ಪಂಜಾಬ್ ಪಂದ್ಯವನ್ನು ಗೆದ್ದರೆ, ಎಬಿಡಿ ಪ್ರೇಕ್ಷಕರನ್ನು ಗೆದ್ದರು!

Posted By:
Subscribe to Oneindia Kannada

ಇಂದೋರ್, ಏಪ್ರಿಲ್ 11: ಪಂಜಾಬ್ ತಂಡದ ಮೆಂಟರ್ ವೀರೇಂದ್ರ ಸೆಹ್ವಾಗ್ ಸ್ಟೈಲ್ ನಲ್ಲೇ ಕಿಂಗ್ಸ್ XI ನಾಯಕ ಗ್ಲನ್ ಮ್ಯಾಕ್ಸ್ ವೆಲ್ ಅವರು ಸಿಕ್ಸ್ ಬಾರಿಸಿ, ಆರ್ ಸಿಬಿ ಗರ್ವಭಂಗ ಮಾಡಿದರು.

ಕ್ಲಿಕ್ ಮಾಡಿ -->>ಐಪಿಎಲ್ ವಿಶೇಷ ಪುಟ: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ

ರಾಯಲ್‌ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ 360 ಡಿಗ್ರಿ ಆಟಗಾರ ಎಬಿ ಡಿವಿಲಿಯರ್ಸ್ ಈ ಬಾರಿಯ ಐಪಿಎಲ್ ನ ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದ್ದು ವ್ಯರ್ಥವಾಯಿತು. [ಆರ್ ಸಿಬಿ ವಿರುದ್ಧ ಸುಲಭ ಜಯ ದಾಖಲಿಸಿದ ಪಂಜಾಬ್]

ಆರ್ ಸಿಬಿ ನೀಡಿದ 149ರನ್ ಗಳ ಅಲ್ಪ ಮೊತ್ತದ ಟಾರ್ಗೆಟ್ ಬೆನ್ನುಹತ್ತಿದ ಪಂಜಾಬ್ ತಂಡ 8 ವಿಕೆಟ್ ಗಳ ಸುಲಭ ಜಯ ದಾಖಲಿಸಿತು. ಹಶೀಂ ಆಮ್ಲಾ ಲಯ ಕಂಡು ಕೊಂಡು ಬಿಡುಬೀಸಾಗಿ ಆಡಿದ್ದಲ್ಲದೆ ಅಜೇಯ 58 ರನ್ ಗಳಿಸಿದರು. ನಾಯಕ ಮ್ಯಾಕ್ಸ್ ವೆಲ್ ಅಜೇಯ 43ರನ್ ಗಳಿಸಿ ಗೆಲುವಿನ ನಗೆ ಬೀರಿದರು.

ಆರ್ ಸಿಬಿ ಪರ ಎಬಿ ಡಿವಿಲಿಯರ್ಸ್ ಅಜೇಯ 89 ರನ್ ಗಳಿಸಿ ಎಲ್ಲರ ಮನ ಗೆದ್ದರೆ, ಪಂಜಾಬ್ ತಂಡ ಸುಲಭವಾಗಿ ಪಂದ್ಯವನ್ನು ತನ್ನದಾಗಿಸಿಕೊಂಡಿತು.

ಟಾಸ್ ಗೆದ್ದಿದ್ದೆ ದಾಖಲೆ

ಟಾಸ್ ಗೆದ್ದಿದ್ದೆ ದಾಖಲೆ

* ಈ ಬಾರಿ ಐಪಿಎಲ್ ನಲ್ಲಿ ಸತತ ಮೂರನೇ ಬಾರಿಗೆ ಟಾಸ್ ಗೆದ್ದ ಹಂಗಾಮಿ ನಾಯಕ ಶೇನ್ ವಾಟ್ಸನ್. ಎರಡು ಪಂದ್ಯ ಸೋತು, ಒಂದು ಪಂದ್ಯವನ್ನು ಗೆದ್ದಿದ್ದಾರೆ.
* ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಬದಲಿಗೆ ಎಬಿ ಡಿವಿಲಿಯರ್ಸ್ ಕಣಕ್ಕಿಳಿದರು. * ಶೇನ್ ವಾಟ್ಸನ್ ಜತೆಗೆ ವಿಷ್ಣು ಆರಂಭಿಕ ಆಟಗಾರರಾಗಿ ಆಡಿದರು.

ವಾಟ್ಸನ್ ಬಲಿ ಪಡೆದ ಅಕ್ಷರ್

ವಾಟ್ಸನ್ ಬಲಿ ಪಡೆದ ಅಕ್ಷರ್

* ವಾಟ್ಸನ್ ಅವರು ಕೇವಲ 1 ರನ್ ಗಳಿಸಿ ಅಕ್ಷರ್ ಪಟೇಲ್ ಅವರ ಮೊದಲ ಓವರ್ (ಪಂದ್ಯದ ಮೊದಲ ಓವರ್ ಕೂಡಾ) ನಲ್ಲಿ ಔಟಾದರು.
* ಅಕ್ಷರ್ ಪಟೇಲ್ ಅವರು ನಾಲ್ಕು ಬಾರಿ ವಾಟ್ಸನ್ ಅವರ ವಿಕೆಟ್ ಬಲಿ ಪಡೆದಿದ್ದಾರೆ.
* ಐಪಿಎಲ್ 2013ರಿಂದ ಇಲ್ಲಿ ತನಕ ಪಂಜಾಬಿನ ಬೌಲರ್ ಸಂದೀಪ್ ಶರ್ಮ ಪವರ್ ಪ್ಲೇ ಅವಧಿಯಲಿ 32 ವಿಕೆಟ್ ಕಿತ್ತಿದ್ದಾರೆ. ಈ ಮೂಲಕ ಭುವನೇಶ್ವರ್ ಕುಮಾರ್ ಸಮಕ್ಕೆ ನಿಂತಿದ್ದಾರೆ. ಇಲ್ಲಿ ಬಳಸಿರುವುದು ಸಾಂದರ್ಭಿಕ ಚಿತ್ರ

100ನೇ ಸಿಕ್ಸರ್

100ನೇ ಸಿಕ್ಸರ್

* ಟಿ ನಟರಾಜನ್ ಅವರು ಎಸೆದ 9ನೇ ಓವರ್ ನಲ್ಲಿ ಮನ್ದೀಪ್ ಸಿಂಗ್ ಸಿಡಿಸಿದ ಸಿಕ್ಸರ್ ಐಪಿಎಲ್ 2017ರ 100ನೇ ಸಿಕ್ಸರ್ ಆಗಿದೆ.

* ಎಬಿ ಡಿ ವಿಲಿಯರ್ಸ್ ಅವರು 46 ಎಸೆತಗಳಲ್ಲಿ 9 ಸಿಕ್ಸರ್ ಬಾರಿಸಿ ಕಿಂಗ್ಸ್ XI ಪಂಜಾಬ್ ಬೌಲರ್ ಗಳನ್ನು ಕಾಡಿದರು. ಚಿತ್ರದಲ್ಲಿ ಆರ್ ಸಿಬಿಯ ಮನ್ದೀಪ್ ಸಿಂಗ್.

ಆರ್ ಸಿಬಿ ಬ್ಯಾಟಿಂಗ್ ಕುಸಿತ

ಆರ್ ಸಿಬಿ ಬ್ಯಾಟಿಂಗ್ ಕುಸಿತ

* ಎಬಿ ಡಿ ವಿಲಿಯರ್ಸ್ ಅವರು 46 ಎಸೆತಗಳಲ್ಲಿ 9 ಸಿಕ್ಸರ್ ಬಾರಿಸಿ ಕಿಂಗ್ಸ್ XI ಪಂಜಾಬ್ ಬೌಲರ್ ಗಳನ್ನು ಕಾಡಿದರು.

* ಎಬಿಡಿ ಅಬ್ಬರದಿಂದ ಕೊನೆ ಐದು ಓವರ್ ಗಳಲ್ಲಿ ಆರ್ ಸಿಬಿ 77ರನ್ ಗಳಿಸಿತು.
* ಮೊದಲ 15 ಓವರ್ ಗಳಲ್ಲಿ 71ರನ್ ಮಾತ್ರ ಗಳಿಸಿದ್ದ ಆರ್ ಸಿಬಿ
* ಒಟ್ಟಾರೆ, ಈ ಅಲ್ಪಮೊತ್ತದ ಪಂದ್ಯದಲ್ಲಿ 20 ಸಿಕ್ಸರ್ ಬಂದಿದ್ದು ವಿಶೇಷ.

ಆಮ್ಲಾ ಆಕರ್ಷಕ ಅರ್ಧಶತಕ

ಆಮ್ಲಾ ಆಕರ್ಷಕ ಅರ್ಧಶತಕ

* ಇನ್ನೂ 33 ಎಸೆತಗಳು ಬಾಕಿ ಇರುವಂತೆ ಪಂಜಾಬ್ ತಂಡ ಸುಲಭ ಜಯ ದಾಖಲಿಸಿತು. ಇದು ಈ ಐಪಿಎಲ್ ನ ಎರಡನೇ ಜಯವಾಗಿದೆ.
* ಹಶೀಂ ಆಮ್ಲಾ ಲಯ ಕಂಡುಕೊಂಡು 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 4 ಬೌಂಡರಿ, 3 ಸಿಕ್ಸರ್ ಸಿಡಿಸಿದರು.
* ಗ್ಲೆನ್ ಮ್ಯಾಕ್ಸ್ ವೆಲ್ 22 ಎಸೆತಗಳಲ್ಲಿ 43ರನ್ ಬಾರಿಸಿದರು. 3 ಬೌಂಡರಿ ಹಾಗೂ 4 ಸಿಕ್ಸರ್ ಚೆಚ್ಚಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kings XI Punjab (KXIP) produced a clinical performance to outclass the Royal Challengers Bangalore (RCB) by 8 wickets in their second game of Indian Premier League (IPL) match at the Holkar Stadium here on Monday (April 10).
Please Wait while comments are loading...