ಆರ್ ಸಿಬಿ ವಿರುದ್ಧ ಗುಜರಾತ್ ಗೆ ವೀರೋಚಿತ ಸೋಲು

Posted By:
Subscribe to Oneindia Kannada

ರಾಜ್ ಕೋಟ್, ಏಪ್ರಿಲ್ 18: ಬ್ರೆಂಡಾನ್ ಮೆಕಲಂ ಅವರ ಭರ್ಜರಿ ಅರ್ಧಶತಕ (72 ರನ್, 44 ಎಸೆತ, 2 ಬೌಂಡರಿ, 7 ಸಿಕ್ಸರ್) , ಮಧ್ಯಮ ಕ್ರಮಾಂಕದ ಈಶನ್ ಕಿಶನ್ (39 ರನ್, 16 ಎಸೆತ, 2 ಬೌಂಡರಿ, 4 ಸಿಕ್ಸರ್) ಅವರ ವೀರೋಚಿತ ಹೋರಾಟದ ಹೊರತಾಗಿಯೂ ಗುಜರಾತ್ ತಂಡ, ಮಂಗಳವಾರ ನಡೆದ ರಾಯಲ್ ಚಾಲೆಂಜರ್ಸ್ ವಿರುದ್ಧದ ಪಂದ್ಯದಲ್ಲಿ 21 ರನ್ ಗಳ ಸೋಲು ಅನುಭವಿಸಿತು.

ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಮೈದಾನದಲ್ಲಿ ರಾತ್ರಿ 8 ಗಂಟೆಗೆ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ, 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿತ್ತು. ಈ ಮೊತ್ತ ಬೆನ್ನಟ್ಟಿದ ಗುಜರಾತ್, 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 192 ರನ್ ಮಾತ್ರ ಗಳಿಸಿತು.[ಟಿ20ಯಲ್ಲಿ ಹೊಸ ವಿಶ್ವದಾಖಲೆ ಬರೆದ ಕ್ರಿಸ್ ಗೇಲ್]

IPL 2017: Match result between Royal Challengers Bengaluru Vs Gujarat Lions

ರಾಯಲ್ ಚಾಲೆಂಜರ್ಸ್ ಪೇರಿಸಿದ್ದ ದಾಖಲೆಯ ಮೊತ್ತವನ್ನು ಬೆನ್ನಟ್ಟಿದ ಗುಜರಾತ್ ಆರಂಭದಲ್ಲೇ ಡ್ವೈನ್ ಸ್ಮಿತ್ ಅವರನ್ನು ಕಳೆದುಕೊಂಡಿತು. ಆದರೂ, ಮತ್ತೊಬ್ಬ ಆರಂಭಿಕ ಬ್ರೆಂಡಾನ್ ಮೆಕಲಂ ಅವರ ಭರ್ಜರಿ ಬ್ಯಾಟಿಂಗ್ ನಿಂದ ಉತ್ತಮ ಗತಿಯಲ್ಲಿ ರನ್ ಪೇರಿಸಲಾರಂಭಿಸಿತು.

ಆದರೆ, ಬ್ರೆಂಡಾನ್ ಅವರಿಗೆ ಉತ್ತಮ ಸಾಥ್ ಸಿಗಲಿಲ್ಲ. ನಾಯಕ ಸುರೇಶ್ ರೈನಾ (23 ರನ್, 8 ಎಸೆತ, 2 ಬೌಂಡರಿ, 2 ಸಿಕ್ಸರ್) ಕೊಂಚ ಭರವಸೆ ನೀಡಿದರೂ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ.[ಐಪಿಎಲ್: ಶ್ರೇಷ್ಠ ಬೌಲರ್ ಗಳ ಪಟ್ಟಿಯಲ್ಲಿ ಕುಂಬ್ಳೆಗೆ ಸ್ಥಾನ]

ಅವರ ನಂತರ ಬಂದ ಆರೋನ್ ಫಿಂಚ್, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ ಹೆಚ್ಚು ಆಡದೇ ಪೆವಿಲಿಯನ್ ನತ್ತ ಮರಳಿದರು. ಮೆಕಲಂ ಕೂಡಾ ಅವರ ಹಿಂದೆಯೇ ಪೆವಿಲಿಯನ್ ಗೆ ಮರಳಿದ್ದು ಗುಜರಾತ್ ತಂಡಕ್ಕೆ ಹಿನ್ನಡೆ ತಂದಿತು.

ಆದರೂ, ಮಧ್ಯಮ ಕ್ರಮಾಂಕದಲ್ಲಿ ಬಂದ ಈ ಶನ್ ಕಿಶನ್ ಮಾತ್ರ ಮಿಂಚಿನ ಆಟವಾಡಿದರು. ಆದರೆ, ಅವರಿಂದ ಪಂದ್ಯ ಗೆಲ್ಲಿಸಲಾಗಲಿಲ್ಲ. 20ನೇ ಓವರ್ ನ 4ನೇ ಎಸೆತದಲ್ಲಿ ಅವರು ವಿಕೆಟ್ ಒಪ್ಪಿಸಿದರು.

ಚಾಲೆಂಜರ್ಸ್ ದಾಖಲೆಯ ಮೊತ್ತ: ಆರಂಭಿಕರಾದ ಕ್ರಿಸ್ ಗೇಲ್ (77 ರನ್, 38 ಎಸೆತ, 5 ಬೌಂಡರಿ, 7 ಸಿಕ್ಸರ್) ಹಾಗೂ ವಿರಾಟ್ ಕೊಹ್ಲಿ (64 ಎಸೆತ, 50 ಎಸೆತ, 7 ಬೌಂಡರಿ, 1 ಸಿಕ್ಸರ್) ಆಕ್ರಮಣಕಾರಿ ಬ್ಯಾಟಿಂಗ್ ನ ಸಹಾಯದಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಮಂಗಳವಾರ ನಡೆದ ಗುಜರಾತ್ ಲಯನ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 209 ರನ್ ಪೇರಿಸಿತು.

ಇದು ಐಪಿಎಲ್ ಇತಿಹಾಸದಲ್ಲೇ ತಂಡವೊಂದರಿಂದ ಮೂಡಿಬಂದ ಗರಿಷ್ಠ ಮೊತ್ತವಾಗಿದೆ. ಈ ಹಿಂದೆ ಈ ದಾಖಲೆ ಸನ್ ರೈಸರ್ಸ್ ಹೈದರಾಬಾದ್ ಹೆಸರಿನಲ್ಲಿತ್ತು. ಇದೇ ತಿಂಗಳ 5ರಂದು ನಡೆದಿದ್ದ ಐಪಿಎಲ್ ಪಂದ್ಯದಲ್ಲಿ ಹೈದರಾಬಾದ್ ತಂಡ, ಆರ್ ಸಿಬಿ ವಿರುದ್ಧವೇ 4 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿತ್ತು.

ಮಂಗಳವಾರದ ಪಂದ್ಯದಲ್ಲಿ ದೈತ್ಯ ಮೊತ್ತ ಪೇರಿಸುವ ಮೂಲಕ ಆರ್ ಸಿಬಿ, ಎದುರಾಳಿ ತಂಡಕ್ಕೆ ಗೆಲುವಿಗಾಗಿ 210 ರನ್ ಗಳ ಸವಾಲು ನೀಡಿತು. ಗೇಲ್-ಕೊಹ್ಲಿ ಜೋಡಿಯ ಅಬ್ಬರ ಹಾಗೂ ಮೊದಲ ವಿಕೆಟ್ ಗೆ 122 ರನ್ (12.4 ಓವರ್) ಜತೆಯಾಟ ನೀಡಿದ್ದೇ ಈ ದೈತ್ಯ ಮೊತ್ತ ಬರಲು ಕಾರಣ.

ಪಂದ್ಯಕ್ಕೂ ಮೊದಲು ಟಾಸ್ ಗೆದ್ದಿದ್ದ ಗುಜರಾತ್ ಲಯನ್ಸ್ ತಂಡದ ನಾಯಕ ಸುರೇಶ್ ರೈನಾ, ಮೊದಲಿಗೆ ಎದುರಾಳಿಗಳನ್ನು ಬ್ಯಾಟಿಂಗ್ ಮಾಡುವಂತೆ ಆಮಂತ್ರಿಸಿದರು.

ಇದರ ಸದುಪಯೋಗ ಪಡೆದ ಬೆಂಗಳೂರು ತಂಡದ ಆರಂಭಿಕರಾದ ಕ್ರಿಸ್ ಗೇಲ್ ಹಾಗೂ ವಿರಾಟ್ ಕೊಹ್ಲಿ, ಎದುರಾಳಿ ತಂಡದ ಬೌಲಿಂಗ್ ದಾಳಿಯನ್ನು ಅಕ್ಷರಶಃ ಧೂಳಿಪಟ ಮಾಡಿದರು.

ಮೊದಲ ಐದು ಓವರ್ ಗಳಲ್ಲಿ 36 ರನ್ ಕಲೆಹಾಕಿದ ಈ ಜೋಡಿ, 10 ಓವರ್ ಗಳಲ್ಲಿ ತಂಡದ ಮೊತ್ತವನ್ನು 92 ರನ್ ಗಳಿಗೆ ಮುಟ್ಟಿಸಿದರು.

ಇನಿಂಗ್ಸ್ ನ 8ನೇ ಓವರ್ ನ ಕೊನೆಯ ಎಸೆತದಲ್ಲಿ ಬ್ರೆಂಡಾನ್ ಮೆಕಲಂ ಅವರು ಹಿಡಿದ ಅದ್ಭುತ ಕ್ಯಾಚ್ ನ ಹೊರತಾಗಿಯೂ ಜೀವದಾನ ಪಡೆದ ಕ್ರಿಸ್ ಗೇಲ್ ಆನಂತರ ಮತ್ತಷ್ಟು ಭೀಕರ ದಾಳಿ ನಡೆಸಿದರು. ಸ್ಪಿನ್ನರ್ ರವೀಂದ್ರ ಜಡೇಜಾ ಮಾಡಿದ್ದ ಆ ಓವರ್ ನ 3 ಮತ್ತು 4ನೇ ಎಸೆತದಲ್ಲಿ ಎರಡು ಬೌಂಡರಿ, 5ನೇ ಎಸೆತ ಸಿಕ್ಸರ್ ಬಾರಿಸಿದ್ದ ಗೇಲ್, ಕೊನೆಯ ಎಸೆತದಲ್ಲಿ ಸಿಕ್ಸರ್ ಗೆ ಪ್ರಯತ್ನಿಸಿದ್ದರು.

ಆದರೆ, ಅದು ಲಾಂಗ್ ಆಫ್ ನಲ್ಲಿದ್ದ ಬ್ರೆಂಡಾನ್ ಮೆಕಲಂ ಅವರ ಕೈ ಸೇರಿತು. ತೀವ್ರ ಕಷ್ಟಕರವಾಗಿದ್ದ ಆ ಕ್ಯಾಚ್ ಅನ್ನು ಬ್ರೆಂಡಾನ್ ಅದ್ಭುತವಾಗಿ ಹಿಡಿದರಾದರೂ, ಚೆಂಡನ್ನು ಹಿಡಿದ ಮೇಲೆ ನೆಲದ ಮೇಲೆ ಜಾರಿಹೋದ ಅವರು ಧರಿಸಿದ್ದ ಟೋಪಿ ಬೌಂಡರಿ ಲೈನ್ ತಟ್ಟಿದ್ದರಿಂದಾಗಿ ಅದು ಸಿಕ್ಸರ್ ಎಂದು ಪರಿಗಣಿಸಲ್ಪಟ್ಟಿತು. ಹಾಗಾಗಿ, ಗೇಲ್ ಜೀವದಾನ ಪಡೆದರು.

ಅಲ್ಲಿಂದ ಮುಂದಕ್ಕೆ ಮಿಂಚಿದ ಗೇಲ್, 13ನೇ ಓವರ್ ವರೆಗೆ ಆಡಿ, ಆ ಓವರ್ ನ 4ನೇ ಎಸೆತದಲ್ಲಿ ಥಂಪಿ ಬೌಲಿಂಗ್ ನಲ್ಲಿ ಎಲ್ ಬಿಡಬ್ಲೂ ಆಗಿ ಹೊರನಡೆದರು.

ಅಲ್ಲಿಂದ ಮುಂದಕ್ಕೆ ಕೊಹ್ಲಿಯವರು ಕೊಂಚ ಇನಿಂಗ್ಸ್ ಗೆ ಚುರುಕು ತಂದರು. 15ನೇ ಓವರ್ ನಲ್ಲಿ ತಮ್ಮ ಅರ್ಧಶತಕ ಪೂರೈಸಿದ ಅವರು, ಅದರ ಮರು ಓವರ್ ನ 5ನೇ ಎಸೆತದಲ್ಲಿ ಸ್ಮಿತ್ ಗೆ ಕ್ಯಾಚಿತ್ತು ನಿರ್ಗಮಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chris Gayle and Virat Kolhi's splendid performances helped RCB to score good against Gujarath Lions in IPL Match on April 18, 2017. RCB scored 207 runs in 20 overs thus establishing a record in IPL as a team with highest score so far.
Please Wait while comments are loading...