ಆರ್ ಸಿಬಿ ವಿರುದ್ಧ 4 ವಿಕೆಟ್ ಗಳ ಜಯ ದಾಖಲಿಸಿದ ಮುಂಬೈ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 14: ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಟಾಸ್ ಗೆದ್ದ ಮುಂಬೈ ನಾಯಕ ರೋಹಿತ್ ಶರ್ಮ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ಫಲ ನೀಡಿತು. ಆರ್ ಸಿಬಿಯನ್ನು ನಿಯಂತ್ರಿಸಿದ್ದಲ್ಲದೆ ಪಂದ್ಯವನ್ನು ಗೆಲ್ಲಲು ಸಾಧ್ಯವಾಯಿತು.

ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ

ಆರ್ ಸಿಬಿ ಪರ ನಾಯಕರಾಗಿ ವಿರಾಟ್ ಕೊಹ್ಲಿ ಕಣಕ್ಕಿಳಿದರೂ ಹೆಚ್ಚಿನ ಮೊತ್ತ ದಾಖಲಿಸಲು ಸಾಧ್ಯವಾಗಲಿಲ್ಲ. ಮುಂಬೈಗೆ 143ರನ್ ಟಾರ್ಗೆಟ್ ನೀಡಲಾಗಿತ್ತು. ಆರಂಭಿಕ ಆಘಾತದ ನಂತರ ಚೇತರಿಕೆ ಕಂಡು 4 ವಿಕೆಟ್ ಗಳ ಜಯ ದಾಖಲಿಸುವಲ್ಲಿ ಮುಂಬೈ ಇಂಡಿಯನ್ಸ್ ಯಶಸ್ವಿಯಾಗಿದೆ.[ಐಪಿಎಲ್ 2017: ಅಂಕಪಟ್ಟಿ]

IPL 2017: Match 12: Mumbai beat RCB by 4 wickets

ರನ್ ಚೇಸ್: ಮುಂಬೈ ಅರಂಭ ಉತ್ತಮವಾಗಿರಲಿಲ್ಲ. ಪಾರ್ಥೀವ್ ಪಟೇಲ್ 3, ಜೋಸ್ ಬಟ್ಲರ್ 2,ರೋಹಿತ್ ಶರ್ಮ 0, ಮಿಚೆಲ್ ಮೆಕ್ಲೆನಗನ್ 0 ಗಳಿಸಿ ಔಟಾದರು. ಆರ್ ಸಿಬಿ ಪರ ಹ್ಯಾಟ್ರಿಕ್ ಸೇರಿದಂತೆ 4 ಓವರ್ ಗಳಲ್ಲಿ ಕೇವಲ 9 ರನ್ ನೀಡಿ 4 ವಿಕೆಟ್ ಕಿತ್ತು, ಆರ್ ಸಿಬಿಗೆ ಗೆಲುವಿನ ಆಸೆ ಹುಟ್ಟಿಸಿದರು.

ನಿತೀಶ್ ರಾಣಾ 11, ಕಿರಾನ್ ಪೊಲ್ಲಾರ್ಡ್ 47 ಎಸೆತಗಳಲ್ಲಿ 70ರನ್ ಗಳಿಸಿ ಗೆಲುವಿನ ಹಂತಕ್ಕೆ ತಂದರು. ನಂತರ ಪಾಂಡ್ಯ ಬ್ರದರ್ಸ್ ಗೆಲುವಿನ ರನ್ ಬಾರಿಸಿ ಹೆಮ್ಮೆಯಿಂದ ಪೆವಿಲಿಯನ್ ಕಡೆ ನಡೆದರು. ಕೃನಾಲ್ ಪಾಂಡ್ಯ 30 ಎಸೆತಗಳಲ್ಲಿ 37ರನ್ ಗಳಿಸಿ ಪೊಲ್ಲಾರ್ಡ್ ಗೆ ಸಾಥ್ ನೀಡಿದ್ದು ಪಂದ್ಯಕ್ಕೆ ತಿರುವು ನೀಡಿತು. [ಮುಂಬೈ ಇಂಡಿಯನ್ಸ್ ವೇಳಾಪಟ್ಟಿ]

ನಾಯಕ ಕೊಹ್ಲಿ 47 ಎಸೆತಗಳಲ್ಲಿ ಆಕರ್ಷಕ62ರನ್ ಗಳಿಸಿದರೆ, ಕ್ರಿಸ್ ಗೇಲ್ 22 ಹಾಗೂ ಎಬಿ ಡಿ ವಿಲಿಯರ್ಸ್ಕೂ 19 ರನ್
ಮಾತ್ರ ಗಳಿಸಿದರು.ಹಾಗೂ ಹೀಗೂ ತಂಡದ ಮೊತ್ತ 5 ವಿಕೆಟ್ ಕಳೆದುಕೊಂಡು 142ಕ್ಕೇರಿತು.

ಬೆಂಗಳೂರು ತಂಡದಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದ್ದು, ಕ್ರಿಸ್ ಗೇಲ್ ಹಾಗೂ ಸ್ಯಾಮುಯಲ್ ಬದ್ರಿ ತಂಡ ಸೇರಿದ್ದಾರೆ. ಶೇನ್ ವಾಟ್ಸನ್ ಈ ಪಂದ್ಯಕ್ಕೆ ಅಲಭ್ಯರಾಗಿದ್ದು, ವಿಷ್ಣು ವಿನೋದ್ ಬದಲಿಗೆ ಕೊಹ್ಲಿ ತಂಡದ ಆರಂಭಿಕ ಅಟಗಾರ, ನಾಯಕರಾಗಿ ಕಣದಲ್ಲಿದ್ದಾರೆ.


ಕ್ರಿಸ್ ಗೇಲ್, ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್ ವಿಕೆಟ್ ಗಳನ್ನು ಕಬಳಿಸಿದ ಮುಂಬೈ ಇಂಡಿಯನ್ಸ್ ಬೌಲರ್ ಗಳು ಬೃಹತ್ ಮೊತ್ತ ಪೇರಿಸದಂತೆ ಕಡಿವಾಣ ಹಾಕಿದ್ದಾರೆ. 2017ರಲ್ಲಿ ಮೊದಲ ಪಂದ್ಯವಾಡಿದ ನಾಯಕ ಕೊಹ್ಲಿ ಅವರು ಅರ್ಧಶತಕ ಗಳಿಸಿ ಔಟಾದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mumbai Indians skipper Rohit Sharma won the toss and elected to bowl against Virat Kohli-led Royal Challengers Bangalore in match 12 of the Indian Premier League (IPL) 2017 here on Friday (April 14).
Please Wait while comments are loading...