ಡೆಲ್ಲಿ ವಿರುದ್ಧ ಗೆದ್ದು, ಐಪಿಎಲ್ ಅಭಿಯಾನ ಮುಗಿಸಿದ ಆರ್ ಸಿಬಿ

Posted By:
Subscribe to Oneindia Kannada

ನವದೆಹಲಿ, ಮೇ 14: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಐಪಿಎಲ್ 10ರ ಕೊನೆ ಲೀಗ್ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಆರ್ ಸಿಬಿ ವಿರುದ್ಧ ಡೆಲ್ಲಿ ತಂಡ 10ರನ್ ಗಳ ಸೋಲು ಕಂಡಿದೆ.

ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಭಾನುವಾರ(ಮೇ 14) ರಾತ್ರಿ ನಡೆದ ಪಂದ್ಯ ಕುತೂಹಲಕಾರಿಯಾಗಿತ್ತು. ಅಂತಿಮವಾಗಿ ಆರ್ ಸಿಬಿ ಬೌಲರ್ ಗಳು ಡೆಲ್ಲಿಯನ್ನು ಕಟ್ಟಿಹಾಕಿದರು.

ಡೆಲ್ಲಿ ರನ್ ಚೇಸ್ : ಮೊದಲ ಓವರ್ ನಲ್ಲೇ ಸಂಜು ಸಾಮ್ಸನ್ ಶೂನ್ಯಕ್ಕೆ ಔಟ್
* ಕರುಣ್ ನಾಯರ್ 22 ಎಸೆತಗಳಲ್ಲಿ 26 ರನ್, ಶ್ರೇಯಸ್ ಐಯರ್ 30 ಎಸೆತಗಳಲ್ಲಿ 32 ಹಾಗೂ ರಿಷಬ್ ಪಂತ್ 34 ಎಸೆತಗಳಲ್ಲಿ 45ರನ್ ಗಳಿಸಿ ಉತ್ತಮ ಹೋರಾಟ ಪ್ರದರ್ಶಿಸಿದರು.'
* ಕೊನೆಯಲ್ಲಿ ಮೊಹಮ್ಮದ್ ಶಮಿ 9 ಎಸೆತಗಳಲ್ಲಿ 21ರನ್ ಗಳಿಸಿ ಆರ್ ಸಿಬಿಗೆ ಆತಂಕ ಮೂಡಿಸಿದರು.
* ಅಂತಿಮವಾಗಿ 20 ಓವರ್ ಗಳಲ್ಲಿ 151 ಸ್ಕೋರಿಗೆ ಡೆಲ್ಲಿ ಆಲೌಟ್ ಆಯಿತು.
* ಪವನ್ ನೇಗಿ 2 ಓವರ್ ಗಳಲ್ಲಿ 10 ರನ್ನಿತ್ತು 3 ವಿಕೆಟ್ ಹಾಗೂ ಹರ್ಷಲ್ ಪಟೇಲ್ 43ಕ್ಕೆ 3 ಗಳಿಸಿದರು.

ಆರ್ ಸಿಬಿ ಇನ್ನಿಂಗ್ಸ್ : ಕ್ರಿಸ್ ಗೇಲ್ 38 ಎಸೆತಗಳಲ್ಲಿ 48ರನ್ ಹಾಗೂ 45 ಎಸೆತಗಳಲ್ಲಿ 58ರನ್ ಗಳಿಸಿ ಪ್ರೇಕ್ಷಕರನ್ನು ರಂಜಿಸಿದರು.
ಜಾಧವ್ 12, ಸಚಿನ್ ಬೇಬಿ 12, ಪವನ್ ನೇಗಿ ಅಜೇಯ 13ರನ್(5 ಎಸೆತಗಳು) ನೆರವಿನಿಂದ 20 ಓವರ್ ಗಳಲ್ಲಿ 6/161 ಸ್ಕೋರ್ ಗಳಿಸಿತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಐದು ಬದಲಾವಣೆಗಳಾಗಿದ್ದು, ಮನ್ದೀಪ್ ಸಿಂಗ್, ಎಬಿ ಡಿ ವಿಲಿಯರ್ಸ್, ಶ್ರೀನಾಥ್ ಅರವಿಂದ್, ಸ್ಯಾಮುಯಲ್ ಅರವಿಂದ್ ಹಾಗೂ ಅಂಕಿತ್ ಚೌಧರಿ ಬದಲಿಗೆ ವಿಷ್ಣು ವಿನೋದ್, ಶೇನ್ ವಾಟ್ಸನ್, ಸಚಿನ್ ಬೇಬಿ, ಹರ್ಷಲ್ ಪಟೇಲ್ ಹಾಗೂ ಆವೇಶ್ ಖಾನ್ ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

Gayle and Kohli

13 ಪಂದ್ಯಗಳಿಂದ 12 ಅಂಕ ಗಳಿಸಿರುವ ಡೆಲ್ಲಿ ತಂಡ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ರೇಸಿನಿಂದ ಎಂದೋ ಹೊರಬಿದ್ದಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Royal Challengers Bangalore beat Delhi Daredevils in their final game of the Indian Premier League (IPL) 2017 here on Sunday (May 14).
Please Wait while comments are loading...