ಒಳ್ಳೆ ಸ್ಕೋರ್ ಇದ್ರೂ ಪಂಜಾಬ್ ಸೋತಿದ್ಯಾಕೆ?: ಇಲ್ಲಿವೆ 7 ಕಾರಣ

Posted By:
Subscribe to Oneindia Kannada

ಹಾಷೀಂ ಆಮ್ಲಾ ಶತಕ, ಚುರುಕಿನ ರನ್ ಗತಿ, ಎದುರಾಳಿಗಳ ಬೌಲಿಂಗ್ ಸಮರ್ಥವಾಗಿ ಮೆಟ್ಟಿ ಒಂದು ದೈತ್ಯ ಮೊತ್ತ ಕಲೆಹಾಕಿದ ಪಂಜಾಬ್ ತಂಡ, ಗುರುವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ದಯನೀಯವಾಗಿ ಸೋತಿತು.

ಇಲ್ಲಿನ ಹೋಳ್ಕರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್, ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 198 ರನ್ ಗಳ ಭರ್ಜರಿ ಮೊತ್ತ ದಾಖಲಿಸಿತು.[ಪಂಜಾಬ್ ಗೆಲುವಿನ ಕನಸು ನುಚ್ಚುನೂರು ಮಾಡಿದ ಬಟ್ಲರ್]

ಆದರೆ, ಈ ಕಷ್ಟ ಸಾಧ್ಯವಾದ ಮೊತ್ತವನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾದ ಮುಂಬೈ, 15.3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿ ಇನ್ನೂ 28 ಎಸೆತಗಳು ಬಾಕಿಯಿರುವಂತೆಯೇ ಜಯದ ನಗೆ ಬೀರಿತು.[ಸ್ಕೋರ್ ವಿವರ]

ಮೊದಲು ಬ್ಯಾಟ್ ಮಾಡಿ ಉತ್ತಮ ಮೊತ್ತ ಪೇರಿಸಿದರೂ ತಂಡವು ಸೋತಿದ್ಯಾಕೆ? ದೊಡ್ಡ ಮೊತ್ತ ಪೇರಿಸಿದ್ದೇವೆಂಬ ಖುಷಿಯೇ ಪಂಜಾಬ್ ತಂಡದ ಬೌಲರ್ ಗಳ ನಿರ್ಲಕ್ಷ್ಯತೆಗೆ ಕಾರಣವಾಯಿತೇ? ಅಥವಾ ಪಂಜಾಬ್ ತಂಡದ ಬೌಲಿಂಗ್ ಬಲಿಷ್ಠವಾಗಿದ್ದರೂ ಮುಂಬೈ ತಂಡದ ಬ್ಯಾಟ್ಸ್ ಮನ್ ಗಳು ಅದನ್ನು ಧೂಳೀಪಟ ಮಾಡಿದರೆ? (ಚಿತ್ರ ಕೃಪೆ: PTI, www.iplt20.com)

ಈ ಎಲ್ಲಾ ಸಂಭಾವ್ಯ ಕಾರಣಗಳ ಹುಡುಕಾಟ ಇಲ್ಲಿದೆ. ಪಂಜಾಬ್ ಸೋಲಿಗೆ ಐದು ಪ್ರಮುಖ ಕಾರಣಗಳನ್ನು ಪತ್ತೆ ಹಚ್ಚಲಾಗಿದೆ.

ಗೆದ್ದಿದ್ದು ಚೇಸಿಂಗ್ ನಲ್ಲಿಯೇ

ಗೆದ್ದಿದ್ದು ಚೇಸಿಂಗ್ ನಲ್ಲಿಯೇ

ಈ ವಿಶ್ಲೇಷಣೆಗೂ ಮುನ್ನ ಪಂಜಾಬ್ ತಂಡದ ಈವರೆಗಿನ ಪರ್ಫಾಮನ್ಸ್ ಬಗ್ಗೆ ಹೇಳಲೇಬೇಕಿದೆ. ಪಂಜಾಬ್ ತಂಡ ಈವರೆಗೆ ಆರು ಪಂದ್ಯಗಳನ್ನಾಡಿದ್ದು ಇವುಗಳಲ್ಲಿ ಅದು ಗೆದ್ದಿರುವುದು ಕೇವಲ 2ರಲ್ಲಿ ಮಾತ್ರ. ಆ ಎರಡೂ ಪಂದ್ಯಗಳು ಆ ತಂಡದ ತವರೂರಾದ ಇಂದೋರ್ ನಲ್ಲೇ ನಡೆದಿವೆ. ಗೆದ್ದಿರುವ ಎರಡೂ ಪಂದ್ಯಗಳಲ್ಲಿ (ಏ. 4ರಂದು ಪುಣೆ ವಿರುದ್ಧ, ಏ. 10ರಂದು ಆರ್ ಸಿಬಿ ವಿರುದ್ಧ) ಚೇಸಿಂಗ್ ಮಾಡಿಯೇ ಗೆದ್ದಿದೆ.

ಮೊದಲು ಬ್ಯಾಟ್ ಮಾಡಿದಾಗ ಉತ್ತಮ ಪರ್ಫಾಮನ್ಸ್

ಮೊದಲು ಬ್ಯಾಟ್ ಮಾಡಿದಾಗ ಉತ್ತಮ ಪರ್ಫಾಮನ್ಸ್

ಹಾಗೆಂದ ಮಾತ್ರಕ್ಕೇ ಚೇಸಿಂಗ್ ನಲ್ಲಿ ಪಂಜಾಬ್ ಉತ್ತಮವಾಗಿದೆ ಎಂದರ್ಥವಲ್ಲ. ಮೊದಲೆರಡು ಪಂದ್ಯಗಳಲ್ಲಿ ಗೆದ್ದ ಮೇಲೆ ಆನಂತರದ ಸತತ ಮೂರು ಪಂದ್ಯಗಳಲ್ಲಿ (ಕೆಕೆಆರ್, ಡೆಲ್ಲಿ, ಹೈದರಾಬಾದ್ ವಿರುದ್ಧ) ಪಂಜಾಬ್ ಪಡೆ, ಚೇಸಿಂಗ್ ನಲ್ಲಿಯೇ ಸೋತಿದೆ. ಅಲ್ಲಿಗೆ, ಚೇಸಿಂಗ್ ಗೆ ಇಳಿದಾಗ ಈ ತಂಡದ ಬ್ಯಾಟಿಂಗ್ ಅಷ್ಟು ಸದೃಢವಾಗಿಲ್ಲ ಎಂದರ್ಥ. ಆದರೆ, ಮೊದಲು ಬ್ಯಾಟ್ ಮಾಡಿದಾಗಲೆಲ್ಲಾ ತಂಡದ ಪರ್ಫಾಮನ್ಸ್ ಉತ್ತಮ ಎಂದೆನಿಸಿದೆ. ಏ. 13ರಂದು ನಡೆದಿದ್ದ ಕೆಕೆ ಆರ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ 170 ರನ್ ಕಲೆಹಾಕಿತ್ತು. ಏ. 20ರಂದು ಮುಂಬೈ ವಿರುದ್ಧ ಭರ್ಜರಿ 198 ರನ್ ಕಲೆಹಾಕಿತ್ತು.

ಈಗಾಗಲೇ ಇದು ಸಾಬೀತು

ಈಗಾಗಲೇ ಇದು ಸಾಬೀತು

ಎದುರಾಳಿಗಳು ಚೇಸಿಂಗ್ ಗೆ ನಿಂತಾಗ ಅವರನ್ನು ಕಟ್ಟಿಹಾಕುವ ಛಾತಿ ಪಂಜಾಬ್ ತಂಡದಲ್ಲಿ ಅಷ್ಟಾಗಿ ಕಾಣಿಸುತ್ತಿಲ್ಲ. ಏ. 13ರ ಕೆಕೆಆರ್ ಪಂದ್ಯದಲ್ಲಿ ಪಂಜಾಬ್, ಕೆಕೆಆರ್ ವಿರುದ್ಧ 170 ರನ್ ಗಳಿಸಿತಾದರೂ, ಕೋಲ್ಕತಾ ತಂಡ ಈ ಮೊತ್ತವನ್ನು 16.3 ಓವರ್ ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಹಿಂದಿಕ್ಕಿತು.

ದೌರ್ಬಲ್ಯದ ಲಾಭ ಪಡೆದ ಎದುರಾಳಿಗಳು

ದೌರ್ಬಲ್ಯದ ಲಾಭ ಪಡೆದ ಎದುರಾಳಿಗಳು

ಇನ್ನು, ಏ. 15ರಂದು ಡೆಲ್ಲಿ ತಂಡವು ಮೊದಲು ಬ್ಯಾಟಿಂಗ್ ಗೆ ಇಳಿದಾಗ, ಆ ತಂಡ ಪಂಜಾಬ್ ಬೌಲಿಂಗ್ ಶಕ್ತಿಯನ್ನು ಧೂಳಿಪಟ ಮಾಡಿ 6 ವಿಕೆಟ್ ನಷ್ಟಕ್ಕೆ 188 ರನ್ ಬಾರಿಸಿತ್ತು.
ಏ. 17ರಂದು ಸನ್ ರೈಸರ್ಸ್ ತಂಡ, ಪಂಜಾಬ್ ವಿರುದ್ಧ 6 ವಿಕೆಟ್ ಮಾತ್ರ ಕಳೆದುಕೊಂಡು 159 ರನ್ ಗಳಿಸಿತ್ತು.
ಹೀಗೆ... ಪಂಜಾಬ್ ತಂಡದ ಬೌಲಿಂಗ್ ವಿಭಾಗದ ಅವಗಢಗಳು ಸಾಗುತ್ತಲೇ ಬಂದಿವೆ. ಏ. 20ರಂದು ನಡೆದಿದ್ದ ಮುಂಬೈ ತಂಡದ ವಿರುದ್ಧದ ಪಂದ್ಯದಲ್ಲೂ ಇದು ಪುನರಾವರ್ತನೆಯಾಗಿದೆಯಷ್ಟೇ.

ಮತ್ತಷ್ಟು ದೊಡ್ಡ ಮೊತ್ತ ಬೇಕಿತ್ತು

ಮತ್ತಷ್ಟು ದೊಡ್ಡ ಮೊತ್ತ ಬೇಕಿತ್ತು

ಏ. 20ರಂದು ನಡೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ಹಾಷೀ ಆಮ್ಲಾ ಅವರ ಅಜೇಯ ಶತಕದ (104) ನೆರವಿನಿಂದಾಗಿ ತಂಡವು 198 ರನ್ ಗಳ ಭರ್ಜರಿ ಮೊತ್ತ ಪೇರಿಸಿತಾದರೂ, ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ ಬಿಟ್ಟರೆ ಮಿಕ್ಕವರಾರೂ ಆಡಲಿಲ್ಲ. ವೃದ್ಧಿಮಾನ್ ಸಾಹಾ, ಸ್ಟಾಯ್ನಿಸ್ ಅವರು ಕೊಂಚ ಆರ್ಭಟಿಸಿದ್ದರೂ ಪಂಜಾಬ್ ತಂಡದ ಮೊತ್ತ 220 ರನ್ ಗಡಿ ದಾಟುತ್ತಿತ್ತು. ಅಷ್ಟು ದೊಡ್ಡ ಮೊತ್ತವು ಸಾಧ್ಯವಾಗಿದ್ದರೆ, ಪಂಜಾಬ್ ತಂಡವು ದೈತ್ಯ ಬ್ಯಾಟ್ಸ್ ಮನ್ ಗಳುಳ್ಳ ಮುಂಬೈಗೆ ಸಡ್ಡು ಹೊಡೆಯಲು ಸಾಧ್ಯವಾಗುತ್ತಿತ್ತು.

ಎದುರಾಳಿ ತಂಡಕ್ಕೆ ಬ್ಯಾಟ್ ಬೀಸಲು ಅವಕಾಶ ಕೊಟ್ಟರು

ಎದುರಾಳಿ ತಂಡಕ್ಕೆ ಬ್ಯಾಟ್ ಬೀಸಲು ಅವಕಾಶ ಕೊಟ್ಟರು

ಇನ್ನು, ಬೌಲಿಂಗ್ ವಿಭಾಗಕ್ಕೆ ಬಂದರೆ, ಮುಂಬೈ ತಂಡದ ಆರಂಭಿಕರಾದ ಪಾರ್ಥೀವ್ ಪಟೇಲ್ ಹಾಗೂ ಜೋಸ್ ಬಟ್ಲರ್ ಅವರನ್ನು ಗಟ್ಟಿಯಾಗಿ ಕ್ರೀಸ್ ನಲ್ಲಿ ನಿಲ್ಲಲು ಬಿಟ್ಟಿದ್ದು ಪಂಜಾಬ್ ತಂಡದ ಮೊದಲ ತಪ್ಪು. ಈ ಇಬ್ಬರೂ ಪಂಜಾಬ್ ತಂಡದ ಬೌಲಿಂಗ್ ದೌರ್ಬಲ್ಯತೆ ಉಪಯೋಗಿಸಿಕೊಂಡು ಹಿಗ್ಗಾಮುಗ್ಗಾ ರನ್ ಬಾರಿಸಿದ್ದಲ್ಲದೆ, ಕೇವಲ 5.5 ಓವರ್ ಗಳಲ್ಲಿ 81 ರನ್ ಜತೆಯಾಟ ನೀಡಿತು.
ಕಷ್ಟಪಟ್ಟು ಆ ಇಬ್ಬರನ್ನೂ ಪೆವಿಲಿಯನ್ ಗೆ ಅಟ್ಟಿದ ಮೇಲಾದರೂ, ಆನಂತರ ಬಂದ ನಿತಿನ್ ರಾಣಾ ಅವರನ್ನು ಕಟ್ಟಿಹಾಕುವಲ್ಲಿ ವಿಫಲವಾದದ್ದು, ಪಂಜಾಬ್ ಬೌಲಿಂಗ್ ಪಡೆಯ ಮತ್ತೊಂದು ಪ್ರಮಾದ. ಕೇವಲ 34 ಎಸೆತಗಳಲ್ಲಿ 7 ಸಿಕ್ಸರ್ ಸಹಿತ 62 ರನ್ ಬಾರಿಸಿದ ರಾಣಾ, ಮುಂಬೈ ತಂಡವನ್ನು ಅಕ್ಷರಶಃ ಗೆಲುವಿನ ಹಾದಿಗೆ ತಂದಿತ್ತರು.

ಕರಾರುವಾಕ್ ಬೌಲಿಂಗ್ ಯಾರಿಂದರೂ ಇಲ್ಲ!

ಕರಾರುವಾಕ್ ಬೌಲಿಂಗ್ ಯಾರಿಂದರೂ ಇಲ್ಲ!

ಮುಂಬೈ ವಿರುದ್ಧ ಪಂಜಾಬ್ ತಂಡದ ಬೌಲಿಂಗ್ ಅಂಕಿ-ಅಂಶಗಳನ್ನು ನೋಡಿದ್ದೀರಾ? ನೋಡಿಲ್ಲವೆಂದರೆ, ನೀವು ಸ್ಕೋರ್ ಕಾರ್ಡ್ ನೋಡಲೇಬೇಕು. ಪಂಜಾಬ್ ಬೌಲಿಂಗ್ ಪಟ್ಟಿಯಲ್ಲಿ ಯಾರೊಬ್ಬರೂ ಎಕಾನಮಿ ಪಾಲಿಸಿಲ್ಲ. ಸಂದೀಪ್ ಶರ್ಮಾ 3 ಓವರ್ ಮಾಡಿ 39 ರನ್ (13 ಎಕಾನಮಿ) ಚಚ್ಚಿಸಿಕೊಂಡರೆ, ಇನ್ನುಳಿದವರಾದ ಇಶಾಂತ್ ಶರ್ಮಾ (4 ಓವರ್, 58 ರನ್, 14.50 ಎಕಾನಮಿ), ಮೋಹಿತ್ ಶರ್ಮಾ (2.3 ಓವರ್, 29 ರನ್,11.60 ಎಕಾನಮಿ ), ಸ್ಟಾಯ್ನಿಸ್ (2 ಓವರ್, 28 ರನ್,14 ಎಕಾನಮಿ), ಅಕ್ಷರ್ ಪಟೇಲ್ (2 ಓವರ್, 20 ರನ್, 10 ಎಕಾನಮಿ), ಸ್ವಪ್ನಿಲ್ ಸಿಂಗ್ (2 ಓವರ್, 22 ರನ್, 11 ಎಕಾನಮಿ) ಚೆನ್ನಾಗಿ ರನ್ ನೀಡಿದ್ದಾರೆ. ಈ ಎಲ್ಲವೂ ಪಂಜಾಬ್ ತಂಡದ ಸೋಲಿಗೆ ಕಾರಣವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Here is the analylis of Kings XI Punjab's debacle against Mumbai Indians and other teams in this year's IPL. Even though the batting line up is good, its bowling department has some problems. This same thing is the main reason for the defeat of Punjab, against Mumbai on April 21, 2017.
Please Wait while comments are loading...