ಹೈದರಾಬಾದ್ ಗರ್ವಭಂಗ ಮಾಡಿದ ಮುಂಬೈ ಇಂಡಿಯನ್ಸ್

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 12: ಐಪಿಎಲ್ 10ರ 10ನೇ ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು 158/8 ಸ್ಕೋರಿಗೆ ಮುಂಬೈ ಇಂಡಿಯನ್ಸ್ ನಿಯಂತ್ರಿಸಿ, ಗುರಿಯನ್ನು 18.4 ಓವರ್ ಗಳಲ್ಲಿ ತಲುಪಿ ಅರ್ಹ ಜಯ ದಾಖಲಿಸಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಹೈದರಾಬಾದ್ ತಂಡದ ಗರ್ವವನ್ನು ಮುಂಬೈ ಮುರಿದಿದೆ. [ಅಂಕಪಟ್ಟಿ]

ಮುಂಬೈ ಪರ ರನ್ ಚೇಸ್ ನಲ್ಲಿಎಡಗೈ ಆರಂಭಿಕ ಬ್ಯಾಟ್ಸ್ ಮನ್ ಪಾರ್ಥೀವ್ ಪಟೇಲ್ 39 ರನ್(24 ಎಸೆತ, 7 ಬೌಂಡರಿ), ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳಾದ ನಿತೀಶ್ ರಾಣಾ 45 ರನ್(36 ಎಸೆತ, 3 ಬೌಂಡರಿ, 2 ಸಿಕ್ಸರ್) ಹಾಗೂ ಕೃನಾಲ್ ಪಾಂಡ್ಯ 37 ರನ್(20 ಎಸೆತ, 3 ಬೌಂಡರಿ, 3 ಸಿಕ್ಸರ್) ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಮುಂಬೈ ಜಯ ದಾಖಲಿಸಿತು.[ಸ್ಕೋರ್ ಕಾರ್ಡ್ ನೋಡಿ]

IPL 2017: Match 10: Mumbai restrict Hyderabad to 158/8, need 159 to win

ಹೈದರಾಬಾದ್ ಇನ್ನಿಂಗ್ಸ್ : ನಾಯಕ ಡೇವಿಡ್ ವಾರ್ನರ್ 49 ಹಾಗೂ ಶಿಖರ್ ಧವನ್ 48 ರನ್ ಉತ್ತಮ ಆರಂಭ ನೀಡಿದರೂ ಲಾಭ ಪಡೆದ ಕಾರಣ ಹೈದರಾಬಾದ್ ಉತ್ತಮ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ.

10.2 ಓವರ್ ಗಳಲ್ಲಿ 81 ರನ್ ಗಳಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು. ಮಧ್ಯಮ ಕ್ರಮಾಂಕದಲ್ಲಿ ಕಟಿಂಗ್ 20 ರನ್ 10 ಎಸೆತ, 4 ಬೌಂಡರಿ ಬಾರಿಸಿದ್ದು ಬಿಟ್ಟರೆ ಯುವರಾಜ್ ಸೇರಿದಂತೆ ಮಿಕ್ಕವರು ಎರಡಂಕಿ ದಾಟದೆ ಪೆವಿಲಿಯನ್ ಸೇರಿದರು.

ತಂಡದ ಬದಲಾವಣೆ: ಮುಂಬೈ ಕಳೆದ ಪಂದ್ಯದಲ್ಲಿ ಆಡಿದ ತಂಡವನ್ನೇ ಕಣಕ್ಕಿಳಿಸಿತ್ತು. ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಮೊಯಿಸ್ ಹೆನ್ರಿಕ್ಯೂಸ್ ಅನಾರೋಗ್ಯದಿಂದ ಪಂದ್ಯದಿಂದ ಹೊರಗುಳಿದಿದ್ದು, ಬಾಂಗ್ಲಾದ ವೇಗಿ ಮುಸ್ತಫಿಝುರ್ ರೆಹ್ಮಾನ್ ಆಡಿದರು. ಬಿಪುಲ್ ಶರ್ಮ ಬದಲಿಗೆ ವಿಜಯ್ ಶಂಕರ್ ಆಡಿದರು.(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mumbai Indians captain Rohit Sharma won the toss and elected to bowl against Sunrisers Hyderabad in the match 10 of the Indian Premier League (IPL) 2017, here on Wednesday (April 12).
Please Wait while comments are loading...