ಪಂಜಾಬ್ ಗೆಲುವಿನ ಕನಸು ನುಚ್ಚುನೂರು ಮಾಡಿದ ಬಟ್ಲರ್

Posted By:
Subscribe to Oneindia Kannada

ಇಂದೋರ್, ಏಪ್ರಿಲ್ 20: ತಮ್ಮ ಈವರೆಗಿನ ವೃತ್ತಿಜೀವನದಲ್ಲೇ ಶ್ರೇಷ್ಠ ಪ್ರದರ್ಶನ ನೀಡಿದ ಜಾಸ್ ಬಟ್ಲರ್ (77 ರನ್, 37 ಎಸೆತ, 7 ಬೌಂಡರಿ, 5 ಸಿಕ್ಸರ್) ಅವರ ಬಿರುಸಿನ ಬ್ಯಾಟಿಂಗ್ ನ ಸಹಾಯದಿಂದಾಗಿ, ಮುಂಬೈ ಇಂಡಿಯನ್ಸ್ ತಂಡ, ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ 8 ವಿಕೆಟ್ ಗಳ ಭರ್ಜರಿ ಜಯ ಗಳಿಸಿತು.

ಇಲ್ಲಿನ ಹೋಳ್ಕರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್, ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 198 ರನ್ ಗಳ ಭರ್ಜರಿ ಮೊತ್ತ ದಾಖಲಿಸಿತು. ಆದರೆ, ಈ ಕಷ್ಟ ಸಾಧ್ಯವಾದ ಮೊತ್ತವನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾದ ಮುಂಬೈ, 15.3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿ ಇನ್ನೂ 28 ಎಸೆತಗಳು ಬಾಕಿಯಿರುವಂತೆಯೇ ಜಯದ ನಗೆ ಬೀರಿತು.[ಸ್ಕೋರ್ ವಿವರ]

IPL 2017: Match 22: Kings XI Punjab Vs Mumbai Indians

ಪಂಜಾಬ್ ತಂಡದ ಗೆಲುವಿನ ಕನಸನ್ನು ಭಗ್ನಗೊಳಿಸಿದ್ದು ಮುಂಬೈ ತಂಡದ ಆರಂಭಿಕ ಜಾಸ್ ಬಟ್ಲರ್. ಮತ್ತೊಬ್ಬ ಆರಂಭಿಕ ಪಾರ್ಥೀವ್ ಪಟೇಲ್ ಜತೆಗೂಡಿ ಮೊದಲ ವಿಕೆಟ್ ಗೆ 5.5 ಓವರ್ ಗಳಲ್ಲಿ 81 ರನ್ ಕಲೆಹಾಕಿದ ಅವರು, ಆನಂತರ ರಾಣಾ (ಅಜೇಯ 62 ರನ್, 34 ಎಸೆತ, 7 ಸಿಕ್ಸರ್) ಜತೆಗೂಡಿ 2ನೇ ವಿಕೆಟ್ ಗೆ 7.2 ಓವರ್ ಗಳಿಂದ 85 ರನ್ ಜೊತೆಯಾಟ ನೀಡಿದರು.

14ನೇ ಓವರ್ ನ ಮೊದಲ ಎಸೆತದಲ್ಲೇ ಬಟ್ಲರ್ ವಿಕೆಟ್ ಪತನಗೊಂಡರೂ, ಆನಂತರ ಬಂದ ಹಾರ್ದಿಕ್ ಪಾಂಡ್ಯ ಮೋಸ ಮಾಡಲಿಲ್ಲ. 2.2 ಓವರ್ ಗಳಲ್ಲಿ ರಾಣಾ, ಪಾಂಡ್ಯ ಜೋಡಿ, ಮುರಿಯದ ಮೂರನೇ ವಿಕೆಟ್ ಗೆ 33 ರನ್ ಪೇರಿಸಿ ಮುಂಬೈಗೆ ಜಯ ತಂದುಕೊಟ್ಟಿತು.

ಒಂದೇ ಮಾತಿನಲ್ಲಿ ಹೇಳುವುದಾದರೆ, ಬ್ಯಾಟಿಂಗ್ ನಲ್ಲಿ ತೋರಿದ ಕರಾರುವಾಕ್ ಪ್ರದರ್ಶನವನ್ನು ಬೌಲಿಂಗ್ ನಲ್ಲಿ ತೋರದಿದ್ದುದೇ ಪಂಜಾಬ್ ತಂಡದ ಸೋಲಿಗೆ ಕಾರಣವಾಯಿತು.

ಹಾಷೀಂ ಆಮ್ಲಾ ಮಿಂಚು: ಮುಂಬೈ ಇನಿಂಗ್ಸ್ ಗೂ ಮುುನ್ನ ನಡೆದ ಪಂಜಾಬ್ ಇನಿಂಗ್ಸ್ ವೇಳೆ, ಹಾಷೀಂ ಆಮ್ಲಾ ಆಕರ್ಷಕ ಶತಕ (ಅಜೇಯ 104, 60 ಎಸೆತ, 8 ಬೌಂಡರಿ, 6 ಸಿಕ್ಸರ್) ಸಿಡಿಸಿದರು. ಇದರಿಂದಾಗಿ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ, ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ 20 ಓವರ ಗಳಿಗೆ 4 ವಿಕೆಟ್ ನಷ್ಟಕ್ಕೆ 198 ರನ್ ಗಳ ಉತ್ತಮ ಸ್ಕೋರ್ ದಾಖಲಿಸಿದೆ.

ಟಾಸ್ ಗೆದ್ದಿದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ, ಮೊದಲಿಗೆ ಪಂಜಾಬ್ ತಂಡಕ್ಕೆ ಮೊದಲು ಬ್ಯಾಟಿಂಗ್ ನಡಸುವಂತೆ ಆಹ್ವಾನವಿತ್ತರು.

IPL 2017: Match 22: Kings XI Punjab Vs Mumbai Indians

ಅದರಂತೆ, ಮೊದಲು ಬ್ಯಾಟಿಂಗ್ ಗೆ ಇಳಿದ ಗ್ಲೆನ್ ಮ್ಯಾಕ್ಸ್ ವೆಲ್ ಪಡೆ, ಉತ್ತಮ ಆರಂಭ ತೋರಿತು. ಆರಂಭಿಕರಾಗಿ ಕಣಕ್ಕಿಳಿದ ಹಾಷೀಂ ಆಮ್ಲಾ, ಹಾಗೂ ಶಾನ್ ಮಾರ್ಷ್ 5.5 ಓವರ್ ಗಳಲ್ಲಿ ಮೊದಲ ವಿಕೆಟ್ ಗೆ 46 ರನ್ ಪೇರಿಸಿದರು.

6ನೇ ಓವರ್ ನ ಕೊನೆಯ ಎಸೆತದಲ್ಲಿ ಮಾರ್ಷ್ ವಿಕೆಟ್ ಉರುಳಿತು. ಆನಂತರ, ಆಮ್ಲಾಗೆ ಜತೆಯಾದ ವೃದ್ಧಿಮಾನ್ ಸಾಹಾ ಹೆಚ್ಚು ಆಡಲಿಲ್ಲ. 11ನೇ ಓವರ್ ನಲ್ಲಿ ಅವರ ವಿಕೆಟ್ ಪತನಗೊಂಡ ನಂತರ, ಆಮ್ಲಾಗೆ ಜತೆಯಾದ ನಾಯಕ ಮ್ಯಾಕ್ಸ್ ವೆಲ್, ಉತ್ತಮವಾಗಿ ಬ್ಯಾಟ್ ಬೀಸಿದರು.

ಅವರ ಹಾಗೂ ಆಮ್ಲಾ ಅವರ ಜುಗಲ್ ಬಂದಿಯಿಂದ ಪಂಜಾಬ್, 16 ಓವರ್ ಗಳಲ್ಲಿ 150 ರನ್ ಗಡಿ ದಾಟಲು ಸಾಧ್ಯವಾಯಿತು. ಈ ಜೋಡಿ, 3ನೇ ವಿಕೆಟ್ ಗೆ 5.3 ಓವರ್ ಗಳಿಂದ 83 ರನ್ ಕಲೆಹಾಕಿದ್ದು ಪಂಜಾಬ್ ಉತ್ತಮ ಮೊತ್ತ ಪೇರಿಸಲು ಸಾಧ್ಯವಾಯಿತು. ಆದರೆ, 17ನೇ ಓವರ್ ನಲ್ಲಿ ಬುಮ್ರಾ ಅವರಿಗೆ ಬೌಲ್ಡ್ ಆಗುವ ಮೂಲಕ ಮ್ಯಾಕ್ಸ್ ವೆಲ್ ಆಟಕ್ಕೆ ತೆರೆಬಿತ್ತು. ಅವರ ವಿಕೆಟ್ ಉರುಳಿದ ನಂತರ ಬಂದ ಸ್ಟಾಯ್ನಿಸ್, ಅಕ್ಷರ್ ಪಟೇಲ್ ಹೆಚ್ಚು ಆಡಲಿಲ್ಲ.

ಆದರೆ, ಹಾಷೀಂ ಆಮ್ಲಾ ಮಾತ್ರ ಅಜೇಯ 104 ರನ್ ಗಳಿಸಿ ತಂಡದ ಮೊತ್ತವನ್ನು 200 ರನ್ ಗಡಿಗೆ ತಂದು ನಿಲ್ಲಿಸಿದರು.

ಸಂಕ್ಷಿಪ್ತ ಸ್ಕೋರ್ : ಕಿಂಗ್ಸ್ ಇಲೆವೆನ್ ಪಂಜಾಬ್ 198ಕ್ಕೆ 4 (20 ಓವರ್) (ಹಾಷೀಂ ಆಮ್ಲಾ ಅಜೇಯ 104, ಮ್ಯಾಕ್ಸ್ ವೆಲ್ 40; ಮೆಕ್ಲೆನಾಘನ್ 46ಕ್ಕೆ 2, ಹಾರ್ದಿಕ್ ಪಾಂಡ್ಯ 29ಕ್ಕೆ 1).

ಮುಂಬೈ ಇಂಡಿಯನ್ಸ್ 199ಕ್ಕೆ 2 (15.3 ಓವರ್) (ಜಾಸ್ ಬಟ್ಲರ್ 77, ನಿತೀಶ್ ರಾಣಾ ಅಜೇಯ 62; ಮೋಹಿತ್ ಶರ್ಮಾ 29ಕ್ಕೆ 1, ಸ್ಟಾಯ್ನಿಸ್ 28ಕ್ಕೆ 1).

ಪಂದ್ಯಶ್ರೇಷ್ಠ: ಜಾಸ್ ಬಟ್ಲರ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
By the good batting from Opener Hashim Amla and Glenn Maxwell, Punjab posts 198 runs at the loss of 4 wickets in 20 overs in an IPL match against Mumbai Indians at Indore on April 20, 2017.
Please Wait while comments are loading...