ಐಪಿಎಲ್ : ಗುಜರಾತ್ ವಿರುದ್ಧ ಮುಂಬೈಗೆ 6 ವಿಕೆಟ್ ಗಳ ಜಯ

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 16: ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ ಅವರು ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಮತ್ತೊಮ್ಮೆ ಯಶ ಕಂಡಿದ್ದಾರೆ. ಗುಜರಾತ್ ಲಯನ್ಸ್ ತಂಡವನ್ನು 176/4ಸ್ಕೋರಿಗೆ ನಿಯಂತ್ರಿಸಿದ್ದಲ್ಲದೆ 19.3 ಓವರ್ ಗಳಲ್ಲಿ 177/4 ಸ್ಕೋರ್ ಮಾಡಿ 6ವಿಕೆಟ್ ಗಳ ಜಯ ದಾಖಲಿಸಿದೆ.

ಬ್ಯಾಟಿಂಗ್ ಆರಂಭಿಸಿದ ಸುರೇಶ್ ರೈನಾ ಪಡೆಗೆ ಆರಂಭಿಕ ಆಘಾತ ಉಂಟಾಗಿದ್ದು ಮೊದಲ ಓವರ್ ನಲ್ಲೇ ಆರಂಭಿಕ ಆಟಗಾರ ಡ್ವಾಯ್ನೆ ಸ್ಮಿತ್ ಔಟಾದರು.[ಮುಂಬೈ ಇಂಡಿಯನ್ಸ್ ವೇಳಾಪಟ್ಟಿ]

ನಂತರ ಬ್ರೆಂಡನ್ ಮೆಕಲಮ್ 64, ದಿನೇಶ್ ಕಾರ್ತಿಕ್ 48ರನ್ ಗಳಿಸಿ ತಂಡದ ಮೊತ್ತವನ್ನು 176/4ಕ್ಕೇರಿಸಿದರು. ಮುಂಬೈ ಪರ ಮೆಕ್ಲೆಗನಗ್ 2/24 ಗಳಿಸಿದರು.

ಸತತ ಮೂರು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ವಿರುದ್ಧ ಮೂರು ಪಂದ್ಯಗಳಲ್ಲಿ ಒಂದು ಪಂದ್ಯ ಮಾತ್ರ ಗೆದ್ದಿರುವ ಗುಜರಾತ್ ಸೆಣೆಸುತ್ತಿದೆ.[ಮುಂಬೈ ಇಂಡಿಯನ್ಸ್ ವೇಳಾಪಟ್ಟಿ]

Rohit Sharma

ತಂಡದಲ್ಲಿ ಬದಲಾವಣೆ: ಮುಂಬೈ ತಂಡದಲ್ಲಿ ಟಿಮ್ ಸೌಥಿ ಬದಲಿಗೆ ಲಸಿತ್ ಮಾಲಿಂಗ ಆಡುತ್ತಿದ್ದಾರೆ. ಗುಜರಾತ್ ಟೀಂನಲ್ಲಿ ಅರೋನ್ ಫಿಂಚ್ ಬದಲಿಗೆ ಜಾಸನ್ ರಾಯ್ ಹಾಗೂ ಜಕಾತಿ ಬದಲಿಗೆ ಮುನಾಫ್ ಪಟೇಲ್ ರನ್ನು ಕರೆ ತರಲಾಗಿದೆ.[ಐಪಿಎಲ್ 2017: ಅಂಕಪಟ್ಟಿ]


(ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mumbai Indians (MI) beat Gujarat Lions by wickets. MI scored 177/4 in 19.3 Ovars against Gujarat Lions 176/4 at Wakhande stadium
Please Wait while comments are loading...