ಪಂಜಾಬ್ ಸಿಂಹಗಳನ್ನು ಕಟ್ಟಿ ಹಾಕಿದ ಡೆಲ್ಲಿ ಡೆವಿಲ್ಸ್

Posted By:
Subscribe to Oneindia Kannada

ದೆಹಲಿ, ಏಪ್ರಿಲ್ 15: ಸ್ಯಾಮ್ ಬಿಲ್ಲಿಂಗ್ಸ್ (55) ಎರಡನೇ ಆರ್ಧಶತಕ, ಕೋರಿ ಆಂಡರ್ಸನ್ ಅಜೇಯ 39ರನ್ ನೆರವಿನಿಂದ ಪಂಜಾಬ್ ವಿರುದ್ಧ ಡೆಲ್ಲಿ ಡೇರ್ ಡೆವಿಲ್ಸ್ ತಂಡ 188/6 ಸ್ಕೋರ್ ಮಾಡಿದ್ದಲ್ಲದೆ, ಪಂಜಾಬ್ ತಂಡವನ್ನು ಗೆಲುವಿನ ಸಮೀಪ ಸುಳಿಯದಂತೆ ತಡೆಹಿಡಿದು 51ರನ್ ಗಳಿಂದ ಜಯಗಳಿಸಿದೆ.

ಪಂಜಾಬ್ ರನ್ ಚೇಸ್ : 12 ಎಸೆತಗಳಲ್ಲಿ 19ರನ್ ಗಳಿಸಿ ಹಶೀಂ ಆಮ್ಲಾ ಅವರು ಔಟಾದರೆ, ಮನನ್ ವೋರಾ 3ರನ್ ಮಾತ್ರ ಗಳಿಸಿದರು. ಉತ್ತಮ ಆರಂಭ ದೊರೆಯದೆ ಒದ್ದಾಡಿದ ಪಂಜಾಬಿನ ಸಿಂಹಗಳು ನಿಯಮಿತವಾಗಿ ವಿಕೆಟ್ ಕಳೆದುಕೊಂಡು ರನ್ ಚೇಸಿಂಗ್ ನಲ್ಲಿ ಮುಗ್ಗರಿಸಿದರು.[ಐಪಿಎಲ್ 2017: ಅಂಕಪಟ್ಟಿ]

ಇಯಾನ್ ಮಾರ್ಗನ್ 22ರನ್, ಡೇವಿಡ್ ಮಿಲ್ಲರ್ 24ರನ್, ಅಕ್ಷರ್ ಪಟೇಲ್ 29 ಎಸೆತಗಳಲ್ಲಿ 44ರನ್ ಗಳಿಸಿ ಗುರಿ ಮುಟ್ಟಲು ಯತ್ನಿಸಿದರು. ಪಜಾಬ್ ಪರ ನದೀಂ 2 ಓವರ್ ಗಳಲ್ಲಿ 13ರನ್ನಿತ್ತು 2 ವಿಕೆಟ್, ಮೊರಿಸ್ 4 ಓವರ್ ಗಳಲ್ಲಿ 23ರನ್ನಿತ್ತು3 ವಿಕೆಟ್ ಗಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು.[ಐಪಿಎಲ್ 2017 ಸಂಪೂರ್ಣ ವೇಳಾಪಟ್ಟಿ]

IPL 2017: Match 15: Sam Billings guides Delhi Daredevils to 188/6

ಡೆಲ್ಲಿ ಬ್ಯಾಟಿಂಗ್: ಸಂಜು ಸಾಮನ್ಸ್ 19 ರನ್ ಗಳಿಸಿ ಔಟಾದರೆ, ಮತ್ತೊಬ್ಬ ಸ್ಯಾಮ್ ಬಿಲ್ಲಿಂಗ್ಸ್ ಇನ್ನಿಂಗ್ಸ್ ಕಟ್ಟಿದ್ದಲ್ಲದೆ ಭರ್ಜರಿ ಅರ್ಧಶತಕ ಸಿಡಿಸಿದರು. 40 ಎಸೆತಗಳಲ್ಲಿ 9 ಬೌಂಡರಿ ಇದ್ದ 55ರನ್ ಚೆಚ್ಚಿದರು.

ಕರುಣ್ ನಾಯರ್ ಮತ್ತೊಮ್ಮೆ ವಿಫಲರಾಗಿ ಶೂನ್ಯಕ್ಕೆ ಔಟಾದರು. ಶ್ರೇಯಸ್ ಅಯ್ಯರ್ 22, ರಿಷಬ್ ಪಂತ್ 15, ಕ್ರಿಸ್ ಮೊರಿಸ್ 16, ಪ್ಯಾಟ್ ಕಮಿನ್ಸ್ 12 ರನ್ ಗಳಿಸಿ ರನ್ ಗತಿ ಹೆಚ್ಚಿಸಿದರು.

ಕೋರಿ ಆಂಡರ್ಸನ್ 39ರನ್ (22 ಎಸೆತ, 3 ಬೌಂಡರಿ, 3 ಸಿಕ್ಸರ್) ಗಳಿಸಿ ತಂಡದ ಮೊತ್ತವನ್ನು 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 188ಕ್ಕೇರಿಸಿದರು. ಪಂಜಾಬ್ ಪರ ವರುಣ್ ಅರೋನ್ 4 ಓವರ್ ಗಳಲ್ಲಿ 45ರನ್ನಿತ್ತು 2 ವಿಕೆಟ್ ಗಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sam Billings (55) struck his second IPL half-century before Corey Anderson (39 not out) provided late fireworks as Delhi Daredevils posted a respectable 188 for six against Kings XI Punjab here today (April 15).
Please Wait while comments are loading...