ಆರ್ ಸಿಬಿ ವಿರುದ್ಧ ಪುಣೆ ತಂಡಕ್ಕೆ 27ರನ್ ಗಳ ಅಂತರದ ಜಯ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 16: ಇಂಡಿಯನ್ ಪ್ರೀಮಿಯರ್ ಲೀಗ್ ನ ಮಹತ್ವದ ಪಂದ್ಯದಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು
ಪುಣೆ ತಂಡವನ್ನು 161/8ಸ್ಕೋರಿಗೆ ನಿಯಂತ್ರಿಸಿತು. ಆದರೆ, ರನ್ ಚೇಸ್ ನಲ್ಲಿ 27ರನ್ ಹಿಂದೆ ಬಿದ್ದು ಪಂದ್ಯ ಕಳೆದುಕೊಂಡಿತು. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜಿದ್ದಾಜಿದ್ದಿಯ ಹೋರಾಟದ ಅಪ್ಡೇಟ್ಸ್ ಇಲ್ಲಿದೆ.

ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ

ಆರ್ ಸಿಬಿ ರನ್ ಚೇಸ್ :
* ವಿರಾಟ್ ಕೊಹ್ಲಿ ಹಾಗೂ ಮನ್ದೀಪ್ ಸಿಂಗ್ ರನ್ ಏಸ್ ಆರಂಭಿಸಿದರು.
* ಮನ್ದೀಪ್ ಸಿಂಗ್ ಅವರು ಯಾವುದೇ ರನ್ ಗಳಿಸಿದೆ ಶಾರ್ದೂಲ್ ಠಾಕೂರ್ ಗೆ ವಿಕೆಟ್ ಒಪ್ಪಿಸಿದರು.
* ನಾಯಕ ವಿರಾಟ್ ಕೊಹ್ಲಿ 19 ಎಸೆತಗಳಲ್ಲಿ 28ರನ್(3 ಬೌಂಡರಿ, 1ಸಿಕ್ಸರ್) ಸಿಡಿಸಿ ಬೆನ್ ಸ್ಟೋಕ್ಸ್ ಬೌಲಿಂಗ್ ನಲ್ಲಿ ಅಜಿಂಕ್ಯ ರಹಾನೆಗೆ ಕ್ಯಾಚಿತ್ತು ಪೆವಿಯನ್ ಸೇರಿದರು.
* ಎಬಿ ಡಿವಿಲಿಯರ್ಸ್ 29ರನ್ (30 ಎಸೆತಗಳು) ಹೆಚ್ಚಿನ ಪ್ರಭಾವ ಬೀರಲಿಲ್ಲ.
* ಕೇದಾರ್ ಜಾಧವ್ 22 ಎಸೆತಗಳಲ್ಲಿ ಕೇವಲ 18ರನ್ ಗಳಿಸಿ ಔಟಾದರು.
* 15 ಓವರ್ ಗಳ ನಂತರ ತಂಡದ ಮೊತ್ತ 92/4.
* ಶೇನ್ ವಾಟ್ಸನ್ 14ರನ್ (18ಎಸೆತಗಳು) ಗಳಿಸಿ ಔಟ್.
* ಪುಣೆ ಪರ ಬೆನ್ ಸ್ಟೋಕ್ಸ್, ಶಾರ್ದೂಲ್ 3, ಜಯದೇವ್ 2, ಇಮ್ರಾನ್ ತಲಾ ಒಂದು ವಿಕೆಟ್ ಪಡೆದರು.

ಪುಣೆ : ಮೊದಲ 6 ಓವರ್ ಗಳಲ್ಲಿ 55ರನ್ ಹಾಗೂ10 ಓವರ್ ಗಳಲ್ಲಿ 80/2 ಸ್ಕೋರ್ ಮಾಡಿತು. 15 ಓವರ್ ಗಳಲ್ಲಿ 117/2 ಇದ್ದದ್ದು, 20 ಓವರ್ ಗಳಲ್ಲಿ 1618/8 ಆಯಿತು.
* ಮನೋಜ್ ತಿವಾರಿ 11 ಎಸೆತಗಳಲ್ಲಿ 27ರನ್(3 ಬೌಂಡರಿ, 2ಸಿಕ್ಸರ್) ಬಾರಿಸಿ ತ್ವರಿತಗತಿಯಲ್ಲಿ ಸ್ಕೋರ್ ಮಾಡಿದರು.
* ಧೋನಿ 28 ಹಾಗೂ ಸ್ಮಿತ್ 27ರನ್ ಗಳಿಸಿ ಔಟಾದರು.
* ಧೋನಿ ಹಾಗೂ ಸ್ಮಿತ್ 47 ಎಸೆತಗಳಲ್ಲಿ 54ರನ್ ಜೊತೆಯಾಟ

* ಅಜಿಂಕ್ಯ ರಹಾನೆ 30 (25 ಎಸೆತಗಳು, 5 ಬೌಂಡರಿ) ಹಾಗೂ ರಾಹುಲ್ ತ್ರಿಪಾಠಿ 31 ರನ್ (23 ಎಸೆತಗಳು, 3 ಬೌಂಡರಿ, 1 ಸಿಕ್ಸರ್) ಗಳಿಸಿ ಉತ್ತಮ ಆರಂಭ ಒದಗಿಸಿದರು.[ಐಪಿಎಲ್ 2017: ಅಂಕಪಟ್ಟಿ]
* ತಂಡದ ಮೊತ್ತ 63ರನ್ ಆಗಿದ್ದಾಗ ಬದ್ರಿ ಬೌಲಿಂಗ್ ನಲ್ಲಿ ರಹಾನೆ ಬೋಲ್ಡ್ ಔಟಾದರು. ನೇಗಿ ಬೌಲಿಂಗ್ ನಲ್ಲಿ ತ್ರಿಪಾಠಿ ನೀಡಿದ ಕ್ಯಾಚನ್ನು ಕೊಹ್ಲಿ ಅದ್ಭುತವಾಗಿ ಹಿಡಿದಾಗ ತಂಡದ ಮೊತ್ತ 69ರನ್ ಆಗಿತ್ತು.[ಧೂಳಿಪಟವಾಗುತ್ತವಾ ಆ ಹತ್ತು ದಾಖಲೆಗಳು?]

ತಂಡದಲ್ಲಿ ಬದಲಾವಣೆ : ಆರ್ ಸಿಬಿ ತಂಡದಲ್ಲಿ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ರನ್ನು ಕೂರಿಸಲಾಗಿದ್ದು,ಆಲ್ ರೌಂಡರ್ ಶೇನ್ ವಾಟ್ಸನ್ ತಂಡಕ್ಕೆ ಮರಳಿದ್ದಾರೆ. [ಕೊಹ್ಲಿ vs ಸ್ಮಿತ್ ಪಡೆಗಳ ಹಣಾಹಣಿ, ಗೆದ್ದವರಿಗೆ ಉಳಿಗಾಲ]

ತೈಮುಲ್ ಮಿಲ್ಸ್ ಬದಲಿಗೆ ನ್ಯೂಜಿಲೆಂಡ್ ನ ಆಡಂ ಮಿಲ್ನ್ ಬಂದಿದ್ದಾರೆ. ಪುಣೆ ತಂಡದಲ್ಲಿ ಜಾಯದೇವ್ ಉನದ್ಕತ್ ಹಾಗೂ ಶಾರ್ದೂಲ್ ಠಾಕೂರ್ ಜತೆಗೆ ಆಲ್ ರೌಂಡರ್ ಡೆನಿಯಲ್ ಕ್ರಿಶ್ರಿಯನ್ ತಂಡ ಸೇರಿದ್ದಾರೆ.

Kohli and Smith

ಆರ್ ಸಿಬಿ ತಂಡ XI : ವಿರಾಟ್ ಕೊಹ್ಲಿ, ಮನ್ದೀಪ್ ಸಿಂಗ್, ಎಬಿ ಡಿ ವಿಲಿಯರ್ಸ್, ಕೇದಾರ್ ಜಾಧವ್ (ವಿಕೆಟ್ ಕೀಪರ್), ಸ್ಟುವರ್ಟ್ ಬಿನ್ನಿ, ಶೇನ್ ವಾಟ್ಸನ್, ಎಸ್ ಅರವಿಂದ್, ಯಜುವೇಂದ್ರ ಚಾಹಲ್, ಪವನ್ ನೇಗಿ, ಆಡಂ ಮಿಲ್ನ್, ಸ್ಯಾಮಿಯಲ್ ಬದ್ರಿ.

ಪುಣೆ ತಂಡ : ಅಜಿಂಕ್ಯ ರಹಾನೆ, ರಾಹುಲ್ ತ್ರಿಪಾಠಿ, ಸ್ಟೀವ್ ಸ್ಮಿತ್,ಎಂಎಸ್ ಧೋನಿ(ವಿಕೆಟ್ ಕೀಪರ್), ಮನೋಜ್ ತಿವಾರಿ, ಬೆನ್ ಸ್ಟೋಕ್ಸ್, ಇಮ್ರಾನ್ ತಾಹೀರ್, ಜಯದೇವ್ ಉನದ್ಕತ್,ರಾಹುಲ್ ಚಾಹರ್, ಡೇನಿಯಲ್ ಕ್ರಿಶ್ಚಿಯನ್, ಶಾರ್ದೂಲ್ ಠಾಕೂರ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Royal Challengers Bangalore (RCB) captain Virat Kohli won the toss and decided to field first against Rising Pune Supergiant (RPS) in the match 17 of IPL 2017.
Please Wait while comments are loading...