ಐಪಿಎಲ್ 10: ಟಿ20ಯಲ್ಲಿ ಹೊಸ ದಾಖಲೆ ಬರೆದ ಧೋನಿ

Posted By:
Subscribe to Oneindia Kannada

ಇಂದೋರ್, ಏಪ್ರಿಲ್ 09: ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡದ ನಾಯಕತ್ವ ಕಳೆದುಕೊಂಡ ಬಳಿಕವೂ ತಂಡದಲ್ಲಿ ಆಡುತ್ತಿರುವ ಮಹೇಂದ್ರ ಸಿಂಗ್ ಧೋನಿ ಅವರಿಗೆ ಅಭಿಮಾನಿಗಳ ಶ್ರೀರಕ್ಷೆ ಸಿಕ್ಕಿದೆ. ಎರಡು ಪಂದ್ಯಗಳಲ್ಲಿ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡದಿದ್ದರೂ ಹೊಸ ಟಿ20 ದಾಖಲೆಯೊಂದನ್ನು ಬರೆದಿದ್ದಾರೆ.

ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ

ಏಪ್ರಿಲ್ 08ರಂದು ಕಿಂಗ್ಸ್ XI ಪಂಜಾಬ್ ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 10 ಪಂದ್ಯದಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ ಪರ ಆಡಿದ ಧೋನಿ ಅವರು ಈ ಸಾಧನೆ ಮಾಡಿದ್ದಾರೆ. ಏನದು ಸಾಧನೆ ಮುಂದೆ ಓದಿ..

ಹೋಳ್ಕರ್ ಸ್ಟೇಡಿಯಂನಲ್ಲಿ ಧೋನಿ ಅವರು ತಮ್ಮ ವೃತ್ತಿ ಬದುಕಿನ 250ನೇ ಟ್ವೆಂಟಿ20 ಪಂದ್ಯವನ್ನಾಡಿದರು. ಈ ಮೂಲಕ ಈ ಸಾಧನೆ ಮಾಡಿದ ಭಾರತದ ಪ್ರಥಮ ಆಟಗಾರ ಎನಿಸಿಕೊಂಡರು.

ಸುರೇಶ್ ರೈನಾ ಅವರು 246 ಪಂದ್ಯಗಳನ್ನಾಡಿದ್ದು ಎರಡನೇ ಸ್ಥಾನದಲ್ಲಿದ್ದಾರೆ. ಆದರೆ, 250ನೇ ಪಂದ್ಯವನ್ನು ಸ್ಮರಣೀಯವಾಗಿಸುವಲ್ಲಿ ಧೋನಿ ಸೋತು, ಕೇವಲ 5 ರನ್ ಗಳಿಸಿ ಔಟಾದರು.

35 ವರ್ಷ ವಯಸ್ಸಿನ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಧೋನಿ ಅವರು 2006ರಲ್ಲಿ ಜೋಹಾನ್ಸ್ ಬರ್ಗ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟಿ20 ಪಂದ್ಯವಾಡಿದರು. ಈ ಪಂದ್ಯಕ್ಕೂ ಮುನ್ನ 249 ಪಂದ್ಯಗಳಿಂದ 5,063ರನ್ ಕಲೆ ಹಾಕಿದ್ದಾರೆ.

ಭಾರತದ ಪರ ಅತಿ ಹೆಚ್ಚು ಟಿ20 ಪಂದ್ಯಗಳನ್ನಾಡಿದ ಆಟಗಾರರು (ಏಪ್ರಿಲ್ 09, 017ರಂತೆ)
250- ಧೋನಿ
246-ಸುರೇಶ್ ರೈನಾ
237 - ರೋಹಿತ್ ಶರ್ಮ
221-ಗೌತಮ್ ಗಂಭೀರ್
218- ಹರ್ಭಜನ್ ಸಿಂಗ್ ಹಾಗೂ ಯೂಸುಫ್ ಪಠಾಣ್
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mahendra Singh Dhoni set another record in his illustrious cricket career when he played for Rising Pune Supergiant (RPS) in an Indian Premier League (IPL) 2017 match against Kings XI Punjab (KXIP) here today (April 8).
Please Wait while comments are loading...