ಗುಜರಾತ್ ವಿರುದ್ಧ ಮುಂಬೈ ಗೆಲುವು ಮುಖ್ಯಾಂಶಗಳು

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 16: ಗುಜರಾತ್ ಲಯನ್ಸ್ ತಂಡದ ವಿರುದ್ಧ ಮುಂಬೈ ತಂಡ ಸಾಂಘಿಕ ಹೋರಾಟ ನಡೆಸಿ ಅರ್ಹ ಜಯ ಗಳಿಸಿದೆ. ಸತತ ನಾಲ್ಕನೇ ಪಂದ್ಯವನ್ನು ರೋಹಿತ್ ಪಡೆ ಗೆದ್ದುಕೊಂಡಿದೆ. ಗುಜರಾತ್ ಇಲ್ಲಿ ತನಕ ಒಂದು ಪಂದ್ಯ ಮಾತ್ರ ಗೆದ್ದಿದೆ.

ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ ಅವರು ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಮತ್ತೊಮ್ಮೆ ಯಶ ಕಂಡಿದ್ದಾರೆ. ಗುಜರಾತ್ ಲಯನ್ಸ್ ತಂಡವನ್ನು 176/4ಸ್ಕೋರಿಗೆ ನಿಯಂತ್ರಿಸಿದ್ದಲ್ಲದೆ 19.3 ಓವರ್ ಗಳಲ್ಲಿ 177/4 ಸ್ಕೋರ್ ಮಾಡಿ 6ವಿಕೆಟ್ ಗಳ ಜಯ ದಾಖಲಿಸಿತು.

IPL 2017: Match 16: Highlights: Mumbai Indians Vs Gujarat Lions

ಪಂದ್ಯದ ಮುಖ್ಯಾಂಶಗಳು:
* ಪಂದ್ಯದ ಮೊದಲ ಓವರ್ ನಲ್ಲೇ ಆರಂಭಿಕ ಆಟಗಾರ ಡ್ವಾಯ್ನೆ ಸ್ಮಿತ್ ಔಟಾದರು.
* ಆದರೆ, ಬ್ರೆಂಡನ್ ಮೆಕಲಮ್ ಉತ್ತಮ ಆಟದ ನೆರವಿನಿಂದ ಪವರ್ ಪ್ಲೇ ನಂತರ ಸ್ಕೋರ್ 46/1 ಕ್ಕೇರಿತು.
* * ಬ್ರೆಂಡನ್ ಮೆಕಲಮ್ ಅವರು ಐಪಿಎಲ್ ನಲ್ಲಿ 12ನೇ ಅರ್ಧಶತಕ ಬಾರಿಸಿದರು.
* ಹರ್ಭಜನ್ ಸಿಂಗ್ ಅವರು ಐಪಿಎಲ್ ನಲ್ಲಿ ಪ್ರವೀಣ್ ಕುಮಾರ್ ನಂತರ 1,000 ಡಾಟ್ ಬಾಲ್ ಹಾಕಿದ ಬೌಲರ್ ಎನಿಸಿಕೊಂಡರು.
* 25ರನ್ ಗಳಿಸಿದ ಸುರೇಶ್ ರೈನಾ ಅವರು ಕೊಹ್ಲಿಯನ್ನು ಹಿಂದಿಕ್ಕಿ ಒಟ್ಟಾರೆ ಐಪಿಎಲ್ ನ ಅತಿ ಹೆಚ್ಚು ರನ್ ಗಳಿಕೆ ಬ್ಯಾಟ್ಸ್ ಮನ್ ಎನಿಸಿಕೊಂಡರು. ಹರ್ಭಜನ್ ಗೆ 12ನೇ ಓವರ್ ನಲ್ಲಿ ವಿಕೆಟ್ ನೀಡಿದರು.
* ಬ್ರೆಂಡನ್ ಮೆಕಲಮ್ ಅವರು 14ನೇ ಓವರ್ ನಲ್ಲಿ 64ರನ್ ಗಳಿಸಿ ಲಸಿತ್ ಮಾಲಿಂಗಗೆ ವಿಕೆಟ್ ಒಪ್ಪಿಸಿದರು.
* ರೈನಾ ಹಾಗೂ ಮೆಕಲಮ್ ಎರಡನೇ ವಿಕೆಟ್ ಗೆ 80 ರನ್ ಜೊತೆಯಾಟ ಕಂಡರು.
* ದಿನೇಶ್ ಕಾರ್ತಿಕ್ ಅವರು ಐಪಿಎಲ್ 2017ರ 200ನೇ ಸಿಕ್ಸ್ ಬಾರಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mumbai Indians (MI) picked up their fourth consecutive win by beating Gujarat Lions (GL) by 6 wickets in the match 16 of IPL 2017.
Please Wait while comments are loading...