ್ಮ ನೇತೃತ್ವದ ಪಡೆ ಈ ಬಾರಿಯ ಐಪಿಎಲ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದೆ. [ಪ್ಲೇ ಆಫ್ ಪೂರ್ಣ ವಿವರ, ಮುಂಬೈಗೆ ಸಕತ್ ಚಾನ್ಸ್]

ಐಪಿಎಲ್ ನಲ್ಲಿ ಈವರೆಗೆ ತಾನು ಆಡಿದ 14 ಪಂದ್ಯಗಳಿಂದ ಒಟ್ಟು 20 ಅಂಕಗಳ ಪಡೆಯುವ ಮೂಲಕ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿ ಪ್ಲೇ ಆಫ್ ಹಂತ ತಲುಪಿದೆ.

ಐಪಿಎಲ್ 10ರ ಕೊನೆ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 9 ರನ್ ಗಳಿಂದ ಮುಂಬೈ ಇಂಡಿಯನ್ಸ್ ತಂಡ ಸೋಲಿಸಿತು. ಇದು ಟಿ20ಯಲ್ಲಿ ಮುಂಬೈ ತಂಡದ 100ನೇ ಗೆಲುವಾಗಿದೆ.

ಟಿ20 ದಾಖಲೆ ಬರೆದ ಮುಂಬೈ

ಟಿ20 ದಾಖಲೆ ಬರೆದ ಮುಂಬೈ

ಟ್ವೆಂಟಿ20 ಮಾದರಿಯಲ್ಲಿ ಮೊಟ್ಟ ಮೊದಲ ಬಾರಿಗೆ 100 ಪಂದ್ಯಗಳನ್ನು ಗೆದ್ದಿರುವ ಭಾರತದ ಮೊದಲ ತಂಡ.

10 ಸೀಸನ್ ಆಡಿರುವ ಮುಂಬೈ

2008ರಿಂದ 2017ರ ತನಕ ಇಂಡಿಯನ್ ಪ್ರೀಮಿಯರ್ ಲೀಗ್ ನ 10 ಆವೃತ್ತಿ ಹಾಗೂ ಚಾಂಪಿಯನ್ಸ್ ಲೀಗ್ ಟಿ20 ಆಡಿರುವ ಮುಂಬೈ ತಂಡ 100 ಗೆಲುವು ಸಾಧಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ 8 ಸೀಸನ್ ನಲ್ಲೇ 94 ಗೆಲುವು ಸಾಧಿಸಿತ್ತು. ಆದರೆ, ಅಮಾನತುಗೊಂಡಿರುವುದರಿಂದ ದಾಖಲೆ ಮಾಡಲು ಸಾಧ್ಯವಾಗಲಿಲ್ಲ.

10 ಸೀಸನ್ ನಲ್ಲಿ ಮುಂಬೈ

10 ಸೀಸನ್ ನಲ್ಲಿ ಮುಂಬೈ

ಮುಂಬೈ ತಂಡ ತನ್ನ ಮೊದಲ ಟಿ20 ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ) ವಿರುದ್ಧ ಆಡಿತ್ತು. ಈ ಪಂದ್ಯದಲ್ಲಿ 5 ವಿಕೆಟ್ ಗಳಿಂದ ಮುಂಬೈ ಸೋಲು ಕಂಡಿತ್ತು. ಮೊದಲ ಗೆಲುವನ್ನು ಏಪ್ರಿಲ್ 29, 2008ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕಂಡಿತು. ಕೆಕೆಆರ್ ವಿರುದ್ಧ 7 ವಿಕೆಟ್ ಗಳ ಗೆಲುವು ಮೊದಲ ಗೆಲುವು.

ಮುಂಬೈನ ನೆಚ್ಚಿನ ಎದುರಾಳಿ ಕೆಕೆಆರ್

ಮುಂಬೈನ ನೆಚ್ಚಿನ ಎದುರಾಳಿ ಕೆಕೆಆರ್

ಕಳೆದ 10 ಸೀಸನ್ ನಲ್ಲಿ ಅನೇಕ ತಂಡಗಳ ವಿರುದ್ಧ ಆಡಿ ಗೆದ್ದು, ಸೋತಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ ನೆಚ್ಚಿನ ಎದುರಾಳಿಯಾಗಿದೆ. ಕೆಕೆಆರ್ ವಿರುದ್ಧ 2008ರಲ್ಲಿ ಮೊದಲ ಗೆಲುವು ಸಾಧಿಸಿದ್ದಲ್ಲದೆ 100ನೇ ಗೆಲುವನ್ನು ಮೇ 13, 2017ರಲ್ಲಿ ಕೆಕೆಆರ್ ವಿರುದ್ಧವೇ ಗಳಿಸಿದ್ದು ಮುಂಬೈನ ಸಾಧನೆ. ಒಟ್ಟಾರೆ, 20 ಬಾರಿ ಈ ಎರಡು ಬಲಿಷ್ಠ ತಂಡಗಳು ಸೆಣೆಸಿದ್ದು, 15 ಬಾರಿ ಮುಂಬೈ ತಂಡವೇ ಜಯಭೇರಿ ಬಾರಿಸಿದೆ.

2 ಬಾರಿ ಚಾಂಪಿಯನ್

2 ಬಾರಿ ಚಾಂಪಿಯನ್

2011ರಲ್ಲಿ ಮುಂಬೈ ತಂಡ ಮೊದಲ ಬಾರಿಗೆ ಪ್ರತಿಷ್ಠಿತ ಟಿ20 ಕಪ್ ಗೆದ್ದುಕೊಂಡಿತು. ಚಾಂಪಿಯನ್ಸ್ ಲೀಗ್ ಟಿ20 ಗೆದ್ದ ಮುಂಬೈ ತಂಡ, ನಂತರ 2013 ಹಾಗೂ 2015ರಲ್ಲಿ ಐಪಿಎಲ್ ಟ್ರೋಫಿಯನ್ನು ರೋಹಿತ್ ಶರ್ಮ ಪಡೆ ತನ್ನದಾಗಿಸಿಕೊಂಡಿತು. ಐಪಿಎಲ್ 10ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ಅಥವಾ ರೈಸಿಂಗ್ ಪುಣೆ ಸೂಪರ್ ಜೈಂಟ್ (ಪಂಜಾಬ್ ಸೋಲಿಸಿದರೆ) ವಿರುದ್ಧ ಕ್ವಾಲಿಫೈಯರ್ ನಲ್ಲಿ ಆಡಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two times IPL champions Mumbai Indians (MI) reached a new milestone as they became the first team in history to win 100 T20 matches.
Please Wait while comments are loading...