ಹೈಲೇಟ್ಸ್ : ಪುಣೆ ಪಾಲಿಗೆ ನಂಜಾದ ಸಂಜು ಸೆಂಚುರಿ

Posted By:
Subscribe to Oneindia Kannada

ಪುಣೆ, ಏಪ್ರಿಲ್ 11: ಐಪಿಎಲ್ 10ನೇ ಆವೃತ್ತಿಯ 9ನೇ ಪಂದ್ಯದಲ್ಲಿ ಮೊದಲ ಶತಕ, ಮೊದಲ ಬಾರಿಗೆ ತಂಡವೊಂದು ಈ ಬಾರಿ 200 ರನ್ ಗಡಿ ದಾಟಿದ್ದು ಸೇರಿದಂತೆ ಹತ್ತು ಹಲವು ರೋಚಕ ಕ್ಷಣಗಳಿಗೆ ಪುಣೆ ಹಾಗೂ ಡೆಲ್ಲಿ ನಡುವಿನ ಪಂದ್ಯ ಸಾಕ್ಷಿಯಾಯಿತು.

62 ಎಸೆತಗಳಲ್ಲಿ 102ರನ್ ಗಳಿಸಿ ಪಂದ್ಯಶ್ರೇಷ್ಠ ಎನಿಸಿಕೊಂಡ ಸಂಜು ಸ್ಯಾಮ್ಸನ್ ಅಬ್ಬರದ ಆಟ ನೋಡಿ ಮಂಕಾದ ಪುಣೆ 206ರನ್ ಚೇಸ್ ಮಾಡಲಾಗದೆ 108 ಸ್ಕೋರಿಗೆ ಆಲೌಟ್ ಆಗಿ ಹೀನಾಯ ಸೋಲು ಕಂಡಿದೆ. [ಸ್ಕೋರ್ ಕಾರ್ಡ್]

22 ವರ್ಷ ವಯಸ್ಸಿನ ಬಲಗೈ ಬ್ಯಾಟ್ಸ್ ಮನ್ ಸಂಜು ಸ್ಯಾಮ್ಸನ್ ಅವರು ಐಪಿಎಲ್ ನಲ್ಲಿ ಶತಕ ಬಾರಿಸಿದ ಎರಡನೇ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡರು.[ಡೆಲ್ಲಿ ಪಂದ್ಯಕ್ಕೂ ಮುನ್ನ ಕಣ್ಣೀರಿಡುತ್ತಾ ಮನೆಗೆ ತೆರಳಿದ ತಿವಾರಿ!]

63 ಎಸೆತಗಳಲ್ಲಿ 102ರನ್ ಚೆಚ್ಚಿದ ಸಂಜು 5 ಸಿಕ್ಸರ್ ಹಾಗೂ 8 ಬೌಂಡರಿ ಬಾರಿಸಿದರು. ಕ್ರಿಸ್ ಮೊರಿಸ್ ಅವರು 9 ಎಸೆತಗಳಲ್ಲಿ 38ರನ್(3 ಸಿಕ್ಸರ್, 4 ಬೌಂಡರಿ) ಬಾರಿಸಿ, ಡೆಲ್ಲಿಯ ಮೊತ್ತವನ್ನು 200ರ ಗಡಿ ದಾಟಿಸಿದರು.

ಡೆಲ್ಲಿ ಬ್ಯಾಟ್ಸ್ ಮನ್ ದರ್ಬಾರ್

ಡೆಲ್ಲಿ ಬ್ಯಾಟ್ಸ್ ಮನ್ ದರ್ಬಾರ್

* ಸಂಜು ಸಾಮ್ಸನ್ ಐಪಿಎಲ್ ನಲ್ಲಿ ಮೊದಲ ಶತಕ ಬಾರಿಸಿದರು. ಇದು ಐಪಿಎಲ್ 10ರ ಮೊದಲ ಶತಕ ಕೂಡಾ ಆಗಿದೆ.
* ಮನೀಶ್ ಪಾಂಡೆ ನಂತರ ಐಪಿಎಲ್ ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಸಂಜು ಸಾಮ್ಸನ್.
* ಕ್ರಿಸ್ ಮೊರಿಸ್ 9 ಎಸೆತಗಳಲ್ಲಿ 422.22 ಸ್ಟ್ರೈಕ್ ರೇಟ್ ನಂತೆ ರನ್ ಗಳಿಸಿದರು.

ಪುಣೆ ನಾಯಕರಾದ ರಹಾನೆ

ಪುಣೆ ನಾಯಕರಾದ ರಹಾನೆ

* ಸ್ಮಿತ್ ಅನುಪಸ್ಥಿತಿಯಲ್ಲಿ ಅಜಿಂಕ್ಯರಹಾನೆ ಅವರು ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡದ ನಾಯಕತ್ವ ವಹಿಸಿಕೊಂಡರು.
* 97 ಪಂದ್ಯಗಳ ನಂತರ ತಂಡವೊಂದರ ನಾಯಕನಾಗುವ ಮೂಲಕ ರಹಾನೆ ಹೊಸ ದಾಖಲೆ ಬರೆದರು.
* ಹೊಟ್ಟೆ ನೋವಿನ ಕಾರಣದಿಂದ ಸ್ಟೀವ್ ಅವರು ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು.

ಕೊನೆ ನಾಲ್ಕು ಓವರ್ಸ್ ಮೊತ್ತ

ಕೊನೆ ನಾಲ್ಕು ಓವರ್ಸ್ ಮೊತ್ತ

* 2012ರಲ್ಲಿ 200 ಪ್ಲಸ್ ಗಳಿಸಿದ್ದ ಡೆಲ್ಲಿ ತಂಡ ಇಲ್ಲಿ ತನಕ ಕೇವಲ ಮೂರು ಬಾರಿ ಈ ಗಡಿ ದಾಟಿದೆ.
* ಕೊನೆ ನಾಲ್ಕು ಓವರ್ ಗಳಲ್ಲಿ ಡೇರ್ ಡೆವಿಲ್ಸ್ 76ರನ್ ಸ್ಕೋರ್ ಮಾಡಿತು. ಇದು ಮೂರನೇ ಗರಿಷ್ಠ ಮೊತ್ತವಾಗಿದೆ. ಆರ್ ಸಿಬಿ ಇದಕ್ಕೂ ಮುನ್ನ 89 ಹಾಗೂ 77ಸ್ಕೋರ್ ಮಾಡಿದೆ.
* ಮಾಯಾಂಕ್ ಅಗರವಾಲ್ 47 ಐಪಿಎಲ್ ಇನ್ನಿಂಗ್ಸ್ ನಲ್ಲಿ ಕೇವಲ 10 ಬಾರಿ 30ಪ್ಲಸ್ ರನ್ ಗಳಿಸಿದ್ದಾರೆ.

ಸಂಜು ಮೊದಲ ಶತಕ

ಸಂಜು ಮೊದಲ ಶತಕ

* ಸಂಜು ಅವರು ಇಲ್ಲಿ ತನಕ 48 ಎಸೆತಗಳನ್ನು ಎದುರಿಸಿದ್ದೆ ದೊಡ್ಡ ಇನ್ನಿಂಗ್ಸ್ ಆಗಿತ್ತು. ಈ ಬಾರಿ ಹೆಚ್ಚು ಸಮಯ ಕ್ರೀಸ್ ನಲ್ಲಿದ್ದು, ವೈಯಕ್ತಿಕ ಗರಿಷ್ಠ ಮೊತ್ತ ದಾಖಲಿಸಿದರು.
* 2015-16ರ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಜಾರ್ಖಂಡ್ ವಿರುದ್ಧ ಗಳಿಸಿದ್ದ 87ರನ್ ಇಲ್ಲಿ ತನಕ ಟಿ20ಯಲ್ಲಿ ಸಂಜು ಅವರ ಗರಿಷ್ಠ ಮೊತ್ತವಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kerala youngster Sanju Samson's maiden T20 century helped Delhi Daredevils (DD) post a mammoth 205/4 against Rising Pune Supergiant (RPS) in an Indian Premier League 2017 match at the Maharashtra Cricket Association Stadium here on Tuesday (April 11).
Please Wait while comments are loading...