ಆರ್ ಸಿಬಿ vs ಮುಂಬೈ : ಕೊಹ್ಲಿ, ಪೊಲ್ಲಾರ್ಡ್ ಆಟ, ಬದ್ರಿ ಬೊಂಬಾಟ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 14: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ ಸಿಬಿ ಹಾಗೂ ಮುಂಬೈ ನಡುವಿನ ಪಂದ್ಯದಲ್ಲಿ ಕೊಹ್ಲಿ ಹಾಗೂ ಪೊಲ್ಲಾರ್ಡ್ ಆಕರ್ಷಕ ಬ್ಯಾಟಿಂಗ್ ಹಾಗೂ ಸ್ಯಾಮುಯಲ್ ಬದ್ರಿ ಹ್ಯಾಟ್ರಿಕ್ ಮುಖ್ಯಾಂಶವಾಗಿತ್ತು.

ಐಪಿಎಲ್ 2017: ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಆರ್ ಸಿಬಿ ಪಡೆ | ಗ್ಯಾಲರಿ

ಆರ್ ಸಿಬಿ ಒಡ್ಡಿದ್ದ 143ರನ್ ಗುರಿಯನ್ನು ಪೊಲ್ಲಾರ್ಡ್ ಅವರ ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ಸುಲಭವಾಗಿ ಸಾಧಿಸಿತು. ಕೃನಾಲ್ ಪಾಂಡ್ಯ ಹಾಗೂ ಕಿರಾನ್ ಪೊಲ್ಲಾರ್ಡ್ ನಡುವಿನ 93ರನ್ ಗಳ ಜೊತೆಯಾಟ ಪಂದ್ಯದಲ್ಲಿ ನಿರ್ಣಾಯಕವಾಯಿತು.[ಅಂಕಪಟ್ಟಿ]

ರನ್ ಚೇಸ್ ಮಾಡಲು ಹೊರಟ ಮುಂಬೈ ಇಂಡಿಯನ್ಸ್ ತಂಡಕ್ಕೆ ಸ್ಯಾಮುಯಲ್ ಬದ್ರಿ ಮಾರಕವಾದರು. ಹ್ಯಾಟ್ರಿಕ್ ಸೇರಿದಂತೆ ನಾಲ್ಕು ವಿಕೆಟ್ ಕಬಳಿಸಿದರು. ಬಹುಬೇಗ ಪ್ರಮುಖ ವಿಕೆಟ್ ಗಳನ್ನು ಕಳೆದು ಕೊಂಡರೂ, ಮುಂಬೈ ಇಂಡಿಯನ್ಸ್ ಧೃತಿಗೆಡದೆ ಗುರಿಯನ್ನು ಮುಟ್ಟಿ, ಅರ್ಹ ಜಯ ದಾಖಲಿಸಿದೆ.[ಸ್ಕೋರ್ ಕಾರ್ಡ್]

ಸ್ಯಾಮುಯಲ್ ಬದ್ರಿ

ಸ್ಯಾಮುಯಲ್ ಬದ್ರಿ

ಸ್ಯಾಮುಯಲ್ ಬದ್ರಿ ಅವರು ಈ ಐಪಿಎಲ್ ನ ಮೊದಲ ಹ್ಯಾಟ್ರಿಕ್ ಸಾಧಿಸಿದರು. ಪಾರ್ಥೀವ್ ಪಟೇಲ್, ಮಿಚೆಲ್ ಮೆಕ್ಲೆನಗನ್ ಹಾಗೂ ರೋಹಿತ್ ಶರ್ಮ ವಿಕೆಟ್ ಕಿತ್ತರು.
* ಆರ್ ಸಿಬಿ ಪರ ಮೊದಲ ಪಂದ್ಯವಾಡಿದ ಬದ್ರಿ, ಹ್ಯಾಟ್ರಿಕ್ ಸಿದಂತೆ 4-1-9-4 ಗಳಿಸಿದರು.
* 10ರನ್ ಗಳಿಗಿಂತ ಕಡಿಮೆ ಮೊತ್ತಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡ ಬಳಿಕವೂ ತಂಡವೊಂದು ಪಂದ್ಯ ಗೆದ್ದಿದ್ದು ಇದೇ ಮೊದಲು.

ರೋಹಿತ್ ಶರ್ಮ

ರೋಹಿತ್ ಶರ್ಮ

* ಐಪಿಎಲ್ 2017ರಲ್ಲಿ ಮೂರನೆ ಬಾರಿ ರೋಹಿತ್ ಶರ್ಮ ಅವರು ಸ್ಪಿನ್ನರ್ ಗೆ ವಿಕೆಟ್ ಒಪ್ಪಿಸಿದ್ದಾರೆ.
* ರೋಹಿತ್ ಶರ್ಮ ಅವರು ಹಿಡಿದ ಅದ್ಭುತ ಕ್ಯಾಚಿಗೆ ಎಬಿ ಡಿ ವಿಲಿಯರ್ಸ್ ಬಲಿಯಾದರು.
* ಮುಂಬೈ ಇಂಡಿಯನ್ಸ್ ತಂಡ ಸತತ ಮೂರನೇ ಜಯ ದಾಖಲಿಸಿತು.

ಪೊಲ್ಲಾರ್ಡ್ ಪಾಂಡೆ ಜೊತೆಯಾಟ

ಪೊಲ್ಲಾರ್ಡ್ ಪಾಂಡೆ ಜೊತೆಯಾಟ

* ಕಿರಾನ್ ಪೊಲ್ಲಾರ್ಡ್ ಹಾಗೂ ಕೃನಾಲ್ ಪಾಂಡ್ಯ ನಡುವಿನ 93ರನ್ ಜೊತೆಯಾಟ ಪಂದ್ಯದಲ್ಲಿ ನಿರ್ಣಾಯಕವಾಯಿತು.
* ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬೈ 12 ಬಾರಿ, ಆರ್ ಸಿಬಿ 8 ಬಾರಿ ಜಯ ಗಳಿಸಿದೆ.
* ಕೊನೆ ಐದು ಓವರ್ ಗಳಲ್ಲಿ ಒಂದು ಬೌಂಡರಿ ಇಲ್ಲದೆ 31ರನ್ ಮಾತ್ರ ಆರ್ ಸಿಬಿ ಗಳಿಸಿತು.

ಕೊಹ್ಲಿ ಅರ್ಧಶತಕ

ಕೊಹ್ಲಿ ಅರ್ಧಶತಕ

* ವಿರಾಟ್ ಕೊಹ್ಲಿ ಮೊದಲ ಬಾರಿಗೆ ಐಪಿಎಲ್ 2017ರಲ್ಲಿ ಕಣಕ್ಕಿಳಿದು 47 ಎಸೆತಗಳಲ್ಲಿ 62ರನ್ ಚೆಚ್ಚಿದರು,
* ಐಪಿಎಲ್ 10ರಲ್ಲಿ ಮೊದಲ ಅರ್ಧಶತಕ ಬಾರಿಸಿದ ಕೊಹ್ಲಿ,5 ಬೌಂಡರಿ,2 ಸಿಕ್ಸರ್ ಸಿಡಿಸಿದರು.
* ಕಳೆದ ಪಂದ್ಯದಿಂದ ಹೊರಗುಳಿದಿದ್ದ ಕ್ರಿಸ್ ಗೇಲ್ ಈ ಪಂದ್ಯದಲ್ಲಿ 22ರನ್ ಗಳಿಸಿ ಹಾರ್ದಿಕ್ ಪಾಂಡ್ಯ ಅವರಿಗೆ ವಿಕೆಟ್ ಒಪ್ಪಿಸಿದರು.
* ವಿರಾಟ್ ಕೊಹ್ಲಿ ಅವರ ವಿಕೆಟ್ ಮೆಕ್ಲೆನಗನ್ ಅವರ ಪಾಲಾಯಿತು. 16ನೇ ಓವರ್ ನಲ್ಲಿ ಜೋಸ್ ಬಟ್ಲರ್ ಗೆ ಕೊಹ್ಲಿ ಕ್ಯಾಚಿತ್ತರು.

ಮುಂಬೈಗೆ ಗೆಲುವು

ಮುಂಬೈಗೆ ಗೆಲುವು

* 143ರನ್ ಟಾರ್ಗೆಟ್ ಬೆನ್ನು ಹತ್ತಿದ ಮುಂಬೈಗೆ ಸ್ಯಾಮುಯಲ್ ಬದ್ರಿ ಮೊದಲ ಓವರ್ ಎದುರಿಸಬೇಕಾಯಿತು.
* ಪಂದ್ಯದ ಎರಡನೇ ಓವರ್ ನಲ್ಲೇ ಸ್ಟುವರ್ಟ್ ಬಿನ್ನಿ ಅವರು ಮೊದಲ ಯಶ ಗಳಿಸಿದರು. ಜೋಶ್ ಬಟ್ಲರ್ ವಿಕೆಟ್ ಪತನವಾಯಿತು.

* ಸ್ಯಾಮುಯಲ್ ಬದ್ರಿ ಅವರು ಈ ಐಪಿಎಲ್ ನ ಮೊದಲ ಹ್ಯಾಟ್ರಿಕ್ ಸಾಧಿಸಿದರು. ಪಾರ್ಥೀವ್ ಪಟೇಲ್, ಮಿಚೆಲ್ ಮೆಕ್ಲೆನಗನ್ ಹಾಗೂ ರೋಹಿತ್ ಶರ್ಮ ವಿಕೆಟ್ ಕಿತ್ತರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A gritty 93-run partnership between Kieron Pollard and Krunal Pandya helped Mumbai Indians pull off a sensational 4-wicket win against Royal Challengers Bangalore in match 12 of the Indian Premier League (IPL) 2017 on Friday (April 14).
Please Wait while comments are loading...