ಮುಖ್ಯಾಂಶಗಳು : ಪುಣೆ ವಿರುದ್ಧ ಚೇಸಿಂಗ್ ಮರೆತ ಆರ್ ಸಿಬಿ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 17: ಇಂಡಿಯನ್ ಪ್ರೀಮಿಯರ್ ಲೀಗ್ ನ ಮಹತ್ವದ ಪಂದ್ಯದಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲರ್ ಚೆನ್ನಾಗಿ ಆಡಿತು. ಆದರೆ, ರನ್ ಚೇಸ್ ಮಾಡುವುದನ್ನು ಮರೆತಂತೆ ಆಡುವ ಮೂಲಕ ಗೆಲ್ಲುವ ಪಂದ್ಯವನ್ನು ಬಿಟ್ಟುಕೊಟ್ಟಿತು. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊಹ್ಲಿಪಡೆ ಸೋಲಿನ ಮುಖ್ಯಾಂಶಗಳು ಇಲ್ಲಿವೆ.

ಪುಣೆ ತಂಡ ಮೊದಲು ಬ್ಯಾಟಿಂಗ್ ಮಾಡಿ 161/8 ಸ್ಕೋರ್ ಮಾಡಿತು. ಆದರೆ, ರನ್ ಚೇಸ್ ನಲ್ಲಿ 27ರನ್ ಹಿಂದೆ ಬಿದ್ದ ಬೆಂಗಳೂರು ತಂಡ ತನ್ನ ತವರು ನೆಲದಲ್ಲಿ ಮುಗ್ಗರಿಸಿತು.

Pune

* ವಿರಾಟ್ ಕೊಹ್ಲಿ ಹಾಗೂ ಮನ್ದೀಪ್ ಸಿಂಗ್ ರನ್ ಚೇಸ್ ಆರಂಭಿಸಿದರು.
* ಮನ್ದೀಪ್ ಸಿಂಗ್ ಅವರು ಯಾವುದೇ ರನ್ ಗಳಿಸಿದೆ ಶಾರ್ದೂಲ್ ಠಾಕೂರ್ ಗೆ ವಿಕೆಟ್ ಒಪ್ಪಿಸಿದರು.
* ನಾಯಕ ವಿರಾಟ್ ಕೊಹ್ಲಿ 19 ಎಸೆತಗಳಲ್ಲಿ 28ರನ್(3 ಬೌಂಡರಿ, 1ಸಿಕ್ಸರ್) ಸಿಡಿಸಿ ಬೆನ್ ಸ್ಟೋಕ್ಸ್ ಬೌಲಿಂಗ್ ನಲ್ಲಿ ಅಜಿಂಕ್ಯ ರಹಾನೆಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.
* ಎಬಿ ಡಿವಿಲಿಯರ್ಸ್ 29ರನ್ (30 ಎಸೆತಗಳು) ಹೆಚ್ಚಿನ ಪ್ರಭಾವ ಬೀರಲಿಲ್ಲ.
* ಕೇದಾರ್ ಜಾಧವ್ 22 ಎಸೆತಗಳಲ್ಲಿ ಕೇವಲ 18ರನ್ ಗಳಿಸಿ ಔಟಾದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rising Pune Supergiant (RPS) scalped their second win of the tournament as they beat Royal Challengers Bangalore (RCB) by 27 runs in the match 17 of IPL 2017.
Please Wait while comments are loading...