ಗುಜರಾತ್ ವಿರುದ್ಧ ರಶೀದ್, ವಾರ್ನರ್ ಆಟ ಬೊಂಬಾಟ್!

Posted By:
Subscribe to Oneindia Kannada

ಹೈದರಾಬಾದ್, ಏಪ್ರಿಲ್ 10: ಐಪಿಎಲ್ ನ ಹಾಲಿ ಚಾಂಪಿಯನ್ ತಂಡ ಸನ್ ರೈಸರ್ಸ್ ಹೈದರಾಬಾದ್ ಮತ್ತೊಂದು ಭರ್ಜರಿ ಜಯ ದಾಖಲಿಸಿದೆ. ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನದ ಯುವ ಸ್ಪಿನ್ನರ್ ರಶೀದ್, ನಾಯಕ ಡೇವಿಡ್ ವಾರ್ನರ್ ಬ್ಯಾಟಿಂಗ್ ಎಲ್ಲರ ಗಮನ ಸೆಳೆಯಿತು. ಪಂದ್ಯದ ಮುಖ್ಯಾಂಶಗಳು ಇಲ್ಲಿದೆ...[ಸ್ಕೋರ್ ಕಾರ್ಡ್]

ಹೈದರಾಬಾದ್ ಬೌಲರ್ ಗಳ ಕರಾರ್ ವಾಕ್ ಎಸೆತಗಳನ್ನು ಎದುರಿಸಲಾರದೆ ಗುಜರಾತ್ ಲಯನ್ಸ್ ತಂಡ 136 ರನ್ ಗಳಿಸುವಷ್ಟರಲಿ ಸುಸ್ತಾಯಿತು. ರಶೀದ್ ಖಾನ್ ಮೂರು ಪ್ರಮುಖ ವಿಕೆಟ್ ಕಿತ್ತು ಎಲ್ಲರ ಗಮನ ಸೆಳೆದರೆ, ರನ್ ಚೇಸಿಂಗ್ ನಲ್ಲಿ ವಾರ್ನರ್ ಅರ್ಧಶತಕ ಸಿಡಿಸಿ ಗೆಲುವು ತಂದುಕೊಟ್ಟರು.

ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ

ಡೇವಿಡ್ ವಾರ್ನರ್ ಅವರು 45 ಎಸೆತಗಳಲ್ಲಿ 76ರನ್ ಗಳಿಸಿ137 ಗುರಿಯನ್ನು 15.3 ಓವರ್ ಗಳಲ್ಲಿ ಗಳಿಸಲು ನೆರವಾದರು. ಆಲ್ ರೌಂಡರ್ ಹೆನ್ರಿಕ್ ಮೊಯಿಸಸ್ ಅಜೇಯ 52 ರನ್ ಗಳಿಸಿ ಸಾಥ್ ನೀಡಿದರು.

SRH celebrates

* ಮೊಯಿಸಿಸ್ ಹೆನ್ರಿಕ್ಯೂಸ್ ಅವರು 52ರನ್ ಗಳಿಸಿ ಈ ಐಪಿಎಲ್ ನ ಅತ್ಯಧಿಕ ರನ್ ಗಳಿಕೆ ಆಟಗಾರರರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದರು.
* ಡೇವಿಡ್ ವಾರ್ನರ್ ಅವರು 45 ಎಸೆತಗಳಲ್ಲಿ 76ರನ್ ಚೆಚ್ಚಿದರು.

* ವಾರ್ನರ್ ಟಿ20ಯಲ್ಲಿ 7000ರನ್ ಪೂರೈಸಿದರು. ಈ ಸಾಧನೆ ಮಾಡಿದ ನಾಲ್ಕನೇ ಆಟಗಾರ ಎನಿಸಿಕೊಂಡರು.
* ಐಪಿಎಲ್ ನಲ್ಲಿ ಅತಿಹೆಚ್ಚು ಅರ್ಧಶತಕ(33) ಬಾರಿಸಿದ ಸಾಧನೆ ವಾರ್ನರ್ ಹೆಸರಿನಲ್ಲಿದೆ.
* ವಾರ್ನರ್ ಅವರು ಹೈದರಾಬಾದಿನ ರಾಜೀವ ಗಾಂಧಿ ಸ್ಟೇಡಿಯಂನಲ್ಲಿ ಇಲ್ಲಿ ತನಕ 1000ರನ್ ಕಲೆ ಹಾಕಿದ್ದಾರೆ.

* 4 ಓವರ್ ಗಳಲ್ಲಿ 19ರನ್ನಿತ್ತು 3 ವಿಕೆಟ್ ಕಿತ್ತ ರಶೀದ್ ಖಾನ್ ಈಗ ನೇರಳೆ ಟೋಪಿ ಧರಿಸಿದರು.
* ನಮಜ್ ಓಜಾ ಅವರು ಐಪಿಎಲ್ ನಲ್ಲಿ 100ನೇ ಪಂದ್ಯವಾಡಿದ ನಾಲ್ಕನೇ ವಿಕೆಟ್ ಕೀಪರ್ ಎನಿಸಿಕೊಂಡರು.
* ಗುಜರಾತ್ ಪರ ಡ್ವಾಯ್ನೆ ಸ್ಮಿತ್ ಅತ್ಯಧಿಕ 37ರನ್ (27 ಎಸೆತಗಳು) ಗಳಿಸಿದರು. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sunrisers Hyderabad thrashed Gujarat Lions by 9 wickets in the match 6 of IPL 2017 all thanks to a brilliant bowling performance by Rashid Khan and an unbeaten 76 by captain David Warner.
Please Wait while comments are loading...