ಪಂಜಾಬ್ ಮಣಿಸಿ, ಪ್ಲೇ ಆಫ್ ಗೆ ಲಗ್ಗೆ ಇಟ್ಟ ಫುಣೆ

Posted By:
Subscribe to Oneindia Kannada

ಪುಣೆ, ಮೇ 14: ಕಿಂಗ್ಸ್ ಎಲೆವನ್ ಪಂಜಾಬ್ ವಿರುದ್ಧದ ಕೊನೆ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ರೈಸಿಂಗ್ ಪುಣೆ ತಂಡ ಪಂದ್ಯದ ಆರಂಭದಿಂದಲೇ ಹಿಡಿತ ಸಾಧಿಸಿ ಗೆಲುವು ದಾಖಲಿಸಿತು.

ಪಂಜಾಬ್ ತಂಡ ಒಡ್ಡಿದ್ದ 74ರನ್ ಗಳ ಸುಲಭ ಮೊತ್ತವನ್ನು ರಾಹುಲ್ ತ್ರಿಪಾಠಿ ವಿಕೆಟ್ ಕಳೆದುಕೊಂಡು 12 ಓವರ್ ಗಳಲ್ಲಿ ಸಾಧಿಸಿದ ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡ 9 ವಿಕೆಟ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.

ಪಂಜಾಬ್ ಬ್ಯಾಟಿಂಗ್: ವೃದ್ಧಿ ಮಾನ್ ಸಹಾ 13, ಶಾನ್ ಮಾರ್ಷ್ 10 ರನ್ , ಅಕ್ಶರ್ ಪಟೇಲ್ 22, ಸ್ವಪ್ನಿಲ್ ಸಿಂಗ್ 10ಗಳಿಸಿ ರನ್ ಗತಿ ಹೆಚ್ಚಿಸಲು ಯತ್ನಿಸಿ ವಿಫಲರಾದರು. ಪುಣೆ ಕರಾರ್ ವಾಕ್ ಬೌಲಿಂಗ್ ಮೂಲಕ ಪಂಜಾಬ್ ತಂಡವನ್ನು 15.5 ಓವರ್ ಗಳಲ್ಲಿ 73ರನ್ನಿಗೆ ಆಲೌಟ್ ಮಾಡಿತು. ಶಾರ್ದೂಲ್ ಠಾಕೂರ್ 3, ಆಡಂ ಝಂಪಾ, ಡಾನ್ ಕ್ರಿಶ್ಚಿಯನ್ ತಲಾ 2 ವಿಕೆಟ್ ಪಡೆದರು.

ಮೊದಲ ಹತ್ತು ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 56ರನ್ ಗಳಿಸಿ ಸಂಕಷ್ಟದಲ್ಲಿದ್ ಪಂಜಾಬ್ ತಂಡ 16 ಓವರ್ ಗಳಲ್ಲಿ 73ಸ್ಕೋರಿಗೆ ಆಲೌಟ್ ಆಗಿದೆ.

ಸದ್ಯಕ್ಕೆ ಈ ಎರಡು ತಂಡಗಳ ತಲಾ 16 ಅಂಕಗಳನ್ನು ಹೊಂದಿದ್ದು, ಅಂಕಪಟ್ಟಿಯಲ್ಲಿ ಕ್ರಮವಾಗಿ 4ನೇ ಹಾಗೂ 5ನೇ ಸ್ಥಾನಗಳಲ್ಲಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡವು ಅಂಕಪಟ್ಟಿಯ 2, 3ನೇ ಸ್ಥಾನಗಳಲ್ಲಿರುವ ತಂಡಗಳಿಗೆ ಸಡ್ಡು ಹೊಡೆದು ನಾಲ್ಕನೇ ತಂಡವಾಗಿ ಪ್ಲೇ ಆಫ್ ಗೆ ಅರ್ಹತೆ ಪಡೆಯಲಿದೆ.

IPL 2017: Match 55: Guptill, Marsh depart cheaply as Pune invite Punjab to bat

ಪುಣೆ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ. ಪಂಜಾಬ್ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಮ್ಯಾಟ್ ಹೆನ್ರಿ ಹಾಗೂ ಮನನ್ ವೋಹ್ರಾ ಬದಲಿಗೆ ಇಯಾನ್ ಮಾರ್ಗನ್ ಹಾಗೂ ಸ್ವಪ್ನಿಲ್ ಸಿಂಗ್ ಅವರು ತಂಡ ಸೇರಿದ್ದಾರೆ.

ಆಡುವ XI
ಪಂಜಾಬ್: ಅಜಿಂಕ್ಯ ರಹಾನೆ, ರಾಹುಲ್ ತ್ರಿಪಾಠಿ, ಸ್ಟೀವನ್ ಸ್ಮಿತ್ (ನಾಯಕ), ಮನೋಜ್ ತಿವಾರಿ, ಬೆನ್ ಸ್ಟೋಕ್ಸ್, ಎಂಎಸ್ ಧೋನ (ವಿಕೆಟ್ ಕೀಪರ್), ಡೇನಿಯಲ್ ಕ್ರಿಶ್ಚಿಯನ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಯದೇವ್ ಉನದ್ಕತ್, ಅಡಂ ಝಂಪಾ.

ಪಂಜಾಬ್: ಮಾರ್ಟಿನ್ ಗಪ್ಟಿಲ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್ ವೆಲ್ (ನಾಯಕ), ಶಾನ್ ಮಾರ್ಷ್, ಇಯಾನ್ ಮಾರ್ಗನ್, ಅಕ್ಷರ್ ಪಟೇಲ್, ರಾಹುಲ್ ತೆವಾಟಿಯಾ, ಸ್ವಪ್ನಿಲ್ ಸಿಂಗ್, ಮೋಹಿತ್ ಶರ್ಮ, ಇಶಾಂತ್ ಶರ್ಮ, ಸಂದೀಪ್ ಶರ್ಮ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rising Pune Supergiant beat Kings XI Punjab by 9 wickets and qualified for IPL playoff after Indian Premier League (IPL) match here on Sunday (May 14).
Please Wait while comments are loading...