ಗುಜರಾತ್ ಗೆ ಜಯ ತಂದ ಸುರೇಶ್ ರೈನಾ

Posted By:
Subscribe to Oneindia Kannada

ಕೋಲ್ಕತಾ, ಏಪ್ರಿಲ್ 21: ನಾಯಕ ಸುರೇಶ್ ರೈನಾ (84 ರನ್, 46 ಎಸೆತ, 9 ಬೌಂಡರಿ, 4 ಸಿಕ್ಸರ್) ಅವರ ಆಕರ್ಷಕ ಬ್ಯಾಟಿಂಗ್ ನ ನೆರವಿನಿಂದಾಗಿ ಗುಜರಾತ್ ಲಯನ್ಸ್ ತಂಡ, ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 4 ವಿಕೆಟ್ ಗಳ ಜಯ ಕಂಡಿತು.

ಇಲ್ಲಿನ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೋಲ್ಕತಾ, ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತು. ಆನಂತರ ತನ್ನ ಬ್ಯಾಟಿಂಗ್ ನಡೆಸಿದ ಗುಜರಾತ್ ತಂಡ, 18.2 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 188 ರನ್ ಗಳಿಸಿ ಜಯದ ನಗೆ ಬೀರಿತು.[ಸ್ಕೋರ್ ವಿವರ]

IPL 2017: Match 23: KKR Vs Gujrath Lions

ಕೋಲ್ಕತಾ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಗುಜರಾತ್ ಆರಂಭದಲ್ಲಿ ಉತ್ತಮ ಮುನ್ನಡೆ ದಾಖಲಿಸಿತ್ತು. ಆರೋನ್ ಫಿಂಚ್ ಹಾಗೂ ಬ್ರೆಂಡಾನ್ ಮೆಕಲಂ ಜೋಡಿ ಮೊದಲ ವಿಕೆಟ್ ಗೆ 3.3 ಓವರ್ ಗಳಲ್ಲಿ 42 ರನ್ ಕಲೆಹಾಕಿದ್ದರು. ಆದರೆ, 4ನೇ ಓವರ್ ನಲ್ಲಿ ಫಿಂಚ್ ಹಾಗೂ 7ನೇ ಓವರ್ ನಲ್ಲಿ ಮೆಕಲಂ ಪೆವಿಲಿಯನ್ ಗೆ ಮರಳಿದರು.

ಆದರೆ, ಮಧ್ಯಮ ಕ್ರಮಾಂಕದಲ್ಲಿ ಮಿಂಚಿದ ನಾಯಕ ಸುರೇಶ್ ರೈನಾ (84 ರನ್, 46 ಎಸೆತ, 9 ಬೌಂಡರಿ, 4 ಸಿಕ್ಸರ್), ಮಿಂಚಿನ ಬ್ಯಾಟಿಂಗ್ ನಡೆಸಿದರು. ಆದರೆ, ಅವರಿಗೆ ಒಬ್ಬ ಉತ್ತಮ ಜತೆಗಾರ ಕ್ರೀಸ್ ನಲ್ಲಿ ಸಿಗಲಿಲ್ಲ.

ದಿನೇಶ್ ಕಾರ್ತೀಕ್ (3), ಈಶನ್ ಕಿಶನ್ (4), ಡ್ವೈನ್ ಸ್ಮಿತ್ (5) ಬೇಗನೇ ಔಟಾದರು. ಆದರೂ, ಏಕಾಂಗಿ ಹೋರಾಟ ನಡೆಸಿದ ರೈನಾ, ತಂಡವನ್ನು ಗೆಲವಿನ ಹಾದಿಗೆ ತರುವಲ್ಲಿ ಸತತ ಪರಿಶ್ರಮಿಸಿದರು. 18ನೇ ಓವರ್ ನಲ್ಲಿ ರೈನಾ ವಿಕೆಟ್ ಉರುಳಿದರೂ, ಅಷ್ಟರಲ್ಲಾಗಲೇ ಗುಜರಾತ್ ತಂಡದ ಜಯದ ಹಾದಿ ಸ್ಪಷ್ಟವಾಗಿತ್ತು. ಆನಂತರ ಬಂದ ಬ್ಯಾಟ್ಸ್ ಮನ್ ಗಳು ಸುಲಭವಾಗಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ್ದ ಕೋಲ್ಕತಾ ತಂಡ, ರಾಬಿನ್ ಉತ್ತಪ್ಪ ಅವರ ಆಕರ್ಷಕ ಅರ್ಧಶತಕದಿಂದಾಗಿ (72 ರನ್, 48 ರನ್, 8 ಬೌಂಡರಿ, 2 ಸಿಕ್ಸರ್) ಗುಜರಾತ್ ಲಯನ್ಸ್ ತಂಡಕ್ಕೆ 188 ರನ್ ಗಳ ಸವಾಲು ನೀಡಿತು.[ಅಂಕ ಪಟ್ಟಿ]

ಕೋಲ್ಕತಾ ಉತ್ತಮ ಮೊತ್ತ: ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಕೋಲ್ಕತಾಕ್ಕೆ ಆರಂಭಿಕರಾದ ಸುನಿಲ್ ನಾರಾಯಣ್ (42 ರನ್, 17 ಎಸೆತ, 9 ಬೌಂಡರಿ, 1 ಸಿಕ್ಸರ್), ನಾಯಕ ಗೌತಮ್ ಗಂಭೀರ್ (33 ರನ್, 28 ಎಸೆತ, 2 ಬೌಂಡರಿ, 1 ಸಿಕ್ಸರ್) ಉತ್ತಮ ಆರಂಭ ನೀಡಿದರು.

ಈ ಜೋಡಿ, ಮೊದಲ ವಿಕೆಟ್ ಗೆ 3.2 ಓವರ್ ಗಳಲ್ಲಿ 45 ರನ್ ಗಳ ಜತೆಯಾಟ ನೀಡಿತು. 4ನೇ ಓವರ್ ನಲ್ಲಿ ನಾರಾಯಣ್ ವಿಕೆಟ್ ಉರುಳಿತು.

IPL 2017: Match 23: KKR Vs Gujrath Lions

ಆನಂತರ, ಜತೆಯಾದ ಉತ್ತಪ್ಪ ಜತೆಗೆ ಸೇರಿದ ನಾರಾಯಣ್, ಅಲ್ಲಿಂದ ಮುಂದಕ್ಕೆ 8.1 ಓವರ್ ಗಳ ಕಾಲ ಕ್ರೀಸ್ ನಲ್ಲಿದ್ದು 69 ರನ್ ಪೇರಿಸಿ ಔಟಾದರು.

ಆನಂತರ ಉತ್ತಪ್ಪಗೆ ಜತೆಯಾಗಿದ್ದು ಮನೀಶ್ ಪಾಂಡೆ. ಈ ಇಬ್ಬರೂ ಕನ್ನಡದ ಹುಡುಗರು ಸಾವಕಾಶವಾಗಿ ರನ್ ಗತಿ ಹೆಚ್ಚಿಸುತ್ತಾ ಹೋದರು. ಆದರೆ, 19ನೇ ಓವರ್ ನಲ್ಲಿ ಉತ್ತಪ್ಪ ವಿಕೆಟ್ ಉರುಳಿತು. ಆದರೆ, ಆನಂತರ, ಅವಸರದ ಆಟದಲ್ಲಿ ಕೋಲ್ಕತಾದ ಯೂಸುಫ್ ಪಠಾಣ್, ಸೂರ್ಯಕುಮಾರ್ ಯಾದವ್, ಬೇಗನೇ ಔಟಾದರು. ಮನೀಷ್ ಪಾಂಡೆ (24 ರನ್, 21 ಎಸೆತ, 2 ಬೌಂಡರಿ) ವಿಕೆಟ್ 20ನೇ ಓವರ್ ನ 3ನೇ ಎಸೆತದಲ್ಲಿ ಉರುಳಿತು.

ಒಟ್ಟಾರೆಯಾಗಿ, ಕೋಲ್ಕತಾ ತಂಡ 20 ಓವರ್ ಗಳಲ್ಲಿ 187 ರನ್ ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು.

ಸಂಕ್ಷಿಪ್ತ ಸ್ಕೋರ್:
ಕೋಲ್ಕತಾ ನೈಟ್ ರೈಡರ್ಸ್ 20 ಓವರ್ ಗಳಲ್ಲಿ 187ಕ್ಕೆ 5 (ರಾಬಿನ್ ಉತ್ತಪ್ಪ 72, ಸುನಿಲ್ ನಾರಾಯಣ್ 42; ಸುರೇಶ್ ರೈನಾ 11ಕ್ಕೆ 1, ಫಾಕ್ನರ್ 38ಕ್ಕೆ 1);
ಗುಜರಾತ್ ಲಯನ್ಸ್ 18.2 ಓವರ್ ಗಳಲ್ಲಿ 6 ವಿಕೆಟ್ ಗೆ 188 (ಸುರೇಶ್ ರೈನಾ 84, ಬ್ರೆಂಡಾನ್ ಮೆಕಲಂ 33; ಕುಲ್ದೀಪ್ ಯಾದವ್ 33ಕ್ಕೆ 2, ಕಾಲ್ಟರ್ ನೈಲ್ 41ಕ್ಕೆ 2).

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Robin Uttappa's half century helps KKR to score good total against Gujarath lions in IPL match on April 21, 2017. The team scored 187 runs at the loss of 5 wickets in 20 overs.
Please Wait while comments are loading...